ಭೀಕರ ರಸ್ತೆ ಅಪಘಾತ ಅಕ್ಕ ತಮ್ಮ ಸಾವು

ವಿಜಯ ಸಿಂಧೂರ, ಲಕ್ಷ್ಮೇಶ್ವರ

ಲಕ್ಷ್ಮೇಶ್ವರ-ಸವಣೂರು ರಸ್ತೆಯ ಸಂಕ್ಲಿಪೂರ ಕ್ರಾಸ್ ಹತ್ತಿರ ಶುಕ್ರವಾರ ಸಂಜೆ 7:00 ಗಂಟೆಯ ಸುಮಾರಿಗೆ ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಅಪಘಾತ ಸಂಭವಿಸಿದ್ದು ಭೀಕರ ರಸ್ತೆ ಅಪಘಾತ ಅಕ್ಕ ತಮ್ಮ ಸಾವು

ಅಪಘಾತದಲ್ಲಿ ಸವಣೂರ ತಾಲೂಕಿನ ವಡ್ನಿಕೊಪ್ಪ ಗ್ರಾಮದ ಗೌರವ್ವ ತಮ್ಮ ಫಕೀರೇಶ ಪಾರ್ಕಿ ಎಂಬ ಒಂದೇ ಕುಟುಂಬದ ಅಕ್ಕ ತಮ್ಮ ಸಾವನಪ್ಪಿದ್ದು ಅಕ್ಕ ಗೌರವ್ವ 48 ವರ್ಷ ಸ್ಥಳದಲ್ಲಿ ಮೃತಪಟ್ಟಿದ್ದು ತಮ್ಮ 46 ವರ್ಷದ ಫಕೀರೇಶನನ್ನು ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜೀನ್ಸ್ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ

ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!