ವಿಜಯ ಸಿಂಧೂರ,ರೋಣ
ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ಸಮಾಜದ ಪರಿವರ್ತನೆಗೆ ಸೂರ್ಯ- ಚಂದ್ರ ಇದ್ದ ಹಾಗೆ’ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿ.ಬಿ.ಸೋಮನಕಟ್ಟಿಮಠ ಹೇಳಿದರು.

ಅವರು ಮಂಗಳವಾರ ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ,ಪುರಸಭೆ ಹಾಗೂ ದಲಿತಪರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 119ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಅವರುಗಳು ಶೋಷಿತ ಸಮಾಜದ ಧ್ವನಿಯಾಗಿ ಸಾಮಾಜಿಕ ಪರಿವರ್ತನೆಯ ಗಾಳಿ ಎಬ್ಬಿಸಿ ಜಾಗೃತಿಯ ಕಡೆ ಕೊಂಡೊಯ್ದುರು. ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಕಾರಣವಾದವರು ಎಂದರು.

ಶತಶತಮಾನಗಳಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದ, ದಲಿತರಿಗೆ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದವರು ಬಾಬೂಜಿ ಮತ್ತು ಡಾ.ಅಂಬೇಡ್ಕರವರು ಎಂದರು.
ಅಸ್ಪೃಶ್ಯತೆಯ ನಿವಾರಣೆಗಾಗಿ ತಮ್ಮ ಶಾಲಾ ದಿನಗಳಿಂದಲೇ ಮೇಲ್ವರ್ಗದ ತಾರತಮ್ಯದ ವಿರುದ್ಧ ಹೋರಾಟ ನಡೆಸಿದವರು ಬಾಬು ಜಗಜೀವನ ರಾಂ. ಇವರ ಜನ್ಮದಿನವನ್ನು ಸಮಾನತೆಯ ದಿನವಾಗಿ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ಪುಂಡಲೀಕ ಮಾದರ ಉಪನ್ಯಾಸ ನೀಡಿ,ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಮಾಜದ ಬಗ್ಗೆ ಕಾಳಜಿ ವಹಿಸಿ ಶೋಷಿತರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು ಎಂದರು.
ರಾಜಕೀಯದ ತುಳಿತಕ್ಕೆ ಒಳಗಾಗಿ ನೋವು ಅನುಭವಿಸಿ, ಸಮಾಜಕ್ಕೆ ದುಡಿದವರು, ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿದವರು ಬಾಬೂಜಿಯವರು. ಬದುಕಿನ ಅನುಭವದ ಸಮಾಜದ ಕಾಳಜಿ ವಹಿಸಿದವರು ಬಾಬು ಜಗಜೀವನ್ ರಾಂ ಎಂದರು.
ಬಾಬು ಜಗಜೀವನ್ ರಾಂ ಮತ್ತು ಡಾ.ಅಂಬೇಡ್ಕರ ಅವರು ದಲಿತ ಸಮುದಾಯದ ಆಶಾಕಿರಣ. ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸ ಮಾಡಿದರು ಎಂದು ಬಣ್ಣಿಸಿದರು.
ಉಪಸ್ಯಾಸಕ ಜಿ.ಬಿ.ಗುಡಿಮನಿ ಮಾತನಾಡಿ,ದೇಶ ಕಂಡ ಅಪ್ರತಿಮ ನಾಯಕರು
ಬಾಬು ಜಗಜೀವನ್ ರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಇಬ್ಬರೂ ಭಾರತದ ದಲಿತ ಮತ್ತು ಶೋಷಿತ ಸಮುದಾಯಗಳ ಏಳಿಗೆಗಾಗಿ ಹೋರಾಡಿದ ಪ್ರಮುಖ ನಾಯಕರು. ಜಗಜೀವನ್ ರಾಮ್ ಹಸಿರು ಕ್ರಾಂತಿ ಮತ್ತು ಕಾರ್ಮಿಕ ಸಚಿವರಾಗಿ, ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಿ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾಗಿ ಶೋಷಿತರ ಧ್ವನಿಯಾದರು ಎಂದರು
ಸಾಮಾಜಿಕ ಸಮಾನತೆ ಇಬ್ಬರೂ ಜಾತೀಯತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು. ಬಾಬು ಜಗಜೀವನ್ ರಾಮ್ ಅವರು “ಸಮಾನತೆಯ ದಿನ”ವಾಗಿ ಗುರುತಿಸಲ್ಪಟ್ಟರೆ, ಅಂಬೇಡ್ಕರ್ ಸಾಮಾಜಿಕ ಸಮಾನತೆಯ ಆರಾಧಕರಾಗಿದ್ದರು.
ರಾಜಕೀಯ ಮತ್ತು ಸಂವಿಧಾನ ಅಂಬೇಡ್ಕರ್ ಭಾರತದ ಸಂವಿಧಾನವನ್ನು ರಚಿಸಿದರೆ, ಜಗಜೀವನ್ ರಾಮ್ ಅವರು ಸಂವಿಧಾನ ಸಭೆಯ ಸದಸ್ಯರಾಗಿ ಮತ್ತು ದೀರ್ಘಕಾಲದ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು ಎಂದರು.
ಅಂಬೇಡ್ಕರ್ ಅವರು ಧರ್ಮ ಬದಲಾವಣೆಯ ಮೂಲಕ ದಲಿತರಿಗೆ ವಿಮೋಚನೆ ಕಂಡರೆ, ಜಗಜೀವನ್ ರಾಮ್ ಕಾಂಗ್ರೆಸ್ ಪಕ್ಷದ ಮೂಲಕ ವ್ಯವಸ್ಥೆಯೊಳಗೆ ಹೋರಾಟ ನಡೆಸಿದರು ಎಂಜರು
ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರ ಮತ್ತು ರಕ್ಷಣಾ ಸಚಿವರಾಗಿ, ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಇವರಿಬ್ಬರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಮತ್ತು ಅವರ ಸಾಮಾಜಿಕ ನ್ಯಾಯದ ತತ್ವಗಳನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು
ಬೆಳಿಗ್ಗೆ ಶ್ರೀ ಸಿದ್ದಾರೂಡರ ಮಠದ ಆವರಣದಿಂದ ಮೆರವಣಿಗೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಬಾಬು ಜಗಜೀವನ್ ರಾಂ ಅವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿ ಇರಿಸಿ ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಸವರಾಜ ಜಗ್ಗಲ, ಬಸವರಾಜ ತಳವಾರ, ಹನಸಿ, ರಮೇಶ ಹೊಸಮನಿ, ನಾಗರಾಜ ಕಾಂಬೋಗಿ, ನಾಗರಾಜ ಕೆ, ಪಿಎಸ್ಐ ಪ್ರಕಾಶ ಬಣಕಾರ, ಅರವಿಂದ ಕಂಬಳಿ, ಗೀತಾ ಆಲೂರ, ಅಲಿಸಾಬ ನದಾಫ್, ಎಸ್. ಎಸ್. ನೀಲಗುಂದ, ಸಂಜಯ ದೊಡ್ಡಮನಿ, ಸುರೇಶ, ನಿಂಗಪ್ಪ ಮಾದರ, ದೇವೇಂದ್ರಪ್ಪ ಕೊಳ್ಳಪ್ಪನವರ, ಪ್ರಕಾಶ ಹೊಸಹಳ್ಳಿ, ಚಂದ್ರು ಹಲಗಿ, ಮಂಜು ದೊಡ್ಡಮನಿ, ಸೋಮು ನಾಗರಾಜ, ಸಂಗಪ್ಪ ಮಾದರ,ವೀರಪ್ಪ, ಶರಣಪ್ಪ, ರಾಮಕೃಷ್ಣ ಪೂಜಾರ, ಸಂತೋಷ ಸೇರಿದಂತೆ ಅನೇಕರು ಇದ್ದರು
