ವಿಜಯ ಸಿಂಧೂರ ಸಿಂಧಗಿ
ಸಮುದಾಯ ಭವನಗಳು ಗ್ರಾಮೀಣ ಜನರ ಸಾಂಸ್ಕೃತಿಕ ಕೇಂದ್ರಗಳಾಗುವ ಜೊತೆಗೆ ಎಲ್ಲಾ ತಳ ಸಮುದಾಯದ ಜನರು ಸಭೆ, ಸಮಾರಂಭ, ನಿಶ್ಚಿತಾರ್ಥ, ಮದುವೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಕಲ್ಪಿಸಿವೆ. ಬಡ ಜನತೆಗೆ ಸಮುದಾಯ ಭವನಗಳನ್ನ ನಿರ್ಮಾಣ ಮಾಡುವುದರಿಂದ ಅತ್ಯಂತ ಅನುಕೂಲವಾಗಲಿದೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.

ಅವರು ಲೋಕೋಪಯೋಗಿ ಇಲಾಖೆಯ 2025-26 ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಿಂದಗಿ ನಗರದ ಎಪಿಎಂಸಿ ಶ್ರೀ ಗಣಪತಿ ದೇವಸ್ಥಾನ ಹತ್ತಿರ ಸಮುದಾಯ ನಿರ್ಮಾಣಕ್ಕಾಗಿ ಮಂಜೂರಾದ 25 ಲಕ್ಷ ರೂ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ದೇವಸ್ಥಾನದ ಸಮಿತಿಯವರು ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು
ಆ ದೃಷ್ಟಿಯಲ್ಲಿ ಸಿಂದಗಿ ಪಟ್ಟಣದ ಎಪಿಎಂಸಿ ಗಣೇಶ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನವನ್ನ ನಿರ್ಮಾಣ ಮಾಡುವ ಪಣ ತೊಟ್ಟಿದ್ದೇನೆ . ಇಂದು ಸಣ್ಣ ಸಣ್ಣ ಸಮಾರಂಭಗಳು ನಡಿಯಬೇಕೆಂದರೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ನಗರದಲ್ಲಿ ಉತ್ತಮ ಸಮುದಾಯ ಭವನ ನಿರ್ಮಾಣವಾಗಲಿ ಬಡ ಜನತೆ ತಮ್ಮ ಕುಟುಂಬದ ಅನೇಕ ಕಾರ್ಯಕ್ರಮಗಳನ್ನು ಅತ್ಯಂತ ಕಡಿಮೆ ಹಣದಲ್ಲಿ ನಿರ್ವಹಣೆ ಮಾಡಿಕೊಳ್ಳಲು ಸಮುದಾಯ ಭವನಗಳು ಸಹಾಯವಾಗುತ್ತವೆ ಎಂದರು.
ಸಿಂದಗಿ ಎಪಿಎಂಸಿ ಯ ಶ್ರೀ ಗಣೇಶ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ ಇದರ ಸದುಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಸಿಂದಗಿ ಎಪಿಎಂಸಿ ಮಾರುಕಟ್ಟೆ ಅತ್ಯಂತ ಸುಂದರವಾಗಿ ಬೆಳೆಯುತ್ತಿದೆ ಈ ಮಾರುಕಟ್ಟೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಮತ್ತು ರೈತರ ಬೇಡಿಕೆಗಳನ್ನು ಹಂತ ಹಂತವಾಗಿ ನಿರ್ವಹಿಸಲು ನಾನು ಮುಂದಾಗುತ್ತೇನೆ ಎಂದ ಅವರು ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಮತಕ್ಷೇತ್ರಗಳನ್ನ ಅಭಿವೃದ್ಧಿ ಮಾಡಲು ಮುಂದಾಗುತ್ತಿದೆ ರಾಜ್ಯ ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ರೀತಿಯ ಕೊರತೆ ಇಲ್ಲ ರಾಜ್ಯದ ಪ್ರತಿ ಹಳ್ಳಿಯೂ ಕೂಡ ಅಭಿವೃದ್ಧಿಯಾಗಬೇಕು ಎನ್ನುವ ಮಹತ್ವದ ಆಸೆಯನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿದೆ ಆ ನಿಟ್ಟಿನಲ್ಲಿ ನಮ್ಮ ಮತಕ್ಷೇತ್ರದ ಪ್ರತಿ ಗ್ರಾಮಗಳನ್ನು ಅಭಿವೃದ್ಧಿ ಮಾಡುವ ಸಂಕಲ್ಪವನ್ನ ನಾವು ಇಟ್ಟುಕೊಂಡಿದ್ದೇವೆ ಸಾರ್ವಜನಿಕರು ಪ್ರತಿ ಕಾಮಗಾರಿಗಳಿಗೆ ಸಹಕರಿಸಬೇಕಾಗಿ ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಎಪಿಎಂಸಿ ಗಣ್ಯ ವ್ಯಾಪಾರಸ್ಥರು,ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ಬಿಸಾನಾಳ,ಉಪಾಧ್ಯಕ್ಷ ಬಸವರಾಜ್ ಮಾರಾಲಭಾವಿ ಗಣ್ಯ ವೃಂಟ್ಕರಾದ ಮಾಹಾದೇವಪ್ಪ ಮುಂಡೇವಾಡಗಿ, ಉಮೇಶ ಜೋಗುರ, ಶರಣಯ್ಯ ಮಠ, ಆರ್. ಆಯ್. ಸಾವಳಗಿ, ಅಶೋಕ ವಾರದ, ಬಸವರಾಜ ಶಾಹಾಪುರ, ಬಸಯ್ಯ ಹಿರೇಮಠ್, ಸಂಗಯ್ಯ ಹಿರೇಮಠ್, ಮುತ್ತು ಮುಂಡೇವಾಡಗಿ, ಶಾಂತು ರಾಣಾಗೋಳ, ರಾಜು ಕುಲಕರ್ಣಿ, ನಾರಾಯಣ ಕುಲಕರ್ಣಿ ಬಾಬು ಕಮತಗಿ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು, ಸೇರಿದಂತೆ, ಯುವಕ ಮಿತ್ರರು, ಸ್ಥಳೀಯರು ಉಪಸ್ಥಿತರಿದ್ದರು.
