ಕೊಪ್ಪಳ: ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಹಾಗೂ ಧಾರ್ಮಿಕ ತಾಣ ಅಂಜನಾದ್ರಿ ಬೆಟ್ಟಕ್ಕೆ ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರು ಪತ್ನಿ ಸಮೇತ ಭೇಟಿ ನೀಡಿದ್ದಾರೆ.ಆಂಜನೇಯನ ಜನ್ಮಭೂಮಿಯಾದ ಕೊಪ್ಪಳ ಜಿಲ್ಲೆಯಹನುಮನಹಳ್ಳಿಯಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಶುಕ್ರವಾರ ರಾಹುಲ್ ದ್ರಾವಿಡ್ ದಂಪತಿ ಆಗಮಿಸಿದರು.

ಪಕ್ಕ ವಿಜಯನಗರ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಗೆ ಸಮೀಪವೇ ಇರುವ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟವಿದೆ. ಬೆಟ್ಟದಲ್ಲಿ ಹನುಮಾನ ದರ್ಶನಕ್ಕಾಗಿ ಬರೋಬ್ಬರಿ 575 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ದ್ರಾವಿಡ್ ದಂಪತಿ ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದಿದ್ದಾರೆ.ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವ ದ್ರಾವಿಡ್ ಅವರು ಕೆಲ ಹೊತ್ತು ಅಂಜನಾದ್ರಿ ಬೆಟ್ಟದಲ್ಲೇ ಕಳದಿದ್ದಾರೆ.
ಸುತ್ತ ಇರುವ ಕಲ್ಲುಬಂಡೆಗಳ ಬೆಟ್ಟ ಗುಡ್ಡವನ್ನು, ಹಂಪಿ ಸೇರಿದಂತೆ ವಿಶಾಲ ಐತಿಹಾಸಿಕ ತಾಣವನ್ನು ಕಣ್ತುಂಬಿಕೊಂಡಿದ್ದಾರೆ.ತುಂಗಭದ್ರಾ ನದಿಯ ಸಮೀಪ ಈ ಪವಿತ್ರ ಕ್ಷೇತ್ರದಲ್ಲಿ ಶ್ರೀ ಹನುಮಂತನನ್ನು ಅಪರೂಪದ ಯಂತ್ರದ ಮಧ್ಯದಲ್ಲಿ ಆಸೀನನಾಗಿ ಪೂಜಿಸಲಾಗುತ್ತದೆ. ಸಂಪ್ರದಾಯದ ಪ್ರಕಾರ, ಮಹಾನ್ ದ್ವೈತ ತತ್ವಜ್ಞಾನಿ ವ್ಯಾಸತೀರ್ಥರು ಇಲ್ಲಿ ಆಂಜನೇಯನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ.
ಇಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗಲಿದೆ ಎಂಬುದು ಜನರ ನಂಬಿಕೆಯಾಗಿದೆ. ಇಂತಹ ಐತಿಹ್ಯವುಳ್ಳ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದು ವಿಶೇಷವಾಗಿತ್ತು.ಮಹಾರಾಜ ಟ್ರೋಫಿಯಲ್ಲಿ ದ್ರಾವಿಡ್ ಪುತ್ರನ ಮಿಂಚುಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಕೋಚ್ ರಾಹುಲ್ ದ್ರಾವಿಡ್. ಭಾರತ ತಂಡ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಚಾಂಪಿಯನ್ ಆದಾಗ ಇವರು ತಂಡದ ಕೋಚ್ ಆಗಿದ್ದಾರೆ.
ಅಲ್ಲದೆ ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನವನ್ನು ಅಲಂಕರಿಸಿತ್ತು.ಇನ್ನು ಒಂದು ಬಾರಿ ಇವರ ಕೋಚಿಂಗ್ ಅವಧಿಯಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೂ ಅರ್ಹತೆ ಪಡೆದಿತ್ತು.
ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸದ್ಯ ಇವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇತ್ತ ಇವರ ಮಗ ಸಮೀತ್ ದ್ರಾವಿಡ್ ಮಹಾರಾಜ ಟ್ರೋಫಿಯಲ್ಲಿ ಮಿಂಚು ಹರಿಸುತ್ತಿದ್ದಾರೆ
