ಬೀದಿ ನಾಯಿಗಳ ಅಟ್ಟಹಾಸ ಆಕಳು ಕರು ಸಾವು

ವಿಜಯ ಸಿಂಧೂರ ಲಕ್ಷ್ಮೇಶ್ವರ

ತಾಲ್ಲೂಕಿನ ಗೊಜನೂರ ಗ್ರಾಮದ ರೈತ ಮುಖಂಡ ಹಾಗೂ ಕೃಷಿಕ ಸಮಾಜ ನವದೆಹಲಿ ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷರಾದ ಆ ಚನ್ನಪ್ಪ ಷಣ್ಮುಖಿ ಎಂಬುವ ರೈತರು ತಮ್ಮ ಮನೆಯಲ್ಲಿ ಸಾಕಿದ ಆಕಳದ ಕರುವಿನ ಮೇಲೆ ಬುಧವಾರ ಬೀದಿ ನಾಯಿಗಳು ದಾಳಿ ಮಾಡಿ ಅಟ್ಟಹಾಸ ಮೆರೆದಿವೆ.

ಕರುವಿಗೆ ಎಲ್ಲೆಂದರಲ್ಲಿ ಕಚ್ಚಿ ಮಾಸ ತಿಂದು ಗಾಯ ಗೊಳಿಸಿ ಕೊನೆಗೂ ಜೀವ ತೆಗೆದ ಘಟನೆ ನಡೆದಿದ್ದು ಆಕಳು ಸಾಕಿ,ಸಲವಿದ್ದ ರೈತ ಕುಟುಂಬದವರು ಕಣ್ಣೀರು ಸುರಿಸುವಂತೆ ಮಾಡಿದೆ.

ಈ ಘಟನೆಗೆ ಮುಖ್ಯ ಕಾರಣ ಗ್ರಾಮದ ಹತ್ತಿರ ಇರುವ ಚಿಕನ್ ಸೆಂಟರ್ , ಆ ಚಿಕನ್ ಸೆಂಟರ್ ಇರುವುದರಿಂದ ಗ್ರಾಮದಲ್ಲಿ ಬೀದಿ ನಾಯಿಗಳು ಹಾವಳಿ ಹೆಚ್ಚಾಗಿದ್ದು ಕಳೆದ ಕೆಲವು ದಿನಗಳ ಹಿಂದೆ ಬೀದಿ ನಾಯಿಗಳ ಹಾವಳಿಗೆ ಕೆಲವು ದನಕರುಗಳು ಗಾಯಗೊಂಡು ಘಟನೆಗಳು ನಡೆದಿದ್ದವು ಈಗ ಆಕಳ ಕರು ಸಾವು ಕಂಡಿದ್ದು ಇದೇ ರೀತಿ ಮುಂದೆ ಯಾವ ಪ್ರಾಣಿ ಪಕ್ಷಿಗಳಿಗೆ ದನ ಕರುಗಳಿಗೆ ಮಕ್ಕಳಿಗೆ ಜೀವ ಹಾನಿ ಹಾಗೂ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪಂಚಾಯತಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಚಿಕ್ಕನ್ ಅಂಗಡಿಯನ್ನು ತೆರೆವು ಗೂಳಿಸಬೇಕು ಎಂದು ಆಕಳುಕರು ಕಳೆದುಕೊಂಡ ರೈತ ಕುಟುಂಬದವರು ಪಂಚಾಯಿತಿಗೆ ಮತ್ತು ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಸಿದ್ದು ಅಧಿಕಾರಿಗಳು ಚಿಕನ್ ಅಂಗಡಿಯನ್ನು ತೆರುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುವುದು ಗ್ರಾಮಸ್ಥರ ಹಾಗೂ ಸಮಗ್ರ ರೈತ ಹೋರಾಟಗಾರರು ಸಹ ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!