ರೋಟರಿ ಕಣ್ಣೆನ ಆಸ್ಪತ್ರೆಯಲ್ಲಿ ೬ ಜನರಿಗೆ ನೇತ್ರ ಶಸ್ತ ಚಿಕಿತ್ಸೆ

ವಿಜಯ ಸಿಂಧೂರ ಗದಗ

ರೋಟರಿ ಕ್ಲಬ್ ಗದಗ-ಬೆಟಗೇರಿ, ಇನ್ನರ್ ವ್ಹೀಲ್ ಸಂಸ್ಥೆ, ಗದಗ ಇವರ ಸಹಯೋಗದೊಂದಿಗೆ ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿ (ಜಿ¯್ಲÁ ಸ್ಟೇಡಿಯಂ ಹತ್ತಿರ) ನೇತ್ರ ತಪಾಸಣೆ ಹಾಗೂ ಕಣ್ಣಿನಲ್ಲಿ ಮಸೂರ ಅಳವಡಿಸುವ ಈ ಶಸ್ತç ಚಿಕಿತ್ಸಾ ಶಿಬಿರನವನ್ನು ಏರ್ಪಡಿಲಾಗಿತ್ತು. ಸುಮಾರು ೧೫ ಜನ ರೋಗಿಗಳನ್ನು ತಪಾಸಣೆ ಮಾಡಿ ಶಸ್ತç ಚಿಕಿತ್ಸೆ ಅವಶ್ಯವಿದ್ದ ಹಾಗೂ ಯೋಗ್ಯರಾದ ೦೬ ಜನರಿಗೆ ನೇತ್ರ ಶಸ್ತç ಚಿಕಿತ್ಸೆಯುನ್ನು ಕೈಗೊಳ್ಳಲಾಯಿತು.

೨೦೭ನೇ ಶಸ್ತç ಚಿಕಿತ್ಸೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಧರ ಸುಲ್ತಾನಪೂರ ವಹಿಸಿ, ಸಂಸ್ಥೆಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಿ ಸಂಸ್ಥೆಯು ಯಾವ ರೀತಿ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತದೆಂದು ತಿಳಿಸಿದರು.  ಐ.ಒ.ಎಲ್. ಚೇರಮನ್ನರಾದ ರೊ. ಡಾ.ಶೇಖರ ಡಿ. ಸಜ್ಜನರ ಮಾತನಾಡುತ್ತಾ ಚಿಕಿತ್ಸೆ ಪಡೆದ ಪ್ರತಿಯೊಬ್ಬ ರೋಗಿಯು ವೈದ್ಯರು ತಿಳಿಸದ ಸಲಹೆಗಳನ್ನು ಪಾಲಿಸಬೇಕೆಂದರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊ. ಡಾ. ರಾಜೇಂದ್ರ ಗಚ್ಛಿನಮಠ, ರೊ. ಶ್ರೀಧರ ಧರ್ಮಾಯತ, ರೊ. ಹೆಚ್. ಎಸ್. ಪಾಟೀಲ ವೇದಿಕೆಯಮೇಲೆ ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಗಚ್ಛಿನಮಠ, ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿಗಳಾದ ರೊ. ಬಾಲಕೃಷ್ಣ ಕಾಮತ್ ಕಾರ್ಯಕ್ರಮ ನಿರೂಪಿಸಿದರು.  ರೋಟರಿ ಸಂಸ್ಥೆಯ ಕಾರ್ಯದರ್ಶಿಗಳಾದ ರೊ. ಸುರೇಶ ಕುಂಬಾರ ವಂದಿಸಿದರು. ಡಾ. ಜ್ಯೋತಿ ಪಾಟೀಲ ಶಸ್ತç ಚಿಕಿತ್ಸೆಯನ್ನು ನೆರವೇರಿಸಿ ಎಲ್ಲ ರೋಗಿಗಳಿಗೆ ದೃಷ್ಠಿ ಕಾಪಾಡಿಕೊಳ್ಳಲು ಸಲಹೆ ಹಾಗೂ ಸೂಚನೆ ನೀಡಿದರು. ನೇತ್ರ ಸಹಾಯಕರಾದ ಶ್ರೀ ರುದ್ರೇಶ ಶಸ್ತç ಚಿಕಿತ್ಸೆಗೆ ಒಳಗಾದ ರೋಗಿಗಳು ತಮ್ಮ ಕಣ್ಣಿನ ಆರೋಗ್ಯವನ್ನು ಯಾವ ರೀತಿ ಕಾಳಜಿವಹಿಸಬೇಕೆಂದು ತಿಳಿಸಿದರು.   
 ರೋಟರಿ ಸಂಸ್ಥೆ ವೆಲ್ ಫೇರ್ ಸೊಸಾಯಿಟಿಯ ಖಜಾಂಚಿಗಳಾದ ರೊ. ಚನ್ನವೀರಪ್ಪ ಹುಣಶಿಕಟ್ಟಯವರು, ಸದಸ್ಯರಾದ,  ರೊ. ಡಾ. ಪ್ರದೀಪ ಉಗಲಾಟ, ರೊ. ಡಾ. ಕಮಲಾಕ್ಷಿ ಅಂಗಡಿ, ರೊ. ಅಕ್ಷಯ ವ್ಹಿ ಶೆಟ್ಟಿ, ರೊ.ವಿಶ್ವನಾಥ ಯಳಮಲಿ, ರೊ. ಪ್ರೀತಿ ಶಿವಪ್ಪನಮಠ, ಡಾ ವಿನಯ್ ಟಿಕಾರೆ, ರೊ ಮಹೇಶ ಹಿಂಡಿ, ರೊ. ಶಿವಾಚಾರ್ಯ ಹೊಸಳ್ಳಿಮಠ, ಮುಂತಾದವರು ಉಪಸ್ಥಿತರಿದ್ದರು. ಈ ಶಸ್ತç ಚಿಕಿತ್ಸಾ ಶಿಬಿರದಲ್ಲಿ ರುದ್ರೇಶ, ನೇತ್ರಾ, ಆನಂದ ಸಿಂಗ್ರಿ ನೇತ್ರ ಶಸ್ತç ಚಿಕಿತ್ಸೆ ನಡೆಸಲು ಸಹಾಯ ಮಾಡಿದರು. 

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!