ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳಷ್ಟೇ ಸಾಲದು, ಸಂಸ್ಕಾರ ಮತ್ತು ರೀತಿ-ನೀತಿಗಳು ಮುಖ್ಯ: ಡಾ. ಪ್ರಕಾಶ. ಎನ್.ನರಗುಂದ

ವಿಜಯ ಸಿಂಧೂರ ತಾಳಿಕೋಟೆ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗಳಿಸುವ ಅಂಕಗಳಷ್ಟೇ ಅಲ್ಲದೆ, ಜೀವನದಲ್ಲಿ ಉತ್ತಮ ಸಂಸ್ಕಾರ, ಧರ್ಮದ ಹಾದಿ ಹಾಗೂ ಹಿರಿಯರಿಗೆ ಗೌರವ ನೀಡುವ ರೀತಿ-ನೀತಿಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಮುದ್ದೇಬಿಹಾಳದ ಪ್ರಾಧ್ಯಾಪಕರಾದ ಡಾ. ಪ್ರಕಾಶ. ಎನ್.ನರಗುಂದ ಅಭಿಪ್ರಾಯಪಟ್ಟರು

.ಸ್ಥಳೀಯ ಎಸ್‌ಕೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಹಾಗೂ ಪೂಜ್ಯ ಖಾಸಗತೇಶರ ಆಶೀರ್ವಾದದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಪ್ರೇರಣಾದಾಯಿ ಮಾತುಗಳನ್ನಾಡಿದರು

.ಪ್ರಮುಖ ವಿಚಾರಗಳು:ಸಂಸ್ಕಾರದ ಮಹತ್ವ: ವಿದ್ಯಾರ್ಥಿಗಳು ಕೇವಲ ಪುಸ್ತಕದ ಬದನೆಕಾಯಿಯಾಗದೆ, ಮನೆತನದ ಆಚಾರ-ವಿಚಾರ ಹಾಗೂ ಪೂರ್ವಜರು ಹಾಕಿಕೊಟ್ಟ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು.ಸಮಯ ಮತ್ತು ಮೊಬೈಲ್ ಬಳಕೆ: ಸಮಯ ಅತ್ಯಂತ ಬೆಲೆಬಾಳುವಂತದ್ದು. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ (WhatsApp, Facebook, YouTube) ಅನಗತ್ಯ ಬಳಕೆಯಿಂದ ದೂರವಿದ್ದು, ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.

ಸಾಹಿತ್ಯದ ಅರಿವು: ಬಸವಣ್ಣ, ಅಕ್ಕಮಹಾದೇವಿ ಹಾಗೂ ದರಾ ಬೇಂದ್ರೆಯವರ ಸಾಹಿತ್ಯದಲ್ಲಿ ಜೀವನದ ನಿಜವಾದ ಮೌಲ್ಯಗಳಿವೆ. ಜಾನಪದ ಸಾಹಿತ್ಯ ಮತ್ತು ತತ್ವಪದಗಳು ಮಾನವನಿಗೆ ನೈಜ ದಾರಿ ತೋರಿಸುತ್ತವೆ.ಗುರು-ಹಿರಿಯರ ಗೌರವ: ಹೆತ್ತ ತಂದೆ-ತಾಯಂದಿರು ಮತ್ತು ಬೋಧಿಸಿದ ಶಿಕ್ಷಕರ ಶ್ರಮಕ್ಕೆ ಗೌರವ ನೀಡಿ, ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತರುವ ರೀತಿಯಲ್ಲಿ ಬೆಳೆಯಬೇಕು.”ವಿದ್ಯಾ ಧನವು ಸರ್ವ ಧನಕ್ಕಿಂತ ಶ್ರೇಷ್ಠವಾದುದು. ‘ಕಾಯಕವೇ ಕೈಲಾಸ’ ಎಂಬ ತತ್ವದಂತೆ ಸತತ ಅಭ್ಯಾಸ, ಶ್ರಮ ಹಾಗೂ ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಂಡಿತ ಸಾಧ್ಯ” ಎಂದು ಅವರು ಹೇಳಿದರು.ಪಿಯು ಕಾಲೇಜಿನ ಚೇರಮನ್ನರು ಎಮ್. ಆರ್. ಕತ್ತಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ನಮ್ಮಲ್ಲಿ ಭೋದನೆ, ಹೆಚ್ಚು ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅನುಸರಿಸುತ್ತ ಸಾಗಿ ಎಂದು ಸಲಹೆ ನೀಡಿದರು.ವಿ ವಿ ಸಂಘದ ಸದಸ್ಯರು ದ್ಯಾಮನಗೌಡ. ಕೆ.ಪಾಟೀಲಮಾತನಾಡಿದರು. ವಿವಿ ಸಂಘದ ಸಹ ಕಾರ್ಯದರ್ಶಿ ಆರ್.ಸಿ . ಪಾಟೀಲ ಅವರು ಸಸಿಗೆ ನೀರುಣಿಸಿ ಸಮಾರಂಭ ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಕಿಶೋರಕುಮಾರ ಕೆ. ಅವರು ಸ್ಥಳದಲ್ಲಿಯೇ ಡಾ| ಪ್ರಕಾಶ ಅವರ ಕುರಿತು ತಾವು ರಚಿಸಿದ ಕವನ ವಾಚಿಸಿದರು. ಇದೇ ಸಮಯದಲ್ಲಿ ಸಿಬ್ಬಂದಿ ಪಿ.ಆರ್. ಚಲವಾದಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ವಿವಿ ಸಂಘದ ಉಪಾಧ್ಯಕ್ಷ ಕಾಶೀನಾಥ ಮುರಾಳ, ಕಾರ್ಯದರ್ಶಿ ಎಂ.ಎಸ್. ಸರಶೆಟ್ಟಿ, ಸಹ ಕಾರ್ಯದರ್ಶಿ ಆರ್.ಸಿ. ಪಾಟೀಲ, ನಿರ್ದೇಶಕ ಮಂಡಳಿಯವರಾದ ಕೆ.ಸಿ. ಸಜ್ಜನ, ಎಂ.ಜಿ. ಕತ್ತಿ, ಗುರನಗೌಡ ಪಾಟೀಲ, ಶಂಕರಗೌಡ ಪಾಟೀಲ ಹಾಗೂ ಕಾಲೇಜ್ ಸಿಬ್ಬಂದಿಗಳಾದ ತಾರಾ ಕಾಂಬಳೆ, ಎ.ಆರ್. ಜೋಗುರ, ಎಸ್.ಎಸ್. ನೆಲ್ಲಿಗಿ, ಸಿ.ಜಿ. ಮಠಪತಿ,

ಎಸ್.ಐ. ಗಾಣಗೇರ, ಎಸ್.ಕೆ. ನಾಟೀಕಾರ, ಕೆ.ಸಿ. ಸಜ್ಜನ, ಕೆ.ಆರ್. ಹೊಟಗಾರ, ಕುಮಾರ ಪವಾರ ಇದ್ದರು.ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಮಾಣ ವಚನ ಬೋಧನೆ ಕಾರ್ಯಕ್ರಮ ನಡೆಯಿತು. ಅನನ್ಯಾ ನಾಯಕ ಭರತನಾಟ್ಯ ಪ್ರದರ್ಶಿಸಿದರು. ಶಿಕ್ಷಕ ಮೇಟಿ ಸ್ವಾಗತಗೀತೆ ಹಾಡಿದರು. ಪ್ರಾಧ್ಯಾಪಕ ಡಾ| ಹನುಮಂತ ಪಿ. ನಾಯಕ ಸ್ವಾಗತಿಸಿದರು. ಉಪನ್ಯಾಸಕ ಎಚ್.ಆಯ್. ಬೇರಗಿ ನಿರೂಪಿಸಿದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!