ಗಜೇಂದ್ರಗಡ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸುಮಾರು ೧೬ ಹಳ್ಳಿಗಳಲ್ಲಿ ಬಗರ್ ಹುಕ್ಕುಂ ಸಾಗುವಳಿದಾರರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸುಮಾರು ದಿನಗಳಿಂದ ಹಕ್ಕು ಪತ್ರ ವಿತರಣೆ ಮಾಡಲು ಹಾಗೂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಒತ್ತಾಯಿಸಿ ಸಾಕಷ್ಟು ಬಾರಿ ಹೋರಾಟ ಮಾಡಿ ಮನವಿ ಮಾನ್ಯ ತಹಶಿಲ್ದಾರರಿಗೆ ಹಾಗೂ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಹೋರಾಟ ಮಾಡಿ ಮನವಿ ಸಲ್ಲಿಸಿದರು ಕೂಡ ರೈತರ ಸಮಸ್ಯೆ ಈಡೆರಿಸಲು ಮಾನ್ಯ ಶಾಸಕರು, ತಹಶಿಲ್ದಾರರು, ಜಿಲ್ಲಾಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಆದ್ದರಿಂದ ಕೆ ಪಿ ಆರ್ ಎಸ್ ಸಂಘಟನೆ ನೇತೃತ್ವದಲ್ಲಿ ಇಂದು ಗಜೇಂದ್ರಗಡ ತಾಲೂಕಿನ ತಹಶಿಲ್ದಾರ ಕಛೇರಿಯಲ್ಲಿ ಅನಿರ್ದಿಷ್ಟಾವಧಿ ಹಗಲು ರಾತ್ರಿ ಹೋರಾಟ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರಾದ ಗಣೇಶ ರಾಠೋಡ ಮಾತನಾಡಿ ರೈತರು ಸುಮಾರು ವರ್ಷಗಳಿಂದ ಗಜೇಂದ್ರಗಡ ಸುತ್ತ ಮುತ್ತ ಗುಡ್ಡದಲ್ಲಿ ರೈತರು ಉಳುಮೆ ಮಾಡುತ್ತಾ ತಮ್ಮ ಜೀವನ ನಡೆಸುತ್ತಿದ್ದಾರೆ ಆದರೆ ಸರ್ಕಾರ ಅವುಗಳನ್ನು ಗಣನೆಗೆ ತೆಗೆದುಕೊಂಡು ರೈತರಿಗೆ ಹಕ್ಕು ಪತ್ರ, ಸಾಗುವಳಿ ಚೀಟಿ ನೀಡಲು ನೀರಾಕರಿಸುತ್ತಿರುವುದು ಸರಿಯಾದ ಕ್ರಮವಲ್ಲ ಇದನ್ನು ವಿದ್ಯಾರ್ಥಿ ಸಂಘಟನೆ ಖಂಡಿಸುತ್ತದೆ. ಆದ್ದರಿಂದ ಮಾನ್ಯ ಅಧಿಕಾರಿಗಳು ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಪೀರು ರಾಠೋಡ ಮಾತನಾಡಿ ಮಾನ್ಯ ಶಾಸಕರಿಗೆ ಜಿಲ್ಲಾಧಿಕಾರಿಗಳಿಗೆ ತಹಶಿಲ್ದಾರಿಗೆ ರೈತರ ಮೇಲೆ ಕಾಳಜಿ ಇದ್ದಿದ್ದರೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿದ್ದರು ಆದರೆ ಅವರಿಗೆ ಕಾಳಜಿ ಇರುವುದು ಕಾಳಸಂತೆ ಕೋರರ ಕಾಳಜಿ ಇದೆ ಇದೆ ಬಗರ್ ಹುಕ್ಕುಂ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಾರೆ ಸಾಗುವಳಿ ಚೀಟಿ ಕೋಡುತ್ತಾರೆ ಆದರೆ ಇನ್ನೂ ಊಳಿದ ರೈತರಿಗೆ ಯಾಕೆ ನೀಡುತ್ತಿಲ್ಲ ಕೇಲವರ ಲಾಬಿಗಾಗಿ ಕೆಲಸ ಮಾಡಿ ರೈತರಿಗೆ ದ್ರೋಹವೆಸಗುತ್ತಿರುವ ರೈತರು ನಾಳೆ ದಿನ ತಹಶಿಲ್ದಾರ ಕಛೇರಿ ಬಂದ್ ಮಾಡಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೂಪೇಶ್ ಮಾಳೋತ್ತರ, ಪೀರು ರಾಠೋಡ, ಚಂದ್ರು ರಾಠೋಡ, ಚನ್ನಪ್ಪ ಗೂಗಲೋತ್ತರ, ಗಣೇಶ ರಾಠೋಡ, ಮೆಹಬೂಬ ಹವಾಲ್ದಾರ, ಅನಿಲ್ ಆರ್, ಬಾಲು ರಾಠೋಡ, ಶಿವಪ್ಪ ಮಾಳೋತ್ತರ ಲೋಕಪ್ಪ ಕಾಳಪ್ಪ ರಾಠೋಡ ಈರಪ್ಪ ಕಾಳಪ್ಪ ರಾಠೋಡ ವೀರಭದ್ರಪ್ಪ ಮಾಳೋತ್ತರರತ್ನಪ್ಪ ಮಾಳೋತ್ತರ ಲೋಕಪ್ಪ ರಾಠೋಡ ಮಾರುತಿ ರಾಠೋಡ ಚಂದ್ರು ಅಜ್ಮೀರ್ ಶಿವವ್ವ ,ದೇವಕ್ಕ,ಶಾವವ್ವ ನೂರಾರು ರೈತರು ವಿದ್ಯಾರ್ಥಿಗಳು ಯುವಕರು ಭಾಗವಹಿಸಿದ್ದರು
