ಗಂಡ ಹೆಂಡತಿ ಜಗಳ ಟವರ್ ಏರುವ ತನಕ..!

ವಿಜಯ ಸಿಂಧೂರ, ಸುದ್ದಿ

ಗದಗ : ಎಣ್ಣೆ ಕುಡ್ದ.. ಹೆಂಡ್ತಿಗೆ ಹೊಡ್ದ.. ಕ್ಷುಲ್ಲಕ ಜಗಳ..! ಹೆಂಡತಿ ತವರು ಸೇರಿದಳು….. ಹೆಂಡತಿ ಬೆಕೆಂದು..ಟವರ್ ಏರಿದ ಭೂಪ..! ಗಂಡ ಹೆಂಡತಿ ಜಗಳ ಟವರ್ ಏರುವ ತನಕ..! ಅರೇ ಇದೇನಂತೀರಾ? ಇಲ್ಲಿದೆ ವಿವರ.
ಹೆಂಡತಿ ಜೊತೆ ಕೋಪ ಮಾಡಿಕೊಂಡು ವ್ಯಕ್ತಿಯೊಬ್ಬ ಟವರ್ ಏರಿದ ಘಟನೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.


ಕೊರ್ಲಹಳ್ಳಿ ನಿವಾಸಿ ನಜೀರಸಾಬ ಎಂಬಾತ ಕಂಠಪೂರ್ತಿ ಕುಡಿದು ಹೆಂಡತಿಯ ಜೋತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡ್ತಿದ್ದ,ಅಲ್ಲದೆ ಹೊಡೆ ಬಡೆಯುದನ್ನೂ ಮಾಡ್ತಿದ್ದನಂತೆ ಇದರಿಂದ ಬೆಸತ್ತ ಹೆಂಡತಿ ತವರು ಮನೆಗೆ ಹೋಗಿದ್ದಾ
ಳೆ.

ಈತನಿಗೆ ತನ್ನ ಹೆಂಡತಿಯನ್ನು ಬಿಟ್ಟಿರಲಾಗದೇ, ನನಗೆ ಹೆಂಡತಿ ಬೇಕು ಎಂದು ಹೇಳಿ ಮೊಬೈಲ್ ಟವರ್ ಏರಿ ಕುಳಿತಿದ್ದ. ವಿಷಯ ತಿಳಿದ ಮುಂಡರಗಿ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ದಂದಿ ನಜೀರಸಾಬನನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು.

ಕೊನೆಗೆ ಟವರ್ ಏರಿದ್ದ ನಜೀರಸಾಬನನ್ನು ಪೊಲೀಸರು ಕೆಳಗಿಳಿಸುವಲ್ಲಿ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ
ಅದೇನೆ ಇರಲಿ ಮನೆಯ ಜಗಳ ಬೀದಿಗೆ ತಂದು ಟಾವ‌ರ್ ಏರಿ ಜೀವದ ಜೊತೆಗೆ ಜಲ್ಲಾಟವಾಡಿದ್ದು ಮಾತ್ರ ವಿಪರ್ಯಾಸ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!