ಮಾರುತೇಶ್ವರ ದರ್ಶನ ಪಡೆದ ಶಾಸಕ ನಾಡಗೌಡ

ತಾಳಿಕೋಟೆ : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಹೊಸಳ್ಳಿ ಗ್ರಾಮದ ಶ್ರೀ ಮಾರುತೇಶ್ವರ ನೂತನ ಮಂದಿರಕ್ಕೆ ಭೇಟಿ ನೀಡಿದರು.

ತಾಳಿಕೋಟಿ ತಾಲೂಕಿನ ಸುಕ್ಷೇತ್ರ ಹೊಸಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಲೋಕಾರ್ಪಣೆಗೊಂಡಿರುವ ಶ್ರೀ ಮಾರುತೇಶ್ವರರ ನೂತನ ಮಂದಿರಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಶಾಸಕ ಅಪ್ಪಾಜಿ ನಾಡಗೌಡರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಮಾರುತೇಶ್ವರರ ನೂತನ ಮಂದಿರವನ್ನು ನಿರ್ಮಾಣ ಮಾಡಿ ಉಜ್ಜಯಿನಿ ಜಗದ್ಗುರುಗಳಿಂದ ಇದನ್ನು ಲೋಕಾರ್ಪಣೆ ಗೊಳಿಸಿರುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ ಈ ಕಾರ್ಯಕ್ರಮದಲ್ಲಿ ನನಗೂ ಭಾಗವಹಿಸಬೇಕಾಗಿತ್ತು ಉಪಚುನಾವಣೆಯ ಕೆಲಸಗಳ ಒತ್ತಡದಿಂದಾಗಿ ಬರಲು ಸಾಧ್ಯವಾಗಲಿಲ್ಲ ನಿಷ್ಕಳಂಕ ಮನಸ್ಸಿನಿಂದ ಈ ದೇವಸ್ಥಾನದ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲರಿಗೂ ಶ್ರೀ ಮಾರುತೇಶ್ವರ ಒಳ್ಳೆಯದನ್ನು ಮಾಡಲೆಂದು ಹಾರೈಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರನ್ನು ಗ್ರಾಮದ ಹಿರಿಯರು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಗಣ್ಯರಾದ ಸೋಮನಗೌಡ ಹಾದಿಮನಿ, ಬಸನಗೌಡ ಬಿರಾದಾರ, ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ,ಎಚ್.ಬಿ.ಬಿರಾದಾರ, ನಂದನಗೌಡ, ಮಲ್ಲನಗೌಡ ಬಿರಾದಾರ, ಹಣಮಂತ್ರಾಯಗೌಡ, ಪರ್ಥಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!