ಅನಾಮಧೇಯ ಪುರುಷ ಮೃತ ದೇಹ ಪತ್ತೆ

ವಿಜಯ ಸಿಂಧೂರ.ನರೇಗಲ್ಲ

ನರೇಗಲ್ ಗಜೇಂದ್ರಗಡ ರಸ್ತೆ ಪಕ್ಕದಲ್ಲಿ ಇರವ ಶ್ರೀಶೈಲಪ್ಪ ಬಂಡಿಹಾಳ ಇವರ ಜಮೀನಿನಲ್ಲಿ ಜೂ ೮ ರಂದು ರಂದು ಅಪರಿಚಿತ ಪುರುಷ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ.

ಅಂದಾಜು 35-45 ವರ್ಷದ ಪುರುಷನ ಮೃತ ದೇಹವನ್ನು ಸ್ಥಳೀಯರು ಗಮನಿಸಿ ನರೇಗಲ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮೃತ ದೇಹ ಗುರುತಿಸಲಾಗದಂತ ಸ್ಥಿತಿಯಲ್ಲಿ ಕಂಡುಬಂದಿದ್ದು, ದೇಹದ ಮೇಲೆ ಯಾವುದೇ ಹೆಸರು ವಿಳಾಸ ವಾರಸುದಾರರ ಗುರುತಿನ ದಾಖಲೆಗಳು ಲಭ್ಯವಾಗಿಲ್ಲ.ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಹಜರ್ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸಂಬಂಧ ನರೇಗಲ್ ಠಾಣೆಯಲ್ಲಿ ಅಪರಿಚಿತ ಶವ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.ಮೃತರ ಗುರುತು ಪತ್ತೆಗಾಗಿ ಪೊಲೀಸರು ಪ್ರಯತ್ನಿಸುತ್ತಿದ್ದು, ಮಾಹಿತಿ ಇರುವವರು ಸಂಪರ್ಕ ಸಂಖ್ಯೆ08381-268233 944808054 ಗೆ ಕರೆ ಮಾಡಬಹುದು ಎಂದು ಪೊಲೀಸ ಇಲಾಖೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!