ತಾಳಿಕೋಟೆ : ಸಮಾಜವನ್ನು ಆಧ್ಯಾತ್ಮಿಕವಾಗಿ ಸಂಸ್ಕರಿಸಲು ಈ ಜಗತ್ತಿಗೆ ಬಂದು ಎಲ್ಲಾ ದಾರ್ಶನಿಕರು ಸಂತ ಶರಣ ಶರಣೇಯರು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ ಅವರ ಬದುಕಿನ ಆದರ್ಶಗಳು ನಮಗೆಲ್ಲರಿಗೂ ಮಾದರಿಯಾಗಬೇಕಾಗಿದೆ ಎಂದು ನಾವದಗಿ ಬ್ರಹನ್ಮಠದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಪೂಜ್ಯರ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಪುರಾಣ ಕಾರ್ಯಕ್ರಮದಲ್ಲಿ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಹಾ ಶಿವಶರಣೆ ದಾನಮ್ಮದೇವಿಯ ವಿವಾಹವು ಸಂಗ ಗ್ರಾಮದ ಪರಮಶಿವ ಭಕ್ತ ಸಂಗಮನಾಥನೊಂದಿಗೆ ನೆರವೇರಿತು ಇವರು ಪತ್ನಿ ದಾನಮ್ಮ ದೇವಿಯ ಎಲ್ಲ ಧರ್ಮಕಾರ್ಯಗಳಲ್ಲಿ ಜೀವನದುದ್ದಕ್ಕೂ ಜೊತೆಯಾಗಿ ನಿಂತರು.ಇಂಥಹ ಮಹಾನ್ ಶಿವಶರಣೇಯ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವ ಅವಕಾಶ ನಿಮಗೆಲ್ಲರಿಗೂ ಸಿಕ್ಕಿರುವುದು ಪೂರ್ವ ಜನುಮದ ಪುಣ್ಯದ ಫಲವಾಗಿದೆ ನಮ್ಮ ತಾಯಂದಿರು ದಾನಮ್ಮ ತಾಯಿಯ ಸದ್ಗುಣಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ದಾನಮ್ಮ ದೇವಿಯ ವಿವಾಹವನ್ನು ಶಾಸ್ತ್ರೋತ್ರವಾಗಿ ನೆರವೇರಿಸಲಾಯಿತು. ವೇದಿಕೆಯಲ್ಲಿ ಮಿಣಜಗಿ ಗ್ರಾಮದ ವೇ.ಮೂ.ಡಾ. ಸೋಮಶೇಖರಯ್ಯ ಹಿರೇಮಠ, ಸಾಹಿತಿ ಬಸವರಾಜ ಗೊರಜಿ,ಪುರಾಣಿಕ ವೇ.ಮೂ.ರಾಚಯ್ಯ ಹಿರೇಮಠ ಹಾಗೂ ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ವರದಿ:ರಾಜೇಶ ಇನಾಮದಾರ
