ಶೇಕಡಾ 100 ರಷ್ಟು ಫಲಿತಾಂಶ – ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಭರ್ಜರಿ ಸಾಧನೆ


ತಾಳಿಕೋಟೆ :ಎಸ್.ಎಸ್. ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಯು 2025–26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ.
ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಚ್. ಎಸ್. ಪಾಟೀಲ, ಕಾರ್ಯದರ್ಶಿಗಳಾದ ಸಚಿನ್ ಎಚ್. ಪಾಟೀಲ ಹಾಗೂ ಆಡಳಿತಾಧಿಕಾರಿಗಳಾದ ಕಿರಣ ಎಚ್. ಪಾಟೀಲ ಅವರು ಸಂತೋಷ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಭಿನಂದಿಸಿದ್ದಾರೆ.


ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ ಕಟ್ಟಿ ಅವರ ಮಾರ್ಗದರ್ಶನದಲ್ಲಿ, ಶಿಕ್ಷಕರಾದ ಬಿ.ಐ. ಹಿರೇಹೊಳಿ, ಎಸ್.ವಿ. ಜಾಮಗೊಂಡಿ, ಎಚ್.ಬಿ. ಪಾಟೀಲ, ಎಸ್.ಸಿ. ಗುಡಗುಂಟಿ, ಎಂ.ಎಸ್. ರಾಯಗೊಂಡ, ಯು.ಸಿ. ಗಟನೂರ, ಎಸ್.ಬಿ. ಸಾಸನೂರ ಮತ್ತು ದುಶಿಂಗ ಪೂಜಾರಿ ಅವರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ.
ವಿದ್ಯಾರ್ಥಿಗಳ ವಿಶೇಷ ಸಾಧನೆಗಳು:
ಪ್ರಥಮ: ಸಾವಿತ್ರಿ ದೇ. ತೋಟದ – 558 ಅಂಕಗಳು
ದ್ವಿತೀಯ: ಸೀತಾ ಸಿ. ರಾಠೋಡ
ತೃತೀಯ: ರಾಹುಲ್ ವಿ. ಜಾಧವ – 532 ಅಂಕಗಳು
ಹಿಂದಿ ವಿಷಯದಲ್ಲಿ ಕಾವೇರಿ ಧ. ಜಾಧವ ಮತ್ತು ಪೂಜಾ ಚಂ. ಪೂಜಾರಿ ಅವರು 100 ಕ್ಕೆ 100 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಈ ವಿದ್ಯಾರ್ಥಿಗಳು ಸಂಸ್ಥೆ ಹಾಗೂ ಪ್ರೌಢಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!