ಶಿಕ್ಷಕರ ಸಂಘಕ್ಕೆ ತಾಲೂಕ ಘಟಕದ ಪದಾಧಿಕಾರಿಗಳ ಅವಿರೋಧ ಆಯ್ಕೆ.

ವಿಜಯ ಸಿಂಧೂರ ತಾಳಿಕೋಟೆ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು, ತಾಳಿಕೋಟಿ ತಾಲೂಕ ಘಟಕದ 2026 ರಿಂದ 2031ರ ಅವಧಿಗೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್‌.ಜಿ. ಜಾಲವಾದಿ ತಿಳಿಸಿದರು.

ಪಟ್ಟಣದ ಎಸ್.ಕೆ.ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಸಂಘದ ವತಿಯಿಂದ ಆಯೋಜಿಸಿದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು

2026–2031ರ ಐದು ವರ್ಷದ ಅವಧಿಗೆ ಸಂಘದ ಅಧ್ಯಕ್ಷರಾಗಿ ಭೀಮನಗೌಡ ವಜ್ಜಲ್, ಉಪಾಧ್ಯಕ್ಷರಾಗಿ ತಾರಾ ಲಮಾಣಿ, ಮಹಿಳಾ ಉಪಾಧ್ಯಕ್ಷರಾಗಿ ರೇಣುಕಾ ಬಸಪ್ಪ ಆಲೂರ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಬಾಲಪ್ಪ ಬೀರಗೊಂಡ, ಕೋಶಾಧ್ಯಕ್ಷರಾಗಿ ರಮೇಶಕುಮಾರ ಹಿಪ್ಪರಗಿ ಆಯ್ಕೆಯಾಗಿದ್ದಾರೆ. ಮಹಿಳಾ ಸಹ ಕಾರ್ಯದರ್ಶಿಯಾಗಿ ಸರಸ್ವತಿ ಬನ್ನೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಅಲ್ತಾಫ್ ನಗಾರ್ಚಿ ಹಾಗೂ ಎನ್‌.ಕೆ. ಸಿಪಾಯಿ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ನೀಲಮ್ಮ ಮೈಲೇಶ್ವರ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಶೈಲ ನಾಯ್ಕೋಡಿ ಅವಿರೋಧವಾಗಿ ಆಯ್ಕೆಯಾದರು.

ಸನ್ಮಾನ: ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಅಧ್ಯಕ್ಷ ಭೀಮನಗೌಡ ವಜ್ಜಲ್, ಉಪಾಧ್ಯಕ್ಷ ತಾರಾ ಲಮಾಣಿ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ ಬೀರಗೊಂಡ ಮಾತನಾಡಿ, “ಶಿಕ್ಷಕ ಸದಸ್ಯರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಿ, ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ” ಎಂದು ಹೇಳಿದರು.ಕಾರ್ಯಕ್ರಮವನ್ನು ಶಿಕ್ಷಕ ಸುರೇಶ ವಾಲಿಕಾರ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಡಿ.ಎನ್. ಚಿಕ್ಕಮಠ, ಜೆ.ಬಿ. ಕುಲಕರ್ಣಿ, ಕೆ.ಪಿ. ಬಿರಾದಾರ, ಬಾಲಾಜಿ ವಿಜಾಪುರ, ಎನ್.ಬಿ. ಮಂಟಗಿ, ಶಂಕರಗೌಡ ಬಿರಾದಾರ, ಎಸ್‌.ಎಂ. ಬೈಚಬಾಳ, ಜಿ.ಆರ್. ಸೋನಾರ, ಸಂಜು ಹಜೇರಿ, ಡಿ.ಜೆ. ಬಾಗೇವಾಡಿ, ಆರ್‌.ಎಲ್. ಕುಲಕರ್ಣಿ, ಹಣಮಂತ ಮಾದರ, ಎಂ.ಜಿ. ಕುನ್ನೂರ, ರಾಮನಗೌಡ ಬಿರಾದಾರ, ಶಿವನಗೌಡ ಅಸ್ಕಿ, ಬಿ.ಸಿ. ಹುಲ್ಲೂರ, ಎಸ್‌.ಎನ್. ಪಾಟೀಲ, ಕೆ.ಎನ್. ಜಮಾದಾರ, ಎ.ಐ. ಪತ್ತಾರ, ಸಂತೋಷ್ ನಾವಿ, ರಾಜು ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!