ವಿಜಯ ಸಿಂಧೂರ ಹುಬ್ಬಳ್ಳಿ
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ವತಿಯಿಂದ ಹುಬ್ಬಳ್ಳಿ ತಾಲೂಕಿನ ಎಲ್ಲಾ ರೈತ ಮುಖಂಡರು ಸೇರಿಕೊಂಡು ಹುಬ್ಬಳ್ಳಿಯಲ್ಲಿ ಅತಿಥಿ ಗ್ರಹದಿಂದ ಪಾದಯಾತ್ರೆ ಮುಖಾಂತರ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಾಸುದೇವ್ ಮೇಟಿ ಮಾತನಾಡಿ ರಾಜ್ಯ ಸರ್ಕಾರವು ರೈತರಿಗೆ ಎಫ್ ಐಡಿ ಮುಖಾಂತರ ಗೊಬ್ಬರ ಬೀಜ ವಿತರಣೆ ಮಾಡುವುದನ್ನು ತಕ್ಷಣವೇ ಕೈಬಿಡಬೇಕು ಏಕೆಂದರೆ ಎಫ್ ಐಡಿ ಮುಖಾಂತರ ಕೊಡುವಂತ ಗೊಬ್ಬರ ಬೀಜ ರೈತರಿಗೆ ಸಾಕಾಗುವದಿಲ್ಲ ಎಂದರು

ಈ ಭಾಗದ ಬಹುದೊಡ್ಡ ಯೋಜನೆಯದ ಬೆನ್ನೆ ಹಳ್ಳ ಹೋಳು ಎತ್ತುವ ಕಾಮಗಾರಿ ಅವೈಜ್ಞಾನಿಕವಾಗಿ ನಡಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ, ಅವರು ಏಕೆಂದರೆ ಮಳೆಯಾದಾಗ ರೈತರ ಹೊಲದಲ್ಲಿನ ನೀರು ಹಳ್ಳಕ್ಕೆ ಯಾವ ರೀತಿ ಕರೆದು ಹೋಗಬೇಕು ನೀರು ಹರಿದು ಹೋಗಲಿಕ್ಕೆ ಮಾರ್ಗವೇ ಇಲ್ಲದ ಹಾಗೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ತಾಲೂಕ ಅಧ್ಯಕ್ಷರಾದ ರಾಮನ ಗೌಡ ಪರ್ವತಗೌಡ ಮಾತನಾಡಿ, ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮಕ್ಕೆ ರೈತ ಸಂಪರ್ಕ ಕೇಂದ್ರ ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಫಕೀರಪ್ಪ ಪೂಜಾರ. ಶಿವಾನಂದ ನಾಯ್ಕರ. ಸಿದ್ದಯ್ಯ ಕಟ್ನೂರ್ ಮಠ. ಬಾಳಮ್ಮ ಶಂಕ್ರಮ್ಮ ಸುತಾರಿ. ರೇಣುಕಾ ಹುಯಿಲಗೋಳ ಯಲ್ಲಪ್ಪ ದುಂದೂರ. ಮಂಜುನಾಥ ಕಾಲವಾಡ ದೇವಕ್ಕ ಪತ್ತಾರ ಬಸವರಾಜ್ ದೊಡ್ಡ ನಾಯ್ಕರ್ ಇನ್ನೂ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು
