ಪಕ್ಷಿಗಳಿಗೆ ನೀರಿನಷಅರವಟಿಗೆ ಅನುಕೂಲ

ವಿಜಯ ಸಿಂಧೂರ

ತಾಳಿಕೋಟೆ :ಬೇಸಿಗೆ ಸಮೀಪಿಸುತ್ತಿದ್ದಂತೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಎದುರಿಸುತ್ತವೆ. ಅದರಲ್ಲೂ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತವೆ.

ಈ ಹಿನ್ನೆಲೆಯಲ್ಲಿ ಬಸವ ಚೇತನ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ವನ್ಯಜೀವಿಗಳಿಗೆ ಕುಡಿಯವ ನೀರಿನ ವ್ಯವಸ್ಥೆ ಮಾಡಿದ್ದು, ತನ್ನ ವ್ಯಾಪ್ತಿಯಲ್ಲಿ ಬರುವ ಅನೇಕ ಕಡೆ ಹೊಲಗಳನ್ನು ಗುರುತಿಸಿ ಅರವಟ್ಟಿಗೆ ಕಾರ್ಯ ಆರಂಭಿಸಿದೆ.

ಈ ಸಂಘದ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಬೇಸಿಗೆಯ ಬಿಸಿಲಿನಿಂದಾಗಿ ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿದು. ಅವುಗಳ ರಕ್ಷಣೆಗಾಗಿ ಸಾರ್ವಜನಿಕರು ಮನೆಗಳ ಮೇಲೆ ಗಿಡಮರಗಳ ಅಡಿಯಲ್ಲಿ ನೀರಿನ ಅರವಟ್ಟಿಗೆ ಅಥವಾ ಪಾತ್ರೆಗಳನ್ನು ಇಟ್ಟು ನೀರುಡಿಸುವಂತೆ ಜಾಗೃತಿ ಮೂಡಿಸಲಾಗಿದೆ ಮೂಕ ಪ್ರಾಣಿ ಪಕ್ಷಿಗಳು ದಾಹ ತಣಿಸಲು ಈ ಮಾನವೀಯ ಕಾರ್ಯವು ಮುಖ್ಯವಾಗಿದೆ ಎಂದು ಶ್ರೀ ಬಸವಚೇತನ ಗ್ರಾಮೀಣ ಅಭಿವೃದ್ಧಿ ಸಂಘವು ಶ್ರೀ ಬಸವ ಗೋಶಾಲೆ ಗೋ ರಕ್ಷಾ ಕೇಂದ್ರ ಈ ಕಾರ್ಯ ಹಮ್ಮಿಕೊಂಡಿದೆ.

ಈ ಸಂದರ್ಭದಲ್ಲಿ ಸಂಘದ ಸಂಗಮೇಶ ಎಸ್.ಹರನಾಳ, ಕಾರ್ಯದರ್ಶಿ ಗುರುರಾಜ ಕಾಜಗಾರ, ಪದಾಧಿಕಾರಿಗಳಾದ ಗೌಡಪ್ಪಗೌಡ ಬಿರಾದಾರ, ಮುತ್ತು ವಡ್ಡೋಡಗಿ, ಕುಮಾರ್ ಹರನಾಳ, ವಿಜಯಕುಮಾರ ಸಾಸನೂರ, ರಮೇಶ ಹರವಾಳ ಹಾಗೂ ಸಂಗಡಿಗರು ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!