ವ್ಯಾಪಾರಿ ಮನೋಭಾವವಿಲ್ಲದೆ ಕಡಿಮೆ ವೆಚ್ಚದಲ್ಲಿ ಬಡವರ ಸೇವೆಯನ್ನು ಶ್ಲಾಘನೀಯ


ತಾಳಿಕೋಟೆ : ವ್ಯಾಪಾರಿ ಮನೋಭಾವವಿಲ್ಲದೆ ಕಡಿಮೆ ವೆಚ್ಚದಲ್ಲಿ ಬಡವರ ಸೇವೆಯನ್ನು ಮಾಡಬೇಕೆಂಬ ಉದ್ದೇಶದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆದು ಹಗಲಿರುಳು ಶ್ರಮಿಸುತ್ತಿರುವ ವಿಜಯ್ ಅಸ್ಕಿ ದಂಪತಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಮಾಜಿ ಶಾಸಕ ಸೋಮನಗೌಡ ಬಿ.ಪಾಟೀಲ (ಸಾಸನೂರ)ಹೇಳಿದರು.

ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮದ ಬಲವಂತರಾಯ ಹಡಲಗೇರಿ ಹೈಸ್ಕೂಲ್ ಮೈದಾನದಲ್ಲಿ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಾಗಲಕೋಟ ಹಾಗೂ ದಿವಂಗತ.ಬಿ.ಎಸ್.ಪಾಟೀಲ (ಸಾಸನೂರ) ಫೌಂಡೇಶನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಆರೋಗ್ಯ ತಪಾಸಣಾ ಮಹಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಸವರಾಜ ಅಸ್ಕಿ ಅವರು ಮಾತನಾಡಿ ಕೊಣ್ಣೂರ ಗ್ರಾಮದ ಅಸ್ಕಿ ಮನೆತನದ ಗುರು ಹಿರಿಯರು ಒಳ್ಳೆಯ ಸಂಸ್ಕಾರಗಳನ್ನು ಕೊಟ್ಟಿರುವುದರಿಂದ ಅವರ ಕುಟುಂಬದ ಸದಸ್ಯರು ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂದರು

ಬಾಗಲಕೋಟೆಯಲ್ಲಿರುವ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕರ್ನಾಟಕದ ಹೆಮ್ಮೆಯ ಆಸ್ಪತ್ರೆಯಾಗಿದೆ. ಕಡಿಮೆ ವೆಚ್ಚದಲ್ಲಿ ಬಡವರ ಅನುಕೂಲಕ್ಕಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಇಲ್ಲಿ ನೀಡಲಾಗುತ್ತದೆ ಆಸ್ಪತ್ರೆಯಲ್ಲಿ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಸೌಲಭ್ಯವು ಇವೆ. ಇಂತಹ ಶಿಬಿರುಗಳನ್ನು ನಡೆಸಿ ಉಚಿತ ಔಷಧಿಗಳನ್ನು ಹಾಗೂ ಹೆಚ್ಚಿನ ಶಸ್ತ್ರ ಚಿಕಿತ್ಸೆಗಾಗಿ ಆಯ್ಕೆ ಮಾಡಲಾಗುತ್ತಿದೆ ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು.

ಡಾ.ಆರ್.ಸಿ.ನಾಗಾವಿ ,ಡಾ. ಗುರುಪ್ರಸಾದ ಶಿವಶಿಂಪಿ,ಸಿ.ಬಿ.ಅಸ್ಕಿ,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ದೇಶಕ ವಿಜಯ ಅಸ್ಕಿ ಅವರ ಸೇವೆಯನ್ನು ಶ್ಲಾಘಿಸಿದರು.ಇದೇ ಸಂದರ್ಭದಲ್ಲಿ ಅಸ್ಕಿ ಫೌಂಡೇಶನ್ ಕೊಣ್ಣೂರದ ವತಿಯಿಂದ ನಿರ್ದೇಶಕ ವಿಜಯ ಅಸ್ಕಿ ಅವರನ್ನು ಗೌರವಿಸಲಾಯಿತು.

ಪೂಜ್ಯ ಶ್ರೀನಾಥಯ್ಯ ಹಿರೇಮಠ ನೇತೃತ್ವ ವಹಿಸಿದ್ದರು. ಶ್ರೀ ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಶಿಬಿರದಲ್ಲಿ ವಿಶೇಷವಾಗಿ ಹೃದಯ ರೋಗ, ಮೂತ್ರಪಿಂಡ ಸಮಸ್ಯೆ, ಸ್ತ್ರೀರೋಗ ಮತ್ತು ಪ್ರಸೂತಿ, ಚಿಕ್ಕ ಮಕ್ಕಳ ಚಿಕಿತ್ಸೆ, ಎಲುಬು ಮತ್ತು ಕೀಲು, ಮೂಗು ಕಿವಿ ಮತ್ತು ಗಂಟಲು ಚಿಕಿತ್ಸೆ, ಸಕ್ಕರೆ ಕಾಯಿಲೆ ಬಿಪಿ ಥೈರಾಯ್ಡ್ ಹೀಗೆ ಹಲವಾರು ರೋಗಗಳಿಗೆ ಸಂಬಂಧಿಸಿದ ಸುಮಾರು 607 ಜನರ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು ಮತ್ತು 18 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಈ ಸಮಯದಲ್ಲಿ ಗಣ್ಯರಾದ ಬಸನಗೌಡ ಹಡಲಗೇರಿ, ಪ್ರಭುಗೌಡ ಮದರಕಲ್ , ಎಚ್ಎಸ್ ಅರವಿಂದ ಹೂಗಾರ, ಶಂಕರಗೌಡ ಹಿಪ್ಪರಗಿ,ಸಿ.ಸಿ.ಪಾಟೀಲ,ಡಾ. ಶ್ರೀಶೈಲ ಹುಕ್ಕೇರಿ,ಡಾ.ಪ್ರೀತಿ ವಿಜಯ, ಡಾ.ಅನೂಪ, ಶಂಕರಗೌಡ ಅಸ್ಕಿ,ಡಾ.ನಿಂಗರಾಜ, ಬಿ.ಎನ್.ಹಿಪ್ಪರಗಿ,ಎಸ್.ಎಂ.ಸಜ್ಜನ, ಎಚ್ ಎಸ್ ಪಾಟೀಲ್ , ಪಿಎಸ್ಐ ಜ್ಯೋತಿ ಖೋತ್,ಜಿ.ಜಿ.ಅಸ್ಕಿ, ನಿಂಗನಗೌಡ ಪಾಟೀಲ, ಮಹೇಶ ಜೋಶಿ ಡಿ.ಕೆ.ಪಾಟೀಲ, ಮಲ್ಲು ಅಸ್ಕಿ ಬಿ.ವೈ.ಬಂಟನೂರ ಹಾಗೂ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!