ವಿಜಯ ಸಿಂಧೂರ, ಬೆಂಗಳೂರ
ʻಮೊಗ್ಗಿನ ಮನಸುʼ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶುಭ ಪೂಂಜಾ, ಉದ್ಯಮಿ ಸುಮಂತ್ ಮಹಾಬಲ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು. ಇದೀಗ, ಶುಭ ಪೂಂಜಾ ಅವರು ತಮ್ಮ ವೈವಾಹಿಕ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಹರಡಿದೆ. ಶುಭ ಪೂಂಜಾ ಹಾಗೂ ಅವರ ಪತಿ ಸುಮಂತ್ ಮಹಾಬಲ ಅವರು ಡಿವೋರ್ಸ್ ಪಡೆಯಲು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಿಗೆ ಕಾಡುತ್ತಿದೆ.

ಪ್ರೀತಿಸಿ ಮದುವೆಯಾಗಿದ್ದರು ಶುಭ ಪೂಂಜಾ – ಸುಮಂತ್
ಶುಭ ಪೂಂಜಾ ಮತ್ತು ಸುಮಂತ್ ಮಹಾಬಲ ಅವರು ದೀರ್ಘಕಾಲದ ಗೆಳೆಯರಾಗಿದ್ದರು. ಕೆಲ ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, 2022ರ ಜನವರಿ 5ರಂದು ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಜೋಡಿಯ ಬಾಳಲ್ಲಿ ಬಿರುಗಾಳಿ ಎದ್ದಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ದಾಂಪತ್ಯದಲ್ಲಿ ಬಿರುಕು?
ಶುಭ ಪೂಂಜಾ ಹಾಗೂ ಅವರ ಪತಿ ಸುಮಂತ್ ಮಹಾಬಲ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸುದ್ದಿಯಾಗಿದೆ. ಅಲ್ಲದೇ, ಕೋರ್ಟ್‌ನಲ್ಲಿ ಈ ಜೋಡಿಯ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಿಗದಿಯಾಗದ್ದು, ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಪೂರ್ಣ ಪ್ರಮಾಣದ ಸ್ಪಷ್ಟತೆ ಸಿಕ್ಕಿಲ್ಲ. ಈ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ನಟಿ ಶುಭ ಪೂಂಜಾ ಆಗಲಿ ಅಥವಾ ಅವರ ಪತಿ ಸುಮಂತ್ ಆಗಲಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಿಯಾಲಿಟಿ ಶೋಗಳು :
ಶುಭ ಪೂಂಜಾ ಮತ್ತು ಸುಮಂತ್ ಮಹಾಬಲ ಜೋಡಿ ಮದುವೆಯಾದ ನಂತರ ʻಜೀ ಕನ್ನಡʼ ವಾಹಿನಿಯ ʻಜೋಡಿ ನಂ 1 ಸೀಸನ್ 1’ರಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಈ ಶೋನಲ್ಲಿ ಇಬ್ಬರ ನಡುವಿನ ಬಾಂಡಿಂಗ್ ಮತ್ತು ಕೆಮಿಸ್ಟ್ರಿ ವೀಕ್ಷಕರ ಮನ ಗೆದ್ದಿತ್ತು. ಇನ್ನೂ ʻಬಿಗ್ ಬಾಸ್ʼ, ʻಬಾಯ್ಸ್ ವರ್ಸಸ್ ಗರ್ಲ್ಸ್ʼ ಸೇರಿದಂತೆ ಮತ್ತಷ್ಟು ರಿಯಾಲಿಟಿ ಶೋಗಳಲ್ಲಿ ಶುಭ ಪೂಂಜಾ ಭಾಗವಹಿಸಿದ್ದರು.
ಇದೀಗ ನಟಿ ಶುಭ ಪೂಂಜಾ ಮತ್ತು ಅವರ ಪತಿ ಸುಮಂತ್ ಅವರು ಡಿವೋರ್ಸ್‌ಗಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಅನ್ನೋ ಗಾಸಿಪ್ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿರೋದಂತೂ ಸತ್ಯ.
