ನಾಗಕುಂಡ ಬಾವಿ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣೆ

ವಿಜಯ ಸಿಂಧೂರ

ಗಜೇಂದ್ರಗಡ:ಚಾಲುಕ್ಯರ ಕಾಲದ ಇತಿಹಾಸ ಪ್ರಸಿದ್ಧ ನಾಗಕುಂಡ ಬಾವಿಯು ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಗ್ರಾಮೀಣ ಜೀವನದ ಆಳವಾದ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ,ಸೂಡಿಯ ಐತಿಹಾಸಿಕ ಹಿನ್ನೆಲೆ ನಮ್ಮ ಭಾಗದ ಹೆಮ್ಮೆ ಅದನ್ನು ಉಳಿಸಿ,ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಕೆ. ಪಾಟೀಲ್ ಹೇಳಿದರು.

ತಾಲೂಕಿನ ಸೂಡಿ ಗ್ರಾಮದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಪ್ರವಾಸೋದ್ಯಮ ಇಲಾಖೆ ಹಾಗೂ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಂಯುಕ್ತವಾಗಿ ಕೈಗೊಂಡ ನಾಗಕುಂಡ ಬಾವಿಯ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣೆ ಮಾಡಿ ಮಾತನಾಡಿದರು ವರ್ಷಗಳ ನಿರ್ಲಕ್ಷ್ಯದಿಂದ ಹಾನಿಗೊಳಗಾಗಿತ್ತು. ಈ ಹಿನ್ನೆಲೆದಲ್ಲಿ ಸಂಬಂಧಿತ ಇಲಾಖೆಗಳು ಹಾಗೂ ಸಂಸ್ಥೆಗಳು ಸೇರಿ ಬಾವಿಯ ಮೂಲ ರೂಪವನ್ನು ಉಳಿಸಿಕೊಂಡು ಅದನ್ನು ಪುನರುಜ್ಜೀವನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಂಡಿದ್ದವು ಹಾಗೂ ಬಾವಿಯ ಸ್ವಚ್ಛತೆ, ರಚನಾತ್ಮಕ ಬಲವರ್ಧನೆ, ಸುತ್ತಮುತ್ತಲಿನ ಪ್ರದೇಶದ ಸುಂದರೀಕರಣ ಹಾಗೂ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಕಾಮಗಾರಿಯಿಂದಾಗಿ ನಾಗಕುಂಡ ಬಾವಿ ಮತ್ತೊಮ್ಮೆ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪರಂಪರಾ ತಾಣವಾಗಿ ರೂಪುಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಜಿ ಎಸ್ ಪಾಟೀಲ್ ಮಾತನಾಡಿ ಪರಂಪರಾ ತಾಣಗಳ ಸಂರಕ್ಷಣೆ ನಮ್ಮ ಸಂಸ್ಕೃತಿಯ ಉಳಿವಿಗೆ ಅತ್ಯಂತ ಅಗತ್ಯ ಇಂತಹ ಯೋಜನೆಗಳು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತವೆ ಆಧುನೀಕರಣ ಮತ್ತು ನಗರೀಕರಣದ ನಡುವೆಯೂ, ಪರಂಪರಾ ತಾಣಗಳ ಸಂರಕ್ಷಣೆ ಅತ್ಯಂತ ಪ್ರಮುಖ ವಿಷಯವಾಗಿದೆ “ಪರಂಪರಾ ತಾಣಗಳು ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಸಾಕ್ಷಿಗಳಾಗಿವೆ. ಇವುಗಳನ್ನು ಸಂರಕ್ಷಿಸುವುದು ನಮ್ಮ ಮುಂದಿನ ಪೀಳಿಗೆಗಳಿಗೆ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸುತ್ತದೆ.

ತಾಲೂಕಿನ ಗಜೇಂದ್ರಗಡ, ಇಟಗಿ,ಸವಡಿ,ಸೂಡಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಕಟ್ಟಡಗಳು, ದೇವಾಲಯಗಳು, ಸ್ಮಾರಕಗಳು ಮತ್ತು ಪಾರಂಪರಿಕ ಸ್ಥಳಗಳು ಕಾಲಕ್ರಮೇಣ ನಾಶವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು. ಸರ್ಕಾರ ಹಾಗೂ ಸಾರ್ವಜನಿಕರು ಒಂದಾಗಿ ಈ ತಾಣಗಳ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದರು.

ಸೂಡಿ ಉತ್ಸವವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯೋದು ಬೇಡ ಪ್ರವಾಸೋದ್ಯಮ ಇಲಾಖೆಯಿಂದ ಈ ಸೂಡಿ ಉತ್ಸವ ನಡೆಯಲ್ಲಿ, ಅಂದಾಗ ಈ ಭಾಗದ ಜನರ, ಜನಪ್ರತಿನಿಧಿಗಳ ಹಲವು ದಶಕಗಳ ಬೇಡಿಕೆ ಈಡೇರಿಸಿದಂತಾಗುತ್ತದೆ.ಎಂದು ಶಾಸಕ ಜಿ ಎಸ್ ಪಾಟೀಲ್ ಹೇಳಿದರು

ಈ ಸಂದರ್ಭದಲ್ಲಿ ಶ್ರೀ ಸಿ. ಎನ್. ಶ್ರೀಧರ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಗದಗ,ಶ್ರೀಮತಿ ರಾಜಶ್ರೀ ಪಿನ್ನಮನೇನಿ, ಡಾ. ದೇವಿನೇನಿ ಸುಬ್ಬರಾವ್‌, ಬಿ. ವಿ. ಪಾಪಾರಾವ್,ಶ್ರೀ ವೀರಣ್ಣ ಶೆಟ್ಟರ, ಮಿಥುನ್ ಪಾಟೀಲ,ಮಲ್ಲಿಕಾರ್ಜುನ ಬಿದರೂರ. ಸಂಗಮೇಶ ಅಬ್ಬಿಗೇರಿ, ಸಿದ್ದಣ್ಣ ಬಂಡಿ,ಅನ್ವರಸಾಬ ಇಟಗಿ, ಶಶಿಧರ ವಕ್ಕಲರ, ಬಸವರಾಜ ಶಿರೋಳ, ಬಸವರಾಜ ಕಡಬಿನ, ರಾಘವೇಂದ್ರ ಕುಲಕರ್ಣಿ, ಬಸವರಾಜ ನವಲಗುಂದ, ಶರೀಫ್ ಡಾಲಾಯತ,ಚಂದ್ರಶೇಖರ ಕಂದಕೂರ, ಸಿಪಿಐ ವಿಜಯಕುಮಾರ ನಾಯಕ, ಪಿಎಸ್ಐ ಪ್ರಕಾಶ್ ಡಿ ಸೇರಿದಂತೆ ಅನೇಕರು ಇದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!