ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘದಿಂದ ಪತ್ರಿಕಾಗೋಷ್ಠಿ

ಗಜೇಂದ್ರಗಡ :ಸಾಂಸ್ಕೃತಿಕ ವಿಕಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘ ಗಜೇಂದ್ರಗಡ -ಉಣಚಗೇರಿ ವತಿಯಿಂದ “ರಾಣಿ ಚೆನ್ನಮ್ಮ ಸಾಂಸ್ಕೃತಿಕ ಭವನ” ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಿದ್ದಣ್ಣ ಬಂಡಿ ಹೇಳಿದರು.

ಪಟ್ಟಣದ ಬಂಡಿ ಗಾರ್ಡನ್ ನಲ್ಲಿ ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘ ಗಜೇಂದ್ರಗಡ -ಉಣಚಗೇರಿ ವತಿಯಿಂದ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಸಾಹಸ ಮತ್ತು ದೇಶಭಕ್ತಿಯನ್ನು ಸ್ಮರಿಸಿ, ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಭವನವು ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ ಹಾಗೂ ಈ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದು ಕೇಂದ್ರವಾಗಲಿದೆ,ಭವನ ನಿರ್ಮಾಣಕ್ಕೆ ಶಾಸಕ ಜಿ ಎಸ್ ಪಾಟೀಲ್ ಅವರು 25 ಲಕ್ಷ ನೀಡಿದ್ದಾರೆ ಅಲ್ಲದೆ ಭವನ ಒಂದು ವರ್ಷದ ಒಳಗೆ ನಿರ್ಮಾಣ ಆಗುವವರೆಗೂ ಬೆನ್ನೆಲುಬಾಗಿ ನಿಲ್ಲುತ್ತೆನೆ ಎಂದು ಭರವಸೆ ನೀಡಿದ್ದಾರೆ ಎಂದರು.

ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಹಾಲಕೆರೆಯ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸುವರು, ಉದ್ಘಾಟನೆಯನ್ನು ಶಾಸಕ ಜಿ ಎಸ್ ಪಾಟೀಲ್ ಉದ್ಘಾಟಿಸುವರು,ಅಧ್ಯಕ್ಷತೆಯನ್ನು ಈಶಣ್ಣ ಮ್ಯಾಗೇರಿ ವಹಿಸುವರು.ಮುಖ್ಯ ಅತಿಥಿಗಳಾಗಿ ಬಸವರಾಜೇಶ್ವರಿ ಚನ್ನು ಪಾಟೀಲ್, ವಿಶ್ವನಾಥ ಜಿಡ್ಡಿಬಾಗಿಲು, ರಮೇಶ ಪಲ್ಲೇದ,ಅನೀಲಕುಮಾರ ಪಲ್ಲೇದ, ಮಲ್ಲಿಕಾರ್ಜುನ ಬಿದರೂರ,ಪ್ರಭು ಮೇಟಿ,ಬಸಣ್ಣ ಮೂಲಿಮನಿ, ಹಾಗೂ ಜನಪ್ರತಿನಿಧಿಗಳು, ಸಮಾಜ ಗಣ್ಯರು ಭಾಗವಹಿಸುವರು ಎಂದರು.

ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಗೌಡ ಮಲ್ಲನಗೌಡ್ರ, ಮುತ್ತಣ್ಣ ಮ್ಯಾಗೇರಿ, ಬಸವಂತಪ್ಪ ಪಲ್ಲೇದ, ಕಳಕಪ್ಪ ಸಗಟಿ,ಬಸುವರಾಜ ಕಡ್ಡಬಲಕಟ್ಟಿ, ಗುಂಡಪ್ಪ ಪಲ್ಲೇದ,ರಾಕೇಶ ಮಾರನಬಸರಿ,ವಿಜಯ ಬೂದಿಹಾಳ, ನಾಗರಾಜ ಪಾಟೀಲ್,ಮಹೇಶ ಪಲ್ಲೇದ, ಮಲ್ಲಿಕಾರ್ಜುನ ಕುಂದಗೋಳ, ತುಳಸಪ್ಪ ಸುಳ್ಯದ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!