ಭೀಮರಾಜ ಸೇನೆಗೆ ಸಾಗರ (ಸಾಬಪ್ಪ) ಪಿ. ತಳವಾರ ನೇಮಕ

ವಿಜಯ ಸಿಂಧೂರ ವಿಜಯಪುರ

ಭೀಮರಾಜ ಸೇನೆಯ ನೂತನ ಪದಾಧಿಕಾರಿಯಾಗಿ ಸಾಗರ (ಸಾಬಪ್ಪ) ಪಿ. ತಳವಾರ ಅವರನ್ನು ಆಯ್ಕೆ ಮಾಡಲಾಗಿದೆ. ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ಆಯ್ಕೆ ಪ್ರಕ್ರಿಯೆ ನೆರವೇರಿತು.

ಸಭೆಯಲ್ಲಿ ಭೀಮರಾಜ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಕಾಂತ್ ಬಿಜಾಪುರ ಹಾಗೂ ರಾಜ್ಯಾಧ್ಯಕ್ಷರಾದ ಶಿವು ನಾಟಿಕರ್ ಅವರು ಉಪಸ್ಥಿತರಿದ್ದು, ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು. ವಿಜಯಪುರದ ದಶರಥ ಕಾಂಬ್ಳೆ, ಉಪಾಧ್ಯಕ್ಷರಾದ ರಾಹುಲ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಸದಸ್ಯರ ಸಮ್ಮುಖದಲ್ಲಿ ಸಾಗರ (ಸಾಬಪ್ಪ) ಪಿ. ತಳವಾರ ಅವರ ನೇಮಕವನ್ನು ಅಧಿಕೃತವಾಗಿ ಘೋಷಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಾಗರ (ಸಾಬಪ್ಪ) ಪಿ. ತಳವಾರ ಅವರು, ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದರ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಸೇವಾ ಚಟುವಟಿಕೆಗಳನ್ನು ವಿಸ್ತರಿಸುವುದಾಗಿ ತಿಳಿಸಿದರು.ಸಭೆಯಲ್ಲಿ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಹಾಗೂ ಮಹಿಳಾ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!