ವಿಜಯ ಸಿಂಧೂರ, ಗಜೇಂದ್ರಗಡ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಾಧಕ ಪತ್ರಕರ್ತರಿಗೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ವಿಜಯ ವಾಣಿ’ ಪತ್ರಿಕೆಯ ಗದಗ ಜಿಲ್ಲಾ ವರದಿಗಾರ ಶಿವಾನಂದ ಹಿರೇಮಠ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಟಿ.ಕೆ. ಮಲಗೊಂಡ ತನಿಖಾ ವರದಿ ಪ್ರಶಸ್ತಿಗೆ ಹಿರಿಯ ವರದಿಗಾರರಾದ ಶಿವಾನಂದ ಹಿರೇಮಠ ಭಾಜನರಾಗಿದ್ದಾರೆ. ಇದೇ ಏಪ್ರಿಲ್ 11 ಮತ್ತು 12 ರಂದು ಬೀದರನಲ್ಲಿ ಜರಗುವ 40 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಬಾಜನರಾದ ಶಿವಾನಂದ ಹಿರೇಮಠ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ನಿಂಗರಾಜ ಬೇವಿನಕಟ್ಟಿ, ಯಲ್ಲಪ್ಪ ತಳವಾರ, ಶಿವಕುಮಾರ ಶಶಿಮಠ ಸೇರಿದಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾರ್ಯಕಾರಿ ಮಂಡಳಿ ಹಾಗೂ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.
