ಅವಿರೋಧ ಆಯ್ಕೆ: ಸನ್ಮಾನ


ವಿಜಯ ಸಿಂಧೂರ ನವಲಗುಂದ

ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ನೂತನ ಆಡಳಿತ ಮಂಡಳಿಯ ನಿರ್ದೇಶಕ ಚುನಾವಣೆಯಲ್ಲಿ ಅವಿರೋಧವಾಗಿ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ನಿಯಮಿತ, ನವೀಲತೀರ್ಥ, ಸವದತ್ತಿ ಇದರ ಅಧ್ಯಕ್ಷರಾದ ಸದುಗೌಡ ಪಾಟೀಲ ಅವರಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಬೆಣ್ಣೆ ತೋರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಂಘ ನಿಯಮಿತ, ಹೆಬ್ಬಾಳ, ಕಲಬುರ್ಗಿ ಜಿಲ್ಲೆಯ ಅಧ್ಯಕ್ಷರಾದ ಮುಸ್ತಾನ್ ಸಾಬ್ ಬಿನ್ ಇಬ್ರಾಹಿಂಸಾಬ ಕಲಗುರ್ಗಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ವಿಜಯ ಕುಲಕರ್ಣಿ, ವಿ.ಎ. ಚಿಕ್ಕಮಠ, ಜಿ.ಐ. ಕುರಹಟ್ಟಿ, ಡಿ.ವಾಯ್. ಕಾಡಪ್ಪನವರ, ಬಿ.ಕೆ. ಡುಮ್ಮಾಳೆ, ಸುರೇಶ ನಿಡವಣಿ, ಬಿ.ವಾಯ್. ಬೂದಿಹಾಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!