ಲಿಂಗೈಕ್ಯ ಬಸವಪ್ರಭುದೇವರ ಧರ್ಮಸೇವೆ ಸ್ಮರಣೀಯ: ಗಂಗಾಧರ ಕಸ್ತೂರಿ

ವಿಜಯ ಸಿಂಧೂರ ತಾಳಿಕೋಟೆ

ಪಟ್ಟಣದ ಖ್ಯಾತ ಪ್ರವಚನಕಾರ, ವಾಗ್ಮಿ, ಕವಿ ಹಾಗೂ ಲೇಖಕರಾದ ಲಿಂಗೈಕ್ಯ ಬಸವಪ್ರಭುದೇವರು ಕೈಲಾಸಪೇಟೆ ಅವರ ಸ್ಮರಣಾರ್ಥವಾಗಿ ತಾಲ್ಲೂಕಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಶಿವಾಜಿ ಚೌಕದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಗಂಗಾಧರ ಕಸ್ತೂರಿ, ತಾಳಿಕೋಟೆ ಪಟ್ಟಣದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಬಸವಪ್ರಭುದೇವರ ಕೊಡುಗೆ ಅಪಾರವಾಗಿದೆ. ಅವರು ಆಧ್ಯಾತ್ಮ ಮತ್ತು ಅನುಭಾವದ ಮೇರುಶಿಖರವಾಗಿದ್ದು, ಮೌಢ್ಯಗಳ ವಿರುದ್ಧ ಸದಾ ಧ್ವನಿಯಾಗಿದ್ದರು ಎಂದು ಹೇಳಿದರು.

ಸರಳತೆ, ಸಜ್ಜನಿಕೆ ಮತ್ತು ನಿಷ್ಠೆಯಿಂದ ಜನಮನ ಗೆದ್ದ ಬಸವಪ್ರಭುದೇವರು ಕಾಶಿಗೆ ತೆರಳಿ ವೇದ, ಶಾಸ್ತ್ರ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಹಲವು ಭಾಷೆಗಳ ಮೇಲೆ ಪಾಂಡಿತ್ಯ ಹೊಂದಿದ್ದರು. ತಮ್ಮ ಪುರಾಣ ಹಾಗೂ ಪ್ರವಚನಗಳಲ್ಲಿ ಹಾಸ್ಯಪೂರಿತ ಶೈಲಿಯಿಂದ ಜೀವನದ ಅನುಭವಗಳನ್ನು ಹಂಚಿ, ಆಧ್ಯಾತ್ಮವನ್ನು ಸರಳವಾಗಿ ಜನರಿಗೆ ತಲುಪಿಸಿದ್ದರು.ತಮ್ಮ ನೋವನ್ನು ಹಂಚದೇ ಸದಾ ನಗು ಮತ್ತು ಸಂತೋಷವನ್ನು ಹಂಚುತ್ತಿದ್ದ ಅವರು, ಶ್ವೇತವಸ್ತ್ರಧಾರಿಗಳಾಗಿ ಬಸವಾದಿ ಪ್ರಮಥರ ವಚನಗಳನ್ನು ಮನೆಮನೆಗೆ ಮುಟ್ಟಿಸಿದ ಮಹನೀಯರಾಗಿದ್ದರು. ಶರಣರ ತ್ರಿಪದಿ, ನಾಮಾವಳಿ, ಕವನ ಸಂಕಲನ, ಆಧುನಿಕ ವಚನಗಳು, ಜನಪದ, ಭಕ್ತಿ ಗೀತೆಗಳು ಹಾಗೂ ವಿಡಂಬನಾ ಕೃತಿಗಳನ್ನು ರಚಿಸಿರುವುದು ಅವರ ಸಾಹಿತ್ಯ ಸೇವೆಯ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಎಸ್. ಗಡೇದ ನುಡಿನಮನ ಸಲ್ಲಿಸಿದರು. ನಂತರ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಬಸವಪ್ರಭುದೇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಾಹೇಬಗೌಡ ಬಿರಾದಾರ, ಈರಣ್ಣ ಕಲಬುರ್ಗಿ, ಕಾಶಿನಾಥ ಸಜ್ಜನ, ಜಗದೀಶ ಬಿಳೇಭಾವಿ, ಅಶೋಕ ಚಿನಗುಡಿ, ಈರಣ್ಣ ಜಿಗಜಿನ್ನಿ, ಜೈಸಿಂಗ ಮೂಲಿಮನಿ, ರಾಜು ದೇಗಿನಾಳ, ಬಸವರಾಜ ಕುಂಬಾರ, ಶಿವಲಿಂಗಪ್ಪ ಪಾಲ್ಕಿ, ಸಂಗಮೇಶ ಪಾಲ್ಕಿ, ಅಪ್ಪು ಕಲ್ಲೂರ, ಅಶೋಕ ಬಳಗಾನೂರ, ಗುಂಡುರಾವ ಧನಪಾಲ, ಮಲ್ಲಿಕಾರ್ಜುನ ಹಿಪ್ಪರಗಿ, ಮಂಜುನಾಥ ಶೆಟ್ಟಿ, ಆರ್.ವಿ. ಜಾಲವಾದಿ, ಜಿ.ಎಸ್. ಜಮ್ಮಲದಿನ್ನಿ, ಶಿವರಾಜ ಚೌಧರಿ, ವಿಶ್ವನಾಥ ಕತ್ತಿ, ಅಪ್ಪುಗೌಡ ಪಾಟೀಲ, ಭೀಮಣ್ಣ ಸೂಳಿಭಾವಿ, ಉಮಾ ಸಾಲಂಕಿ, ಪ್ರಶಾಂತ ಅಂಬಿಗೇರ, ವೈ.ಬಿ. ಬಡಿಗೇರ, ಶಶಿ ಮೂಕಿಹಾಳ, ಮಹಾಂತೇಶ ಸಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!