ವಿಜಯ ಸಿಂಧೂರ, ರೋಣ
ಪಟ್ಟಣದ ಎಲ್.ಐ. ದಿಂಡೂರ್ ನವೋದಯ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಕುಮಾರಿ ಯಶೋಧ ನಾಯಕ್ ಮೂರು ವಸತಿ ಶಾಲೆಗಳ ಪ್ರಾರವೇಶಕ್ಕೆ ಪರೀಕ್ಷೆ ಬರೆದು ಹೆಚ್ಚಿನ ಅಂಕಗಳನ್ನು ಗಳಿಸಿ ಮೂರು ಶಾಲೆಗಳ ಮೆರಿಟ್ ಲಿಸ್ಟ್ ನಲ್ಲಿರುವ ಮೂಲಕ ಗಮನ ಸೆಳೆದಿದ್ದಾಳೆ.

ವಸತಿ ಶಿಕ್ಷಣ ಸಂಸ್ಥೆಗೆ ನಡೆಯುವ ಆರನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ, ಆದರ್ಶ ವಸತಿ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಗುರುತಿಸಿದ ಪ್ರತಿಷ್ಠಿತ ಹುಲಕೋಟಿಯ ರಾಜರಾಜೇಶ್ವರಿ ವಿದ್ಶಾ ನಿಕೇತನ ಶಾಲೆಗೆ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶಶಿಧರ ಎಲ್ ದಿಂಡೂರ ಮನೆಗೆ ಭೇಟಿ ನೀಡಿ ಗೌರವ ಸನ್ಮಾಸಿ ಮಾತನಾಡಿ,
ವಿದ್ಯಾರ್ಥಿಗಳು ಇಂದಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ವಸತಿ ಶಾಲೆಗೆ ಆಯ್ಕೆಯಾಗಲು ಅರಸಹಾಸ ಪಡುತ್ತಿರುವ ಸಂದರ್ಭದಲ್ಲಿ ಈ ವಿದ್ಯಾರ್ಥಿನಿ ಮೂರು ವಸತಿ ಶಾಲೆಗಳಿಗೆ ಅರ್ಹತೆ ಪಡೆದಿರುವುದು ನಿಜವಾಗಲೂ ಹೆಮ್ಮೆಯ ವಿಷಯವಾಗಿದೆ.ವಿದ್ಯಾರ್ಥಿಗಳಲ್ಲಿ ಕಲಿಕೆಯ ಅಭಿರುಚಿ ಹೊಂದಿದಾಗ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು
ಸಂಸ್ಥೆಯ ನವೋದಯ ತರಬೇತಿ ಶಾಲೆಯ ಗುರುಗಳು ಮತ್ತು ಗುರುಮಾತೆಯರಿಗೆ ವಿಶೇಷವಾಗಿ ಅಭಿನಂದನೆಗಳು ಹಾಗೂ ವಿದ್ಯಾರ್ಥಿನಿಗೆ ಸಾಧನೆ ಮಾಡಲು ಪ್ರೋತ್ಸಾಹ ನೀಡಿದ ತಂದೆ ತಾಯಿಗೂ ಅಭಿನಂದನೆಗಳು.ಮುಂದಿನ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೂಡ ಇದೇ ರೀತಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ನಿವೇದಿತಾ ಬೇವಿನಕಟ್ಟಿ,ಎಲ್ ಐ ದಿಂಡೂರ ನವೋದಯ ತರಬೇತಿ ಕೇಂದ್ರದ ಮುಖ್ಯಗುರುಗಳಾದ ಮುತ್ತು ಗುಡ್ಲಾನೂರ,ರಮೇಶ ಹೂಗಾರ,ಗುರುಮಾತೆಯಾದ ದುರ್ಗಾ ಭಜಂತ್ರಿ,ಸಾದನೆಗೈದ ವಿದ್ಯಾರ್ಥಿನಿಯ ಪಾಲಕರು ಉಪಸ್ಥಿತರಿದ್ದರು.
