ಶಿಗ್ಲಿ ಗ್ರಾಮದ ಧಾರ್ಮಿಕ ಮುಖಂಡ ವೀರಣ್ಣ ಪವಾಡದ ಅವರ ಮನೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ಸಂಭ್ರಮ

ವಿಜಯ ಸಿಂಧೂರ, ಸುದ್ದಿ

ಲಕ್ಷ್ಮೇಶ್ವರ “ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಯ ಸಂಭ್ರಮ
ಅದರಂತೆ ಲಕ್ಷ್ಮೇಶ್ವರ ಸಮೀಪದ ಶಿಗ್ಲಿ ಗ್ರಾಮದ ಧಾರ್ಮಿಕ ಮುಖಂಡರಾದ ವೀರಣ್ಣ ಪವಾಡದ ಅವರ ಮನೆಯಲ್ಲಿ ಮಣ್ಣೆತ್ತಿನ ಅಮವಾಸೆಯನ್ನು ಸಂಭ್ರಮದಿಂದ ಆಚರಿಸಲಾಯಿತು ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಕುರಿತು ಮಾತನಾಡಿದ ವೀರಣ್ಣ ಪವಾಡದ

“ಮಣ್ಣು” ಮತ್ತು “ಎತ್ತು” ಎಂಬ ಎರಡು ಪದಗಳ ಸಂಯೋಜನೆಯಿಂದ “ಮಣ್ಣೆತ್ತು” ಎಂಬ ಪದ ರೂಪುಗೊಂಡಿದೆ. ಕೃಷಿಯ ಮೂಲಾಧಾರವಾದ ಭೂಮಿ ಮತ್ತು ಕೃಷಿ ಕಾರ್ಯದ ಪ್ರಮುಖ ಸಹಚರರಾದ ಎತ್ತುಗಳ ಮಹತ್ವವನ್ನು ಸಾರುವ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ, ಆಷಾಢ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಈ ಹಬ್ಬವು ಮಳೆಗಾಲದ ಆರಂಭದ ಸಂದರ್ಭದಲ್ಲಿ ಬರುತ್ತದೆ. ರೈತರು ಬಿತ್ತನೆ ಕಾರ್ಯಗಳಲ್ಲಿ ತೊಡಗಿರುವ ಸಮಯದಲ್ಲಿ ತಮ್ಮ ಕೃಷಿ ಜೀವನದ ಬೆನ್ನೆಲುಬಾದ ಎತ್ತುಗಳಿಗೆ ಹಾಗೂ ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ

ಹಿಂದಿನ ಕಾಲದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣವಾಗಿ ಎತ್ತುಗಳ ಮೇಲೆ ಅವಲಂಬಿತವಾಗಿತ್ತು. ಹೊಲ ಉಳುಮೆ ಮಾಡುವುದು. ಗಾಡಿ ಎಳೆಯುವುದು. ಧಾನ್ಯ ಸಾಗಿಸುವುದು ಸೇರಿದಂತೆ ಅನೇಕ ಕಾರ್ಯಗಳಲ್ಲಿ ಎತ್ತುಗಳ ಪಾತ್ರ ಅನನ್ಯವಾಗಿತ್ತು. ಆದ್ದರಿಂದ ರೈತರು ಅವುಗಳನ್ನು ದೇವರ ಸಮಾನವಾಗಿ ಗೌರವಿಸಿ ಪೂಜಿಸುತ್ತಿದ್ದರು. ಆ ಭಾವನೆಯೇ ಇಂದಿಗೂ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆಯಲ್ಲಿ ಜೀವಂತವಾಗಿದೆ.

ಭೂಮಿ ತಾಯಿಯ ಆರಾಧನೆಯ ಹಬ್ಬ;

ಭಾರತೀಯ ಪರಂಪರೆಯಲ್ಲಿ ಭೂಮಿಯನ್ನು “ಭೂಮಾತೆ” ಎಂದು ಗೌರವಿಸಲಾಗುತ್ತದೆ. ಮಾನವನಿಗೆ ಅನ್ನ, ನೀರು, ವಾಸಸ್ಥಳ ಮತ್ತು ಬದುಕಿಗೆ ಅಗತ್ಯವಾದ ಎಲ್ಲ ಸಂಪನ್ಮೂಲಗಳನ್ನು ಭೂಮಿಯೇ ಒದಗಿಸುತ್ತದೆ. ಆದ್ದರಿಂದ ಭೂಮಿಯ ಮೇಲಿನ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆಯಾಗಿದೆ.

ರೈತನು ಭೂಮಿಯನ್ನು ಕೇವಲ ಜಮೀನಾಗಿ ನೋಡುವುದಿಲ್ಲ. ಅವಳನ್ನು ತಾಯಿಯಂತೆ ಕಾಣುತ್ತಾನೆ. ತನ್ನ ಬೆವರನ್ನು ಸುರಿಸಿ ಅವಳನ್ನು ಪೋಷಿಸುತ್ತಾನೆ. ಪ್ರತಿಯಾಗಿ ಭೂಮಿ ತಾಯಿ ಅವನಿಗೆ ಸಮೃದ್ಧ ಬೆಳೆಯನ್ನು ನೀಡುತ್ತಾಳೆ. ಪವಿತ್ರ ಸಂಬಂಧವನ್ನು ಸ್ಮರಿಸುವ ದಿನವೇ ಮಣ್ಣೆತ್ತಿನ ಅಮಾವಾಸ್ಯೆ, ಈ ಹಬ್ಬವು ಭೂಮಿಯ ಫಲವತ್ತತೆಯನ್ನು ಕಾಪಾಡುವ, ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿಯುವ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಸಂದೇಶವನ್ನು ಸಾರುತ್ತದೆ.

ಹಬ್ಬದ ಆಚರಣೆಗಳ ವೈಭವ:

ಮಣ್ಣೆತ್ತಿನ ಅಮಾವಾಸ್ಯೆಯಂದು ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗಿನಿಂದಲೇ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಸಾಂಪ್ರದಾಯಿಕವಾಗಿ ಕೊಬ್ಬರಿ ಎಣ್ಣೆ, ಆರಿಷಿಣ ಅಥವಾ ಬಣ್ಣ ಹಚ್ಚಿ, ಹೂಮಾಲೆಗಳಿಂದ, ಕೊಂಬಣಸು, ಗೋಂಡೆಗಳಿಂದ ಅಲಂಕರಿಸುತ್ತಾರೆ. ಕುತ್ತಿಗೆಗೆ ಗೆಜ್ಜೆಯ ಸರವನ್ನು, ಗಂಟೆಗಳನ್ನು ಕಟ್ಟಿ ಅವುಗಳನ್ನು ಪೂಜಿಸಲಾಗುತ್ತದೆ ಎಂದರು

ಈ ಸಮಯದಲ್ಲಿ ಕುಟುಂಬಸ್ಥರಾದ ನಿರ್ಮಲಾದೇವಿ ವೀರಣ್ಣಾ ಪವಾಡದ.ಲಾವಣ್ಯ ಅನ್ನದಾನೇಶ್ವರ ಪವಾಡದ. ಲಕ್ಷ್ಮೀ ವೀರಸೋಮೇಶ್ವರ ಪವಾಡದ.
ಶಿವಯೋಗರಾಜ. ವಿಜಯ ವೀಣಾ. ನಮ್ರತಾ.ನಂದಿಶ್ವರ ಸೇರಿದಂತೆ ಇದ್ದರ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!