ವಿಜಯ ಸಿಂಧೂರ, ರೋಣ
ಕ್ರೀಡೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೂಲಾಧಾರವಾಗಿದೆ. ಇದು ವ್ಯಕ್ತಿಯಲ್ಲಿ ಶಿಸ್ತು, ಆತ್ಮವಿಶ್ವಾಸ, ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದಲ್ಲದೆ, ದೈಹಿಕವಾಗಿ ಬಲಿಷ್ಠರಾಗಲು ಮತ್ತು ಮಾನಸಿಕವಾಗಿ ಸದೃಢರಾಗಲು ಸಹಾಯ ಮಾಡುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಒತ್ತಡ ಕಡಿಮೆಯಾಗುತ್ತದೆ, ಮತ್ತು ಸಾಮಾಜಿಕ ಕೌಶಲ್ಯಗಳನ್ನು ಕಲಿಸುವ ಮೂಲಕ ಜೀವನವನ್ನು ಉತ್ತಮಗೊಳಿಸುತ್ತದೆ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಹೇಳಿದರು

ಅವರು ಪಟ್ಟಣದ ಗ್ರೀನವುಡ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಸಂಯೋಗದೊಂದಿಗೆ ಪ್ರಾರಂಭವಾದ ದೇವ್ ಕ್ರಿಕೆಟ್ ಅಕಾಡೆಮಿಗೆ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ದೇಹದ ಬಲ, ಚುರುಕುತನ, ಮತ್ತು ಒಟ್ಟಾರೆ ಸದೃಢತೆಯನ್ನು ಹೆಚ್ಚಿಸುತ್ತದೆ.
ಕ್ರೀಡೆಯು ಮನಸ್ಸಿಗೆ ಶಾಂತಿ, ಏಕಾಗ್ರತೆ, ಮತ್ತು ಸಂತೋಷವನ್ನು ನೀಡಿ, ಒತ್ತಡವನ್ನು ಕಡಿಮೆ ಮಾಡುತ್ತದೆ.
ಸಾಮಾಜಿಕ ಕೌಶಲ್ಯಗಳು: ಕ್ರೀಡಾಸ್ಫೂರ್ತಿ, ತಂಡದ ಕೆಲಸ, ನಾಯಕತ್ವದ ಗುಣಗಳು, ಮತ್ತು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ ಎಂದರು
ಕ್ರೀಡೆಯು ನಿಯಮಗಳ ಪಾಲನೆ ಮತ್ತು ಸಮಯದ ನಿರ್ವಹಣೆಯನ್ನು ಕಲಿಸುತ್ತದೆ.
ಪ್ರತಿಯೊಬ್ಬರಿಗೂ ಕ್ರೀಡೆಗಳ ಅವಶ್ಯಕತೆ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರು ವ್ಯವಸಾಯದಲ್ಲಿ ತೊಡಗಿಕೊಂಡು ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಮನುಷ್ಯ ಹಲವು ರೀತಿಯ ರೋಗಗಳಿಗೆ ಒಳಪಡುತ್ತಿದ್ದಾನೆ. ಈ ನಿಟ್ಟಿನಲ್ಲಿ ಮನುಷ್ಯ ಆರೋಗ್ಯವಾಗಿ ಜೀವನ ನಡೆಸಲು ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು
ಕ್ರೀಡೆಯಲ್ಲಿ ಪ್ರತಿಯೊಬ್ಬರೂ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು. ದೈಹಿಕವಾಗಿ ಬಲಿಷ್ಠರಾದಾಗ ಮಾತ್ರ ಮಾನಸಿಕವಾಗಿ ಏನು ಬೇಕಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಕ್ರೀಡೆ ಅತಿ ಪ್ರಮುಖವಾಗಿದೆ. ಕ್ರೀಡೆ ಮುಂತಾದ ದೈಹಿಕ ಹಾಗೂ ಮಾನಸಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಜತೆಗೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಇನ್ನಷ್ಟು ಉತ್ತಮವಾಗುತ್ತದೆ. ಕ್ರೀಡೆಗಳಿಂದ ಬುದ್ಧಿ ಚುರಾಕುವುದು. ಕಡ್ಡಾಯವಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸ್ಫೂರ್ತಿಯಿಂದ ಹಾಗೂ ಸ್ನೇಹಪೂರ್ವಕವಾಗಿ ಭಾಗವಹಿಸಬೇಕು ಎಂದು ಹೇಳಿದರು
ಶ್ರೀ ಸಿದ್ರಾಮೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಅವಿನಾಶ್ ಸಾಲಿಮನಿ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಅರಳಲು ಉತ್ತಮ ತರಬೇತಿ, ಸುಸಜ್ಜಿತ ಮೈದಾನ, ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದು ಅತ್ಯಗತ್ಯ. ಗ್ರಾಮ ಮಟ್ಟದಲ್ಲಿ ಕ್ರಿಕೆಟ್ ಆಟಕ್ಕೆ ಪ್ರೋತ್ಸಾಹಿಸುವ ಮೂಲಕ ಮತ್ತು ಹೆಚ್ಚಿನ ತರಬೇತುದಾರರನ್ನು ನೇಮಕ ಮಾಡುವ ಮೂಲಕ ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಎಂದು ಹೇಳಿದರು
ಕರ್ನಾಟಕ ಮಹಿಳಾ ತಂಡದ ಆಟಗಾರ್ತಿಯಾದ ನೇತ್ರಾವತಿ
ಮಹಿಳಾ ಕ್ರಿಕೆಟ್, ಪುರುಷರ ಕ್ರಿಕೆಟ್‌ನಷ್ಟೇ ಉತ್ಸಾಹ ಮತ್ತು ತಾಂತ್ರಿಕತೆಯಿಂದ ಆಡಲಾಗುವ ಕ್ರೀಡೆಯಾಗಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಜನಪ್ರಿಯತೆ ಪಡೆಯಲು ಉತ್ತಮ ವೇದಿಕೆ ದೇವ್ ಕ್ರಿಕೆಟ್ ಅಕಾಡೆಮಿಯ ತರಬೇತಿ ಪಡೆದು ಸಾಧನೆ ಮಾಡಬೇಕು ಗ್ರಾಮಾಂತರ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ನೀಡುವ ಉದ್ದೇಶದಿಂದ ದೇವು ಲಿಂಗನಗೌಡ್ರ ರವರ ಈ ವಿನೂತನ ಪ್ರಯತ್ನ ಯಶಸ್ವಿಯಾಗಲೆಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಕರ್ನಾಟಕ ಮಹಿಳಾ ತಂಡದ ಆಟಗಾರ್ತಿಯಾದ ಚಿನ್ಮಯಿ ಶಿವಾನಂದ ಅಂತರಾಷ್ಟ್ರೀಯ ವಿಕಲಚೇತನ ಕ್ರಿಕೆಟ್ ಕ್ರೀಡಾಪಟುಗಳಾದ ಪ್ರಕಾಶ್ ಹೊನವಾಡ, ಹೇಮರೆಡ್ಡಿ ಅರಹುನಸಿ, ಇಕ್ಬಾಲ್ ಯಲಿಗಾರ ಹಾಗೂ ಮುಖ್ಯ ಅತಿಥಿಗಳಾಗಿ ವಾಯ್ ಸಿ ಸುಂಕದ, ಜಗದೀಶ ಭೂದಿಹಾಳ ಪ್ರಕಾಶ ಹಾಲಣ್ಣವರ, ಜಗದೀಶ ಅಳ್ಳೊಳ್ಳಿ, ಅಭಿಷೇಕ್ ಇನಾಮದಾರ, ಯಲ್ಲಪ್ಪ ಕೀರೆಸೂರ, ಮಹದೇವಪ್ಪ ತೆಗ್ಗಿನಮನಿ. ನಾಗಪ್ಪ ದೇಶಣ್ಣವರ ಮಲ್ಲಯ್ಯ ಸ್ಥಾವರಮಠ ಪಾಲ್ಗೊಂಡಿದ್ದರು
ವರದಿಗಾರರು : ಮಹೇಶ ಅಚ್ಚಿನಗೌಡರ
