ವ್ಯಸನ ಮುಕ್ತ ಗ್ರಾಮ – ದೃಢ ಸಂಕಲ್ಪಕ್ಕೆ ಶ್ರೀಗಳ ಕರೆ

ರೋಣ:ಗ್ರಾಮೀಣ ಸಮಾಜದ ಸೌಖ್ಯ, ಆರೋಗ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳ ಉಳಿವಿಗೆ ವ್ಯಸನ ಮುಕ್ತ ಜೀವನ ಅತ್ಯಂತ ಅಗತ್ಯವೆಂದು ಶ್ರೀ ಜಗದ್ಗುರು ಶಿವಯೋಗಿಶ್ವರ ಮಹಾಸ್ವಾಮಿಗಳು ನಿರಂಜನ ಸಂಸ್ಥಾನಮಠ ಭಾತಂದ್ರಾ ಹೇಳಿದರು.

ತಾಲೂಕಿನ ಕೃಷ್ಣಾಪೂರ ಗ್ರಾಮದಲ್ಲಿ ಬೀದರ ಭಾಲ್ಕಿ ಮತ್ತು ಭಾತಾಂದ್ರಾ ಜಗದ್ಗುರು ನಿರಂಜನ ಸಂಸ್ಥಾನ ಮಠದ ನೂತನ ಪೀಠಾಧಿತಿಗಳಾದ ಪೂಜ್ಯ ಶ್ರೀ ಮ.ನಿ.ಪ್ರ.ಜಗದ್ಗುರು ಡಾ.ಗುರುಬಸವ ಮಹಾಸ್ವಾಮಿಗಳ ಪುರಪ್ರವೇಶ ಹಾಗೂ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಅವರು.ಮದ್ಯಪಾನ, ಧೂಮಪಾನ ಹಾಗೂ ಇತರ ಹಾನಿಕಾರಕ ವ್ಯಸನಗಳು ಕುಟುಂಬಗಳ ನೆಮ್ಮದಿಯನ್ನು ಹಾಳುಮಾಡುವುದಲ್ಲದೆ ಯುವಜನರ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತಿವೆ ಎಂದು ಎಚ್ಚರಿಸಿದರು.ಗ್ರಾಮವನ್ನು ಸಂಪೂರ್ಣವಾಗಿ ವ್ಯಸನಮುಕ್ತವಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಮುಂದಾಗಬೇಕು ಎಂದು ಅವರು ಕರೆ ನೀಡಿದರು. “ಪ್ರತಿಯೊಬ್ಬರೂ ದೃಢ ಸಂಕಲ್ಪ ಮಾಡಬೇಕು. ಯುವಕರು ಆರೋಗ್ಯಕರ ಚಟುವಟಿಕೆಗಳತ್ತ ಮುಖ ಮಾಡಬೇಕು. ಹಿರಿಯರು ಮಾರ್ಗದರ್ಶನ ನೀಡಬೇಕು” ಎಂದು ಶ್ರೀಗಳು ಹೇಳಿದರು.

.ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ ತೋಂಟದ ಶ್ರೀ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, “ವ್ಯಸನ ಮುಕ್ತ ಗ್ರಾಮ ನಿರ್ಮಾಣವು ಕೇವಲ ಒಂದು ಅಭಿಯಾನವಲ್ಲ, ಅದು ನಮ್ಮ ಮುಂದಿನ ತಲೆಮಾರಿಗೆ ನೀಡುವ ಅಮೂಲ್ಯ ಕೊಡುಗೆ” ಎಂದು ಅಭಿಪ್ರಾಯಪಟ್ಟರು.

ಸಭೆಯ ಸ್ವಾಗತ ಸಮಿತಿ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಮಾತನಾಡಿ,ಡಾ.ಗುರುಬಸವ ಶ್ರೀಗಳು ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಿ ನಂತರ ಮಠದ ಪೀಠಾಧಿಪತಿಗಳಾಗಿರುವದು ಸಂತಸ ತಂದಿದೆ.ಸಮಾಜಕ್ಕೆ ಜ್ಞಾನ ಜ್ಯೋತಿ ತುಂಬವ ಕಾಯಕ ಮಾಡುತ್ತಾ ಧಾರ್ಮಿಕ ಪರಂಪರೆಗಳನ್ನು ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು,ಶ್ರೀ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಿರಕ್ತಮಠ,ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀ ಗುರುಪಾದ ಮಹಾಸ್ವಾಮಿಗಳು,ಶ್ರೀ ಗಂಗಾಧರ ಮಹಾಸ್ವಾಮಿಗಳು,ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು,ಶ್ರೀ ಅಭಿನವ ಪಂಚಾಕ್ಷರ ಮಹಾಸ್ವಾಮಿಗಳು,ಶ್ರೀ ಷ.ಬ್ರ.ಅಭಿನವ ಕಲಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀ ಚೇತನ್ ಮರಿದೇವರು ಸನ್ನಿಧಿ ಉತ್ತರಾಧಿಕಾರಿಗಳುಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನ,ಗ್ರಾಮದ ಸಕಲ‌ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!