ತಾಳಿಕೋಟೆ : ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟಅವಧಿ ಧರಣಿ ಸತ್ಯಾಗ್ರಹವು ಶನಿವಾರ ಐದನೇ ದಿನದ ಸತ್ಯಾಗ್ರಹವು ತಾಳಿಕೋಟಿಯ ರಾಜವಾಡೆಯ ಎಲ್ಲಾ ಸಮಾಜದ ವತಿಯಿಂದ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲಿಸಿ ಸತ್ಯಾಗ್ರಹ ನಡೆಸಿದರು.

ಹೋರಾಟ ಸಮಿತಿಯ ಅಧ್ಯಕ್ಷರಾದ ದಶರಥಸಿಂಗ್ ಮನಗೂಳಿ ಮಾತನಾಡಿ ಈಗಾಗಲೇ ಪ್ರಜಾಸೌಧಕ್ಕೆ ನಿಗದಿ ಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ನಾಲ್ಕೈದು ಕೀ ಮೀ ದೂರವಿದ್ದು ಕಾರಣ ವೃದ್ಧರಿಗೆ, ಮಹಿಳಿಯರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ರೈತಾಪಿ ಜನರಿಗೆ ತುಂಬಾ ಅನಾನುಕೂಲ ವಾಗಿರುವುದರಿಂದ ಪಟ್ಟಣದಲ್ಲಿಯೇ ಸಾಕಷ್ಟು ಸರ್ಕಾರಿ ಜಮೀನುಗಳು ಇದ್ದು ಅವುಗಳಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಹಾಗೂ ಈಗ ನಿಗದಿ ಪಡಿಸಿರುವ ಸ್ಥಳ ಕೂಡಲೇ ರದ್ದು ಪಡಿಸಬೇಕು. ನ್ಯಾಯ ಸಿಗುವವರೆಗೂ ಈ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ರಾಜವಾಡೆಯ ಹಿರಿಯರಾದ ಸಿದ್ದನಗೌಡ ಸಂಗನಗೌಡ ಪಾಟೀಲ, ಬಸನಗೌಡ ಗೌಡಪ್ಪಗೌಡ ಪಾಟೀಲ ಬಸವರಾಜ ಆದಪ್ಪ ಕಶೆಟ್ಟಿ, ಅಂಬಾಜಿ ಜಾದವ, ಶರಣಗೌಡ ಗೊಟಗುಣಕಿ ಲಂಕೇಶ್ ಪಾಟೀಲ, ಶಿವಾಜಿ ಶೆವಳಕರ, ರಾಘು ಮಾನೆ, ಬಮ್ಮು ಸುರಪುರ, ಕಸ್ತೂರಿಚಂದ ಪ್ರಥಮಶೇಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚಬಾಳ)ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ಮಸೂಮಸಾಬ್ ಕೆಂಬಾವಿ. ಮೆಹೆಬೂಬ ಚೋರಗಸ್ತಿ , ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಪ್ರಕಾಶ ಹಜೇರಿ, ಮುದಕಪ್ಪ ಬಡಿಗೇರ,, ಮಹೇಶ್ ಚಲವಾದಿ, ಮುಸ್ತಫ ಚೌದರಿ, ಅಮಿತ್ ಮನಗೂಳಿ, ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ತಿಪ್ಪಣ್ಣ ಸಜ್ಜನ್, ಸುರೇಶ್ ಹಜೇರಿ, ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ಸದ್ದಾಮ್ ಹುಸೇನ್ ಬೀಳಗಿ, ರಾಜು ಹಜೇರಿ, ಮಾನಸಿಂಗ್ ಕೊಕಟನೂರ, ನಿಂಗನಗೌಡ ದೇಸಾಯಿ ಕೆಸರ್ ಸಿಂಗ್ ಹಜೇರಿ, ಪ್ರಸಾದ್ ತಿವಾರಿ, ನಿತಿನ್ ವಿಜಾಪುರ, ಸಿರಸಕುಮಾರ್ ಹಜೇರಿ, ಚಂದ್ರು ಯಮನಪ್ಪ ಗುರುಗುಂಡಗಿ ರಾಜು ದೇಗಿನಾಳ, ಹನುಮಾನ್ ಸಿಂಗ್ ದೇವಿ, ಮಲ್ಲಿಕಾರ್ಜುನ್ ಮದರಿ, ಚೆನ್ನಪ್ಪ ದೇಸಾಯಿ ಹಾಗೂ ಪಟ್ಟಣದ ಎಲ್ಲಾ ಸಮಾಜದ ಗುರುಹಿರಿಯರು ಹಾಜರಿದ್ದರು.
