ರಾಮನ ಮೂರ್ತಿ ಭವ್ಯ ಮೆರವಣಿಗೆ

ತಾಳಿಕೋಟೆ : ಪಟ್ಟಣದಲ್ಲಿ ರಾಮ ನವಮಿ ಉತ್ಸವ ಸಮಿತಿ ನೇತೃತ್ವದಲ್ಲಿ ಸೋಮವಾರ ಸಂಜೆ ಶ್ರೀ ರಾಮನ ಪ್ರತಿಮೆಯ ಭವ್ಯ ಶೋಭಾಯಾತ್ರೆ ನಡೆಯಿತು. ಜೈ ಶ್ರೀರಾಮ…ಜೈ ಶ್ರೀರಾಮ ಎಂಬ ಭಕ್ತರ ಘೋಷಣೆಗಳು ಮುಗಿಲುಮುಟ್ಟಿದವು. ಪರಮ ಪೂಜ್ಯರಾದ ಸಿದ್ದಲಿಂಗ ದೇವರು, ಗುರುಲಿಂಗ ಶ್ರೀಗಳು, ಸೋಮಲಿಂಗ ಶ್ರೀಗಳು ಹಾಗೂ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಶ್ರೀರಾಮ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು.

ಪಟ್ಟಣದ ಮಹಾರಾಣಾ ಪ್ರತಾಪ್ ಸಿಂಹ ವೃತ್ತದಿಂದ ಆರಂಭವಾದ ಭವ್ಯ ಶೋಭಾ ಯಾತ್ರೆಯು ಛತ್ರಪತಿ ಶಿವಾಜಿ ವೃತ್ತ, ಕತ್ರಿ ಬಜಾರ್ ಮಾರ್ಗವಾಗಿ ಶ್ರೀ ಅಂಬಾಭವಾನಿ ಮಂದಿರದ ರಸ್ತೆ, ಡಾ.ಬಿ ಆರ್ ಅಂಬೇಡ್ಕರ್ ವೃತ್ತದ ಮೂಲಕ ಶ್ರೀ ಬಸವೇಶ್ವರ ವೃತ್ತಕ್ಕೆ ತಲುಪಿ ಮುಕ್ತಾಯವಾಯಿತು. ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ ಸಾವಿರಾರು ರಾಮ ಭಕ್ತರು ಜೈ ಶ್ರೀರಾಮ ಎಂದು ಭಕ್ತಿ ಭಾವದ ಜಯಘೋಷ ಮೊಳಗಿಸುತ್ತ ಭಗವಾ ಧ್ವಜ ಹಿಡಿದು ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಪುರಸಭೆ ಮಾಜಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಶ್ರೀರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಅಮೀತಸಿಂಗ್ ಮನಗೂಳಿ, ಉಪಾಧ್ಯಕ್ಷ ಸೂರಜ ಹಜೇರಿ, ಪುರಸಭೆ ಮಾಜಿ ಸದಸ್ಯ ಸುರೇಶ್ ಹಜೇರಿ, ಸಾಮಾಜಿಕ ಕಾರ್ಯಕರ್ತ ಸಿರಸಕುಮಾರ ಹಜೇರಿ, ಶ್ರೀರಾಮ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಗೋವಿಂದಸಿಂಗ್ ಹಜೇರಿ, ಸುಧೀರ ತಿವಾರಿ,ರಾಘು ಹಜೇರಿ, ವಿಠ್ಠಲಸಿಂಗ್ ಹಜೇರಿ, ನಿತಿನ್ ವಿಜಾಪುರ,ರಾಜು ಹಜೇರಿ, ಚಂದ್ರು ರಜಪೂತ ಹಾಗೂ ಸರ್ವ ಸಮಾಜದ ಗಣ್ಯರು ಹಾಗೂ ಯುವಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!