ವಿಜಯ ಸಿಂಧೂರ
ಕುರಡಗಿ: ಸ್ಥಳೀಯ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಗುರಿಯಾಗಿಟ್ಟುಕೊಂಡು ಉಚಿತ ಹೊಲಿಗೆಯಂತ್ರ ತರಬೇತಿ ಶಿಬಿರವನ್ನು ಇಂದುಇಂಟಿಗ್ರೇಟೆದ ರೂರಲ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಡಾ, ಸಂಗಮೇಶ ಕೊಳ್ಳಿ ಅವರ ಅಭಿಮಾನಿ ಬಳಗದ ವತಿಯಿಂದ , ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರ ತರಬೇತಿ ಶಿಬಿರ ಬುಧವಾರ ಉದ್ಘಾಟಿಸಲಾಯಿತು.

ಶಿಬಿರವದ ಅಧ್ಯಕ್ಷತೆಯನ್ನು ಸಂಗಮೇಶ ಕೊಳ್ಳಿ ವಹಿಸಿ ಮಾತನಾಡಿ, ದೇಶ ಪ್ರಗತಿಯತ್ತ ಸಾಗಬೇಕಾದರೆ ಹೆಣ್ಣು ಮಕ್ಕಳ ಪಾತ್ರ ಹಾಗೂ ಅವರ ಆರ್ಥಿಕ ಸಬಲೀಕರಣ ತುಂಬಾ ಮುಖ್ಯವಾದದ್ದು. ಮಹಿಳೆಯರು ಹಲವಾರು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬನೆ ಮಾಡುವ ಗುರಿಯನ್ನು ಅನೌಪಚಾರಿಕ ಶಿಕ್ಷಣ ಸಂಸ್ಥೆ ಹೊಂದಿದೆ. ಎಲ್ಲರ ಸಹಭಾಗಿತ್ವದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಬಂದು ಹೊಲಿಗೆ ತರಬೇತಿ ಪಡೆದು, ಮನೆಯಲ್ಲಿ ಬಟ್ಟೆ ಹೊಲೆಯುವ ಮೂಲಕ ಮಹಿಳೆಯರು ಸ್ವಾವಲಂಬನೆ ಹೊಂದಬಹುದು” ಹಾಗೂ ಮಹಿಳೆಯರು ಸ್ವಾವಲಂಬಿಗಳಾಗಲು ಕೌಶಲ್ಯಾಭಿವೃದ್ಧಿ ಅತ್ಯಂತ ಮುಖ್ಯವಾಗಿದ್ದು, ಇಂತಹ ತರಬೇತಿ ಕಾರ್ಯಕ್ರಮಗಳು ಅವರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಡುತ್ತವೆ ಎಂದು ಹೇಳಿದರು.
ಹೊಲಿಗೆ ಕಲೆ ಕಲಿತುಕೊಂಡರೆ ಮನೆಯಲ್ಲಿಯೇ ಸ್ವಂತ ಉದ್ಯಮ ಆರಂಭಿಸಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಉದ್ಘಾಟನೆ ಮಾಡಿದ ವೀರಪ್ಪ ರಾಮಣ್ಣನವರ ಮಾತನಾಡಿ ಅವರ ಅಭಿವೃದ್ಧಿ ನಮ್ಮ ಗ್ರಾಮಿಣ ಅಭಿವೃದ್ಧಿಯ ಮುಖ್ಯ ಅಂಶವಾಗಿದೆ. ಗ್ರಾಮೀಣ ಮಟ್ಟದಲ್ಲಿ ತರಬೇತಿ ಪಡೆದು ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಸ್ವ ಉದ್ಯೋಗ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಗ್ರಾಮಕ್ಕೆ ಒಳ್ಳೆ ಹೆಸರು ಬರುವಂತೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಅದರಂತೆ ನಮ್ಮ ಗ್ರಾಮೀಣ ಮಹಿಳೆಯರು ಕೂಡ ಹೊಲಿಗೆ ತರಬೇತಿ ಪಡೆದು ಸ್ವ-ಉದ್ಯೋಗ ಕೈಗೊಂಡು ಅಭಿವೃದ್ಧಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘಟಕರು, ಗಣ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪವಿತ್ರ ಕುರಿಯವರ, ಜಯಲಕ್ಷ್ಮಿ ವಾಲ್ಮೀಕಿ, ಬಸರಡ್ಡಿ ರಾಯರೆಡ್ಡಿ, ಶಿವಾನಂದ ಬನಹಟ್ಟಿ,ಮಲ್ಲನಗೌಡ ಕರಿಗೌಡ್ರ, ಬಲವಂತ ಅಸುಂಡಿ, ರುದ್ರಪ್ಪ ಕುರಿಯವರ, ಸಿದ್ದು ಹಿರೇಗೌಡ್ರ ಇತರರು ಉಪಸ್ಥಿತರಿದ್ದರು.
