ಸಿದ್ದನಕೊಳ್ಳದ ಮಹಾ ತಪಸ್ವಿ ಲಿಂ.ಸಿದ್ದಪ್ಪಜ್ಜನವರ 51ನೇ ಪುಣ್ಯಾರಾಧನೆ.

ವಿಜಯ ಸಿಂಧೂರ, ನರಗುಂದ

ಇಳಕಲ್ ತಾಲೂಕ ಸಿದ್ದನಕೊಳ್ಳದ ಕಲಾವಿದರ ಮಠವೆಂದೆ ಪ್ರಖ್ಯಾತಿ ಪಡೆದ ಸಿದ್ದಪ್ಪಜ್ಜನ ಮಠದಲ್ಲಿ ಮಹಾತಪಸ್ವಿ ಲಿಂಗೈಕ್ಯ ಸಿದ್ದಪ್ಪಜನವರ 51 ನೆ ವರ್ಷದ ಪುಣ್ಯರಾಧನೆ ದಿನಾಂಕ 24-04-2026 ರಂದು ಶ್ರೀ ಕ್ಷೇತ್ರ ಸಿದ್ದನಕೊಳ್ಳದಲ್ಲಿ ನೆಡೆಯಲಿದೆ

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ವಿಶೇಷ ಆಹ್ವಾನಿತರಾದ ಹೈದ್ರಾಬಾದ್ ಗೋ ಸಂರಕ್ಷಣಾ ಸಂಘದ ಸಂಜೀವಕುಮಾರ್ ಗುಪ್ತಾ, ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಲೋಕೇಶ ವಿದ್ಯಾಧರ, ಚಿತ್ರನಟಿ ಸುನಂದಾ ಕಲಬುರ್ಗಿ, ಸತೀಶ ಓಸ್ವಾಲ್, ರಾಘವೇಂದ್ರ ಕುಲಕರ್ಣಿ, ವಿಜಯ ನಾಯಕ, ಬಿರಾದಾರ್ ಎಂ ಎನ್, ಡಾ. ಬಿಂದು ದರ, ವಿವೇಕ್ ಗುಣಾರಿ, ಶ್ರೀ ಸಾಯಿರಾಂ, ದೋತ್ರೆ ಬಂದುಗಳು, ಹಾಗೂ ಹೂಗಾರ ಚಿತ್ರ ತಂಡದ ಕಲಾವಿದರು, ಮತ್ತು ಈ ಕಾರ್ಯಕ್ರಮದಲ್ಲಿ ವೀರು ಐಹೋಳೆ ಮತ್ತು ಚಂದ್ರು ಗುಡಾದೂರಕಲ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನೆಡೆಯಲಿದೆ ಎಂದು ಕಲಾ ಪೋಷಕರ ಮಠದ ಧರ್ಮಧಿಕಾರಿಗಳಾದ ಡಾ. ಶಿವಕುಮಾರ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!