ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ : ಜಿ.ಎಸ್.ಪಾಟೀಲ

ವಿಜಯ ಸಿಂಧೂರ ರೋಣ

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಅವರ ಬೌದ್ಧಿಕ, ಶೈಕ್ಷಣಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಲು ಶ್ರಮಿಸಬೇಕು. ಆಧುನಿಕ ಬೋಧನಾ ತಂತ್ರಗಳು, ನಿರಂತರ ಜ್ಞಾನ ನವೀಕರಣ ಮತ್ತು ಪ್ರಾಯೋಗಿಕ ಜ್ಞಾನದ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದು ಮುಖ್ಯವಾಗಿದೆ ಎಂದು ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಹೇಳಿದರು

ಅವರು ಭಾನುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ, ಲೋಕೋಪಯೋಗಿ ಇಲಾಖೆ ಜಂಟಿಯಾಗಿ ರೋಣ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸರಕಾರಿ ಸ್ವಾತಂತ್ರ‍್ಯ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ವೀರಣ್ಣ ಮತ್ತಿಕಟ್ಟಿ ಅವರು ಶಾಸಕರಾದ ಸಮಯದಲ್ಲಿ ಈ ಕಾಲೇಜು ಮಂಜೂರು ಆಗಿದೆ.ನಗರದ ಮುಖಂಡರ ನೇತೃತ್ವದಲ್ಲಿ ರೂ.೬೦ ಸಾವಿರ ಹಣ ಹೊಂದಿಸಿ ಲೋಕನಗೌಡ ಪಾಟೀಲರ ಮನವೊಲಿಸಿ ೫ ಎಕರೆ ಜಮೀನು ಖರೀದಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ.ಮುಂದೆ ಕೆಲವು ಸಮಸ್ಯೆಗಳು ಎದುರಾದವು ಆಗ ನಾನು ಶಾಸಕನಾದ ಮೇಲೆ ಜಿಲ್ಲಾಧಿಕಾರಿಗಳ ಮೂಲಕ ರೂ.೧ ಕೋಟಿ ಅನುದಾನ ಭೂಮಿ ಮಾಲಿಕರಿಗೆ ಮಂಜೂರು ಮಾಡಿಸಿ ಶಿಕ್ಷಣ ಇಲಾಖೆ ಹೆಸರಿಗೆ ಮಾಡಿಸಲಾಗಿದೆ ಎಂದರು


ಸರಕಾರಿ ಆಸ್ತಿಗಳು ಸಾರ್ವಜನಿಕರ ಸ್ವತ್ತು ಅವುಗಳಿಗೆ ಹಾನಿ ಮಾಡುತ್ತಿರುವುದು ದುರಂತ.ನಮ್ಮಲ್ಲಿ ಪ್ರಜ್ಞಾವಂತಿಕೆ ಕಡಿಮೆಯಾಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು

ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಏನು ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳಿ.ಸಕಾಲದಲ್ಲಿ ಸಭೆಗಳನ್ನು ನಡೆಸಿ,ಕುಂದು, ಕೊರತೆ, ಅಗತ್ಯ ಸೌಲಭ್ಯಗಳ ಕೊರತೆ ಇದ್ದರೆ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದರು
ಗಜೇಂದ್ರಗಡ ಸರಕಾರಿ ಪಿಯು,ಪದವಿ ಕಾಲೇಜುಗಳು ಈ ಭಾಗದಲ್ಲಿ ಮಾದರಿಯಾಗಿವೆ.ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಾನು ಸುಮಾರು ರೂ.೪ ರಿಂದ ೫ ಕೋಟಿ ಅನುದಾನ ನೀಡಲಾಗಿದೆ.ಅಲ್ಲಿನ ಕಾಲೇಜಿನ ಸ್ಥೀತಿಗೆ ಇದು ಬರುವಲ್ಲಿ ಆಡಳಿತ ಮಂಡಳಿ ಶ್ರಮ ಅವಶ್ಯಕತೆ ಇದೆ ಎಂದರು


ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ನೀಡಬೇಕು.ಎಸ್.ಎಸ್.ಎಲ್.ಸಿ ಗೆ ವ್ಯಾಸಂಗ ಮೊಟಕುಗೊಸಬಾರದು,ಸರಕಾರ ೨೦೩೦ ಇಸ್ವಿ ವೇಳೆಗೆ ಅತಿಥಿ ಉಪನ್ಯಾಸಕರ ನೇಮಕ ನಿಲ್ಲಿಸಿ ನಿವ್ರತ್ತಿಗೆ ತಕ್ಕ ನೇಮಕಾತಿ ನಡೆಯಲಿದೆ.ಸರಕಾರದ ನಿಯಮದಂತೆ ನೀವು ಕೆಲಸ ಮಾಡಿದರೆ ಏನಾದರೂ ಸಾಧನೆ ಮಾಡಬೇಕು ಎಂದರು

ಬಡ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕದಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ಸರಕಾರ ಉದ್ದೇಶಿಸಿದೆ,ಸದ್ಯ ೧೫೦ ವಿದ್ಯಾರ್ಥಿಗಳು ಇದ್ದಾರೆ ಮುಂದಿನ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು

ಉಪನ್ಯಾಸಕ ವಿ. ಡಿ. ಬಡಿಗೇರ, ಸುಂದರವಾದ ಕಟ್ಟಡ ನಿರ್ಮಾಣ ಆಗಿದೆ.ಸುತ್ತಲೂ ಕಾಂಪೌAಡ್ ನಿರ್ಮಾಣ ಮಾಡಬೇಕು.ಸುತ್ತಲೂ ಗ್ರೀಲ್ ಮಾಡಿದರೆ ಅನುಕೂಲ ಆಗುತ್ತದೆ.ಇಲಾಖೆ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲರ ಕಟ್ಟುನಿಟ್ಟಿನ ಸೂಚನೆ ಮತ್ತು ಅವರ ಬಡ ವಿದ್ಯಾರ್ಥಿಗಳ ಮೇಲೆ ಇರುವ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಸದಸ್ಯ, ನಿವೃತ್ತ ಶಿಕ್ಷಕ ಎಸ್.ಆಯ್.ದಿಂಡೂರ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ದೇವ ಮಂದಿರದಂತೆ ಸುಂದರವಾಗಿ ನಿರ್ಮಾಣ ಆಗಲು ಶಾಸಕ ಜಿ.ಎಸ್.ಪಾಟೀಲ ಕಾರಣ.ಈ ಕಾಲೇಜಿನ ಇತಿಹಾಸ ೪೪ ವರ್ಷಗಳು, ಹಿಂದೆ ಉತ್ತಮ ಉಪನ್ಯಾಸಕರು ಇದ್ದರು ಇಲ್ಲಿ ಓದಿದವರು ಉತ್ತಮ ಹುದ್ದೆಯಲ್ಲಿರುವವರು, ವಿಜ್ಞಾನ ವಿಭಾಗ ಬೇರೆ ಕಡೆ ಹೋಗಿರುವುದು ದುರಂತ.ಶಾಸಕರು ಸುಸಜ್ಜಿತ ಸೌಲಭ್ಯಗಳನ್ನು ಕಲ್ಪಿಸಲು ಸದಾ ಸಿದ್ದರು.ಇಲ್ಲಿನ ಉಪನ್ಯಾಸಕರು ವಿದ್ಯಾರ್ಥಿಗಳು ಉತ್ತಮ ಬೋಧನೆ ಮಾಡಿ,ಈ ಕಟ್ಟಡವನ್ನು ರೂ.೧೪೭ ಲಕ್ಷ ಅನುದಾನವನ್ನು ಬಳಸಿ ನಿರ್ಮಾಣ ಮಾಡಲಾಗಿದೆ.ಇಲ್ಲಿನ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.ಕೆಲವು ಕಿಡಿಗೇಡಿಗಳು ಹೊಸ ಕಟ್ಟಡಕ್ಕೆ ಹಾನಿ ಮಾಡಿದ್ದಾರೆ.ಅದನ್ನು ತಡೆಯಲು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು.ದೇವಾಲಯಕ್ಕೆ ಹೋಗುವ ಬದಲು, ಶಾಲೆಗೆ ಕೈಮುಗಿಯಬೇಕು,ಅಂದಾಗ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಾಧ್ಯ ಎಂದು ಹೇಳಿದರು.

ಅಸ್ಲಾಂ ಕೊಪ್ಪಳ, ಬಸವರಾಜ ಜಗ್ಗಲ, ಬಸವರಾಜ ನವಲಗುಂದ, ವಿ. ಬಿ. ಸೋಮನಕಟ್ಟಿಮಠ, ಶಿವಣ್ಣ ನವಲಗುಂದ, ಬಸವರಾಜ ಸುಂಕದ, ಯೂಸುಫ್ ಇಟಗಿ, ಎಸ್. ಆಯ್. ದಿಂಡೂರ, ಮಹೇಶ ಕಳಸಣ್ಣವರ, ವಿದ್ಯಾ ದೊಡ್ಡಮನಿ, ಅಪ್ಪು ಗಿರಡ್ಡಿ, ವೀರಣ್ಣ ತೆಗ್ಗಿನಮನಿ, ಇನಾಯತ್ ತರಪದಾರ,ಸಂತೋಷ ಚಿತ್ರಗಾರ, ಅಂದಪ್ಪ ಗಡಗಿ, ದಾವಲಸಾಬ ಬಾಡಿನ, ದುರಗಪ್ಪ ಹಿರೇಮನಿ, ಕೆ. ಕೆ. ಮುಲ್ಲಾ, ಅಮಿನಸಾಬ ಮಾಗಿ, ವೀರುಪಾಕ್ಷಗೌಡ ಪಾಟೀಲ, ಅನೀಲ ತೆಗ್ಗಿನಕೇರಿ, ನಾಗಪ್ಪ ದೇಶಣ್ಣವರ, ಗುತ್ತಿಗೆದಾರ ಚೇತನಕುಮಾರ, ಜೆ.ಇ ಆನಂದ, ಮೌನೇಶ ಹಾದಿಮನಿ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿ ಮುಖಂಡರು ಸೇರಿದಂತೆ ಅನೇಕರು ಇದ್ದರು.

ಮಂಜುನಾಥ ಹೂವಿನಹಾಳ ನಿರೂಪಿಸಿದರು,ವಿ.ಡಿ.ಬಡಿಗೇರ ಸ್ವಾಗತಿಸಿದರು.ಬನಶಂಕರಿ ಹಿರೇಸಕ್ಕರಗೌಡ್ರ ವಂದಿಸಿದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!