ಸಾವಯವ ಕೃಷಿ ಅಳವಡಿಸಿಕೊಳ್ಳಿ: ಶಾಸಕ ಸಿ.ಸಿ. ಪಾಟೀಲ

ವಿಜಯ ಸಿಂಧೂರ ನರಗುಂದ

ಅತಿಯಾದ ರಾಸಾಯನಿಕ ಗೊಬ್ಬರ ಭೂಮಿಯ ಫಲವತ್ತತೆ ಕುಂಠಿತಗೊಳ್ಳುತ್ತದೆ. ಸಾವಯವ ಕೃಷಿ ಅಳವಡಿಸಿಕೊಳ್ಳಿ ಎಂದು ಶಾಸಕ ಸಿ.ಸಿ. ಪಾಟೀಲ

ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ರೈತರಿಗೆ ಮುಂಗಾರು ಹಂಗಾಮಿನ ಹೆಸರು ಬೀಜ ವಿತರಣೆ ಮಾಡಿ ಮಾತನಾಡಿದದರು.

ದೇಶದಾದ್ಯಂತ ಯೂರಿಯಾ ಗೊಬ್ಬರ ಕೊರತೆ ಇದೆ. ರೈತರು ಸಾಧ್ಯವಾದಷ್ಟು ಸಾವಯವ ಗೊಬ್ಬರ ಬಳಸಿ ಇದರಿಂದ ಭೂಮಿ ಪಾಲವತ್ತಾಗಿರುತ್ತದೆ. ಇಳುವರಿಯು ಹೆಚ್ಚು. ಹೆಚ್ಚು ಯೂರಿಯಾ ಬಳಕೆಯಿಂದ ಭೂಮಿ ಹಾಳಾಗುತ್ತದೆ. ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಭೂಮಿ ಬಂಜರಾಗುತ್ತದೆ ಎಂದರು.

ಬಳಿಕ ಮಾತನಾಡಿದ ಮಾಹಿತಿ ನೀಡಿದ ಕೃಷಿ ಸಹಾಯಕ ನಿರ್ದೇಶಕ ಎಂ ಎಸ್ ಕುಲಕರ್ಣಿ, ನಮ್ಮಲ್ಲಿ ಯೂರಿಯಾ 5550 ಮೆಟ್ರಿಕ್ ಟನ್, ಡಿಎಪಿ 2785 ಮೆಟ್ರಿಕ್ ಟನ್, ಎಂಓಪಿ 740 ಮೆಟ್ರಿಕ್ ಟನ್, ಸಲ್ಪೈಟ 187 ಮೆಟ್ರಿಕ್ ಟನ್, ಇತರೆ ಗೊಬ್ಬರ 3976 ಮೆಟ್ರಿಕ್ ಟನ್, ಒಟ್ಟು 13341 ಮೆಟ್ರಿಕ್ ಟನ್, ಗೊಬ್ಬರ ಬೇಕು ಇದರ ಪೈಕಿ 4500 ಮೆಟ್ರಿಕ್ ಟನ್ ಗೊಬ್ಬರ ನಮ್ಮಲ್ಲಿ ಲಭ್ಯವಿದ್ದು ಅವಶ್ಯಕತೆ ಬಿದ್ದಾಗ ಮತ್ತೆ ತರಿಸಿಕೊಳ್ಳುತ್ತೇವೆ ಎಂದರು.

ನರಗುಂದ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಅಂದಾಜು 15-20 ರಸಗೊಬ್ಬರ ಅಂಗಡಿಗಳು, ಸಹಕಾರ ಸಂಘಗಳು-8-9 ಇವೆ. ಇಲ್ಲೂ ಕೂಡಾ ರಸಗೊಬ್ಬರ ದೊರೆಯುತ್ತದೆ. ತಾಲೂಕಿನ ಹಲವೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮುಂಗಾರು ಬಿತ್ತನೆಗೆ ಅಂದಾಜು 40000 ಹೆಕ್ಟರ್ ಭೂಮಿಯಲ್ಲಿ 19500 ಹೆಕ್ಟರ್ ಹೆಸರು 15500 ಹೆಕ್ಟರ್ ಗೋವಿನಜೋಳ, ಶೇಂಗಾ 330 ಹೆಕ್ಟರ್, ಹತ್ತಿ 3200 ಹೆಕ್ಟರ್, ಕಬ್ಬು 800 ಹೆಕ್ಟರ್, ತೊಗರಿ 50 ಹೆಕ್ಟರ್, ಬಿತ್ತುವ ಗುರಿ ಇದೆ ಎಂದರು.
ಇದಕ್ಕಾಗಿ ನಮ್ಮ ಇಲಾಖೆಯಿಂದ ರೈತರಿಗೆ ಮುಂಗಾರು ಬಿತ್ತನೆಯ ಹೆಸರು ಬೀಜಕ್ಕೆ 80-85 ಕ್ವಿಂಟಲ್ ಬೇಡಿಕೆ ಇಟ್ಟಿದ್ದೆವು ಅದರಂತೆ 60 ಕ್ವಿಂಟಲ್ ಹೆಸರು ಬೀಜ ನಮ್ಮಲ್ಲಿ ಲಭ್ಯವಿದೆ ಎಂದರು ಇನ್ನು ಗೋವಿನಜೋಳ ಬಿತ್ತನೆಗೆ 650 ಕ್ವಿಂಟಲ್ ಬೇಡಿಕೆ ಇಟ್ಟಿದ್ದೇವೆ ಎಂದರು.

ಇದೆ ಸಂದರ್ಭದಲ್ಲಿ ಇಲಾಖೆಯಲ್ಲಿ ಒಟ್ಟು 22 ಹುದ್ದೆಗಳ ಪೈಕಿ ನಾಲ್ಕು ಹುದ್ದೆಗಳು ಮಾತ್ರ ಭರ್ತಿ ಇವೆ. ಉಳಿದ 18 ಹುದ್ದೆಗಳು ಇನ್ನು ಖಾಲಿ ಇವೆ ಇದರಿಂದ ನಮಗೆ ರೈತರ ಬೇಡಿಕೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಎಫ್ ಐ ಡಿ ಯಲ್ಲೂ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ಈ ಸಮಯದಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ರೈತರು, ಮುಖಂಡರು ಇದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!