ಅಂಬೇಡ್ಕರ್ ತತ್ವಾದರ್ಶ ಪಾಲಿಸಿ ಅರವಿಂದ ವಡ್ಡರ

ಶಿಕ್ಷಣವೇ ಅಂಬೇಡ್ಕರ್ ಸಂದೇಶಗಜೇಂದ್ರಗಡ:ಶ್ರೇಷ್ಟ ವ್ಯಕ್ತಿಗಳ ಆದರ್ಶ ಕೇಳಿಸಿಕೊಂಡರೆ ಸಾಲದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಉಪನ್ಯಾಸಕ ಅರವಿಂದ ವಡ್ಡರ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ತಾಲೂಕಾ ಆಡಳಿತ,ತಾಲೂಕಾ ಪಂಚಾಯತಿ ಸಮಾಜ ಕಲ್ಯಾಣ ಇಲಾಖೆ,ಪುರಸಭೆ ಗಜೇಂದ್ರಗಡ ಇವರ ಸಹಯೋಗದೊಂದಿಗೆ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ ಅವರ 135ನೇ ಹಾಗೂ ಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ,ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್‌ ಅವರ 119 ನೇ ಜಯಂತಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು ಅಂಬೇಡ್ಕರ್ ಅವರು ಭಾರತದ ಏಕತೆ, ವೈವಿಧ್ಯತೆ, ಸಮಗ್ರತೆ ಮತ್ತು ಸಮಾನತೆಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕರು ಎಂದು ಹೇಳಿದರು. ಶೋಷಿತ ವರ್ಗವನ್ನು ಮುಖ್ಯವಾಹಿನಿಗೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರು, “ಶಿಕ್ಷಣ–ಸಂಘಟನೆ–ಹೋರಾಟ” ಎಂಬ ಮೂಲ ಮಂತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಆದರೆ ಇಂದಿನ ಸಮಾಜದಲ್ಲಿ ಶಿಕ್ಷಣವನ್ನು ಕಡೆಗಣಿಸಿ ಉಳಿದ ಅಂಶಗಳಿಗೆ ಮಾತ್ರ ಒತ್ತು ನೀಡುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿ ಎಸ್ ಐ ಪ್ರಕಾಶ ಡಿ ಮಾತನಾಡಿ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಈ ಮಾದರಿಯನ್ನು ಹಲವು ರಾಷ್ಟ್ರಗಳು ತಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.ಈ ಕಾರ್ಯಕ್ರಮದಲ್ಲಿ ಬಸವರಾಜ ಬಳಗಾನೂರ, ಮರಿಯಪ್ಪ ಹೆಚ್, ಚಂದ್ರಶೇಖರ ಕಂದಕೂರ್, ವಿಜಯ್ ಕುಮಾರ್, ಮಲ್ಲೇಶ್ ಪಜ್ಜಿ, ಶರಣಪ್ಪ ಬೆಟಗೇರಿ, ಮಹಾಂತೇಶ ಹಾದಿಮನಿ,ಶ್ರೀಮತಿ ಗೀತಾ, ಟಿ, ಆಲೂರ್, ರೂಪೇಶ್ ರಾಠೋಡ,ದುಗರಪ್ಪ ಸಂದಿಮನಿ,ಡಿ ಜಿ ಕಟ್ಟಿಮನಿ, ರವಿ ಗಡೆದವರ್,ಬಸುವರಾಜ ಬಂಕದ,ಪೀರು ರಾಠೋಡ, , ಮಾರುತಿ ಹಾದಿಮನಿ,ಹನುಮಂತ ಪೂಜಾರ, ಕನಕಪ್ಪ ಕಲ್ಲೊಡರ್,ಪ್ರಕಾಶ್ ರಾಠೋಡ, ಲಕ್ಷ್ಮಣ ಬಂಕದ, ಇತರರು ಉಪಸ್ಥಿತರಿದ್ದರು ಬಾಕ್ಸ್ ಇನ್ನು ತೆರೆದ ವಾಹನದಲ್ಲಿ ಇಬ್ಬರು ಮಹನೀಯರ ಭಾವಚಿತ್ರವನ್ನು ಡಾ.ಅಂಬೇಡ್ಕರ್ ವೃತ್ತದಿಂದ ಗಜೇಂದ್ರಗಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮಾಡಲಾಯಿತು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!