ಗರಿಗೆದರಿದ ಮುಂಗಾರು ಬಿತ್ತನೆ:ಮಳೆರಾಯನ ಆಗಮನಕ್ಕಾಗಿ ಮುಗಿಲತ್ತ ರೈತರ ಚಿತ್ತ.


ಪ್ರಕಾಶ ಗುದ್ನೇಪ್ಪನವರ,ಗದಗ

ವಿಜಯ ಸಿಂಧೂರ ವಿಶೇಷ ವರದಿ


ಮಣ್ಣಿನಲ್ಲಿ ಅಗತ್ಯವಾದ ತೆವಾಂಶವಿದ್ದಾಗ ಮಾತ್ರ ಬಿತ್ತನೆ ಕಾರ್ಯ ಮಾಡುವುದು ಉತ್ತಮ ಆದರೆ ಬಿತ್ತುವ ತಿಥಿಗಳ ಉರುಳುವದರಿಂದ ಮುಂಗಾರು ಅಲ್ಪ ಸ್ವಲ್ಪ ಮಳೆ ಸುರಿದ ಪರಿಣಾಮ ರೋಹಿಣಿ ಮಳೆ ಮೇಲೆ ಭರವಸೆಯಿಟ್ಟು ಜಿಲ್ಲಾದ್ಯಾಂತ ಮುಂಗಾರು ಬಿತ್ತನೆ ಗರಿಗೆದರಿದ್ದು ಅಲ್ಲಲ್ಲಿ ಕಾಣಸಿಗುತ್ತಿರುವುದು ವಿಶೇಷವಾಗಿದೆ.


ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆಗಮಿಸುವ ನಿರೀಕ್ಷೆಯಿಂದ , ಜಿಲ್ಲೆಯಲ್ಲಿ ಮೇ 19ರ ವರೆಗೆ ವಾಡಿಕೆಗಿಂತ ಅಧಿಕ 107.7 ಮಿಮೀ ಮಳೆಯಾಗಿದೆ(ವಾಡಿಕೆ 74.5 ಮಿ.ಮೀ). ಇದರಿಂದಾಗಿ ರೈತರು ಹೊಲಗಳನ್ನು ಹಸನು ಮಾಡಿಕೊಂಡು ಬಿತ್ತನೆಗೆ ಬೇಕಾಗುವ ಬೀಜ ಹಾಗೂ ರಸಗೊಬ್ಬರಗಳನ್ನು ಸಂಗ್ರಹಿಸುತ್ತಿದ್ದಾರೆ.
2026- 27ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 3.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಮುಖ ಬೆಳೆಗಳಾದ ಹೆಸರು 1.17 ಲಕ್ಷ ಹೆ. ಮೆಕ್ಕೆಜೋಳ 1.55 ಲಕ್ಷ ಹೆ. ಶೇಂಗಾ 15000 ಹೆ. ಹಾಗೂ ಸೂರ್ಯಕಾಂತಿ 8000 ಹೆ. ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಹಂಗಾಮಿಗೆ ಒಟ್ಟು 8 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಅವಶ್ಯಕತೆಯಿದ್ದು, ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಶೀಘ್ರದಲ್ಲೇ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುವುದು.
ಜಿಲ್ಲೆಯಲ್ಲಿ ಯಾವುದೇ ಬೀಜದ ಕೊರತೆ ಇಲ್ಲ. ಜಿಲ್ಲಾದ್ಯಂತ ರಸಗೊಬ್ಬರಗಳ ದಾಸ್ತಾನು ಪ್ರಕ್ರಿಯೆ ಚುರುಕುಗೊಂಡಿದ್ದು, ಒಟ್ಟಾರೆ 16194 ಮೆ. ಟನ್ ದಾಸ್ತಾನು ಲಭ್ಯವಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಯುರಿಯಾ, ಡಿಎಪಿ, ಎಂಒಪಿ ಸಂಯುಕ್ತ ರಸಗೊಬ್ಬರಗಳನ್ನು ವಿವಿಧ ಪರಿಕರ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮಾಡಲಾಗಿದೆ.
ಬಿತ್ತನೆ ಸಮಯದಲ್ಲಿ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೃತಕ ಕೊರತೆ ಸೃಷ್ಟಿಸುವ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಕಾಳಸಂತೆ ದಂಧೆಯನ್ನು ತಡೆಯಲು ಕೃಷಿ ಅಧಿಕಾರಿಗಳು ಗೊಬ್ಬರ ಅಂಗಡಿಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.


ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ, ಮಣ್ಣಿನ ಆರೋಗ್ಯ ಕಾಪಾಡುವ ಉದ್ದೇಶದಿಂದ ಗೋಮಯ, ಕಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳಂಥ ಸಾವಯವ ಗೊಬ್ಬರ ಬಳಕೆಗೂ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಅತಿಯಾದ ರಸಗೊಬ್ಬರ ಬಳಕೆ ಮಣ್ಣಿನ ಫಲವತ್ತತೆ ಕುಗ್ಗಿಸುವುದರಿಂದ, ರೈತರು ಆರ್ಥಿಕ ಹೊರೆ ತಪ್ಪಿಸಲು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಆಧರಿಸಿಯೇ ಗೊಬ್ಬರ ಬಳಸಬೇಕು ಮತ್ತು ರಸೀದಿ ಪಡೆಯಬೇಕು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.
ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಮುಂಗಾರು ಹಂಗಾಮಿನ ಮಳೆಗಳು ಅವಧಿಪೂರ್ಣ ಸುರಿಯುವ ಸೂಚನೆ ಕಂಡು ಅನ್ನದಾತರ ಮೊಗದಲ್ಲಿ ಕೊಂಚ ಆಸೆ ಹುಟ್ಟಿಸಿದಂತೂ ನಿಜ ಆದರೆ ಆರಂಭಿಕ ಮಳೆಗಳಲ್ಲಿ ಪ್ರಸಕ್ತ ರೋಹಿಣಿ ಮಳೆಯು ಮುಂಗಾರು ಬಿತ್ತನೆಗೆ ಅದರಲ್ಲಿಯೂ ಹೆಸರು ಬಿತ್ತನೆಗೆ ತುಂಬಾ ಉಪಯುಕ್ತವಾದ ಮಳೆಯಾಗಿರುವುದರಿಂದ ಕೆಲ ರೈತ ಬಾಂಧವರು ಗಟ್ಟಿ ಧೈರ್ಯ ಮಾಡಿ ಹೆಸರು ಬಿತ್ತನೆಗೆ ಮುಂದಾಗಿರುವುದು ವಿಶೇಷವಾಗಿ ಗದಗ ಜಿಲ್ಲೆ ಸೇರಿದಂತೆ ಹಲವಡೆ ಚುರುಕುಗೊಂಡಿರುತ್ತವೆ.
ಪೂರ್ವ ಮುಂಗಾರು ಮಳೆ ಸಾಧಾರಣವಾಗಿದ್ದು ಮುಂಗಾರು ಬಿತ್ತನೆಗೆ ಕೊಂಚ ಹಿಂದೇಟು ಹಾಕುವಂತೆ ಮಾಡಿದರೂ ಕೂಡಾ ರೋಹಿಣಿ ಮಳೆಯ ಕೆಲವಡೆ ಧರೆಗೆಯಿಳಿದ ಪರಿಣಾಮ “”ಭೂಮಿಗೆ ಬಿದ್ದ ಬೀಜ ಫಲ ನೀಡದೇ ಇರಲಾರದು ಎಂಬಾಸೆಯಿಂದ ಕೆಲ ರೈತರು ಭೂತಯಿಗೆ ಉಡಿತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಬಹುದಾಗಿದೆ.
“‘ ಕೋಟ್ : ಮುಂಗಾರು ಹಂಗಾಮಿನ ಮಳೆ ಬರಬಹುದು ಎಂಬ ಭರವಸೆಯಿಂದ ಧೈರ್ಯ ಮಾಡಿ ಹೆಸರು ಬಿತ್ತನೆ ಮಾಡಿರುವೆ ಆದರೆ ದೈವಿಚ್ಚೆ ಯಾರು ಬಲ್ಲರು ಆ ಮಳೆ ರಾಯ ಬಂದರೆ ಬೀಜ ಹುಟ್ಟವುದು ಇಲ್ಲದಿದ್ದರೆ ನಮ್ಮ ಹಣೆ ಬರದಾಂಗ ಹಾಗುತ್ತೆ ಎನ್ನುವರು,
ಕದಡಿ ಗ್ರಾಮದ ರೈತರಾದ ವಿಕ್ರಮ್ ವಿ ಗೊಜನೂರು.

ಪ್ರಸಕ್ತ ಸಾಲಿನ ಮುಂಗಾರು ಮಳೆಯ ಕೊರತೆಯುಂಟಾದರೆ ಅನ್ನದಾತರ ಮತ್ತಷ್ಟು ಸಂಕಷ್ಟಕ್ಕಿಡಾಗುವುದಂತೂ ತಪ್ಪಾದಾಗಿದೆ. ರೈತರಿಗೆ ಕಂಬದ್ದು ಒಂದು ಕಾಪಾಳದ್ದು ಒಂದು ಎಂಬಾಂತಾಗುವುದು, ಕಾರಣ ಸರ್ಕಾರ ರೈತರಿಗೆ ಕಳೆದ ವರ್ಷದ ಬೆಳೆ ವಿಮೆ ಆದಷ್ಟು ಬೇಗ ನೀಡಿ ಮುಂಬರುವ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಾಯ ಅಸ್ತಕ್ಕೆ ಮುಂದಾಗಬೇಕು ಎನ್ನುವುದು ರೈತ ಹಿತಚಿಂತಕರ ಒತ್ತಾಸೆಯಾಗಿದೆ. ರೈತ ಒಕ್ಕದಿದ್ದರೆ ಜಗವಲ್ಲ ಬಿಕ್ಕುವುದಂತೂ ಶತಸಿದ್ಧ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!