ಗ್ರಾಮ ಪಂಚಾಯಿತಿ ಹಾಗೂ ಅರಿವು ಕೇಂದ್ರ ವತಿಯಿಂದ ಬೇಸಿಗೆ ಶಿಬಿರ

ವಿಜಯ ಸಿಂಧೂರ

ಸವಡಿ ಗ್ರಾಮ ಪಂಚಾಯಿತಿ ಹಾಗೂ ಅರಿವು ಕೇಂದ್ರ ಸವಡಿ ಸಹಯೋಗದಲ್ಲಿ ಆಯೋಜನೆಗೊಂಡ ಬೇಸಿಗೆ ಶಿಬಿರ ಬೇಸಿಗೆ ಶಿಬಿರದ ಅವಧಿ ಏಪ್ರಿಲ್ 8 ರಿಂದ ಮೇ 15 ಕಲ್ಪಿಸಲಾಗುವುದು

ವಿಷಯಗಳು ಹಾಗೂ ಕೌಶಲಗಳು

1)ಭಾಷೆ ಕನ್ನಡ ಹಾಗೂ ಇಂಗ್ಲಿಷ್

2)ಪರಿಸರ ಅಧ್ಯಯನ

3) ವ್ಯವಹಾರಿಕ ಗಣಿತ

4)ನೀತಿ ಹಾಗೂ ಮೌಲ್ಯ ಶಿಕ್ಷಣ

ಕನ್ನಡ:

ಅ)ಆಸಕ್ತಿ ಕುತೂಹಲದಿಂದ ಆಲಿಸುವುದು

ಆ) ಸ್ಪಷ್ಟವಾಗಿ ಅರ್ಥಪೂರ್ಣವಾಗಿ ನಿರಗ್ಗಳವಾಗಿ ಭಾವತುಂಬಿ ಮಾತನಾಡುವುದು.

ಇ) ಸ್ಪಷ್ಟವಾಗಿ ಅರ್ಥಪೂರ್ಣವಾಗಿ ಧ್ವನಿಯ ಏರಿಳಿತದೊಂದಿಗೆ ಓದುವುದು

ಈ) ಕಾಗುಣಿತ ದೋಷವಿಲ್ಲದಂತೆ ಸುಂದರವಾಗಿ ಬರೆಯುವುದು

ಈ ನಾಲ್ಕು ಕೌಶಲಗಳನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶಕ್ಕಾಗಿ ಯೋಜಿಸಿಕೊಳ್ಳಬಹುದಾದ ವಿವಿಧ ಚಟುವಟಿಕೆಗಳು

ಅಜ್ಜ ಅಜ್ಜಿ ಅಪ್ಪ ಅಮ್ಮ ಹೇಳಿದ ಕಥೆಗಳು

ಗ್ರಾಮದಲ್ಲಿ ಲಭ್ಯ ಇರುವ ಉತ್ತಮವಾಗಿ ಕಥೆ ಹೆಣೆಯುವ ಅಜ್ಜ ಅಮ್ಮಂದಿರನ್ನು ತರಗತಿಗಳಿಗೆ ಆಹ್ವಾನಿಸುವುದು #ಕಥೆಗಳನ್ನು ಆಲಿಸಿದ ಮಕ್ಕಳು ತಮ್ಮದೇ ಆದ ಭಾಷೆ ಶೈಲಿಯಲ್ಲಿ ಪ್ರಸ್ತುತ ಪಡಿಸುವುದು #ಪ್ರಸ್ತುತಪಡಿಸಿದ ಕಥೆ ಗಳನ್ನು ಬರವಣಿಗೆ ರೂಪದಲ್ಲಿ ಪ್ರದರ್ಶಿಸುವುದು #ಬರೆದ ಕಥೆಗಳನ್ನು ವಿಷಯಗಳನ್ನು ಸ್ಪಷ್ಟವಾಗಿ ನಿರರ್ಗಳವಾಗಿ ಧ್ವನಿಯ ಏಣಿತದೊಂದಿಗೆ ಓದುವುದು.*ಗ್ರಾಮದಲ್ಲಿ ಲಭ್ಯವಿರುವ ಲಾವಣಿ ಪದ, ಹಂತಿ ಪದ, ಹೋಳಿ ಪದ, ಸೋಬಾನೆ ಪದ ಇತ್ಯಾದಿ ಹಾಡುಗಾರರನ್ನು ತರಗತಿಗಳಿಗೆ ಆಹ್ವಾನಿಸುವುದು ಮತ್ತು ಅವರಿಂದ ಕಾರ್ಯಕ್ರಮ ನೀಡುವುದುಇನ್ನಿತರ ಸಾಧ್ಯವಾಗಬಹುದಾದ ಚಟುವಟಿಕೆಗಳನ್ನು ಸೇರಿಸಿಕೊಳ್ಳುವುದು

English

Listening:- Listening to English songs and stories- Listening to English podcasts or news- Watching English movies or documentaries-

Speaking:- Practicing English conversations- Giving English speeches or presentations- Participating in English debates or discussions-

Reading:- Reading English books or stories- Reading English articles or news- Reading English poems or songs-

Writing:- Writing English essays or stories- Maintaining an English diary or blog- Writing English letters or emailsSelf introduction friends introduction family introduction Parts of the body Action words Etc

2)ಪರಿಸರ ಅಧ್ಯಯನ

ಗ್ರಾಮದಲ್ಲಿ ಲಭ್ಯವಿರುವ ಹಿರಿಯರಿಂದ ಗ್ರಾಮದ ಇತಿಹಾಸ ಕುರಿತು ಮಕ್ಕಳಿಗೆ ಮಾಹಿತಿ ತಲುಪಿಸುವುದು ಗ್ರಾಮದಲ್ಲಿ ನಡೆಯುವ ಹಬ್ಬ ಜಾತ್ರೆ ಉತ್ಸವ ಗಳನ್ನು ಪಟ್ಟಿ ಮಾಡುವುದು *ಹಬ್ಬ ಜಾತ್ರೆ ಉತ್ಸವ ಗಳ ಮೇಲ್ ಉಸ್ತುವಾರಿ ವಹಿಸಿರುವ ಹಿರಿಯರನ್ನು ತರಗತಿಗಳಿಗೆ ಆಹ್ವಾನಿಸುವುದು.*ಉತ್ತಮ ಹೆಚ್ಚಿನ ಗುಣಮಟ್ಟದ ಮಾಹಿತಿ ಲಭ್ಯ ಇರುವ ಹಿರಿಯರಿಂದ ಮಕ್ಕಳಿಗೆ ಹಬ್ಬ ಜಾತ್ರೆ ಉತ್ಸವಗಳ ಕುರಿತು ಹಿನ್ನೆಲೆ ಮಹತ್ವ ಆಚರಣೆಯ ವಿಧಿ ವಿಧಾನಗಳ ಕುರಿತು ಮಾಹಿತಿ ನೀಡಿಸುವುದು.*ಗ್ರಾಮದಲ್ಲಿ ಲಭ್ಯವಿರುವ ಭಜನಾ ಸಂಘಗಳ ಯುವಕರಿಂದ ಹಿರಿಯರಿಂದ ಮಕ್ಕಳಿಗೆ ಭಜನೆ ಕಲಿಸುವುದು.*ಗ್ರಾಮದ ಐತಿಹಾಸಿಕ ಸಾಂಸ್ಕೃತಿಕ ಸ್ಥಳಗಳ ಅಧ್ಯಯನ ಪ್ರವಾಸ ಏರ್ಪಡಿಸುವುದು.#ಗ್ರಾಮದ ಪರಿಸರ ನೈರ್ಮಲ್ಯ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಎಲ್ಲಾ ನಾಗರಿಕರ ಸಕ್ರಿಯ ಸಹಭಾಗಿತ್ವ ಕುರಿತು ಗ್ರಾಮ ಪಂಚಾಯಿತಿ ,ಆರೋಗ್ಯ, ನೀರು ನೈರ್ಮಲ್ಯ, ಇಲಾಖೆಗಳ ಅಧಿಕಾರಿಗಳನ್ನು ತರಗತಿಗಳಿಗೆ ಆಹ್ವಾನಿಸುವುದು ಮಾಹಿತಿ ನೀಡುವುದು#ಗ್ರಾಮದಲ್ಲಿ ಹೆಚ್ಚು ಸ್ವಚ್ಛವಾಗಿರುವ ಸುಂದರವಾಗಿರುವ ಓಣಿ ಗೆ ಕ್ಷೇತ್ರ ಭೇಟಿ ಆಯೋಜಿಸುವುದು ಅಲ್ಲಿಯ ಜನರೊಂದಿಗೆ ಬೆರೆತು ಮಾಹಿತಿ ಪಡೆಯುವುದು #ಗ್ರಾಮದಲ್ಲಿ ಸ್ವಚ್ಛವಾಗಿ ಇರದೇ ಇರುವ ಓಣಿ ಗೆ ಕ್ಷೇತ್ರ ಭೇಟಿ ಆಯೋಜಿಸುವುದು. ಅಲ್ಲಿಯ ನಾಗರೀಕರಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡುವುದು, ಶ್ರಮದಾನ ಕಾರ್ಯಕ್ರಮ ಆಯೋಜಿಸುವುದು #ಗ್ರಾಮದಲ್ಲಿ ಲಭ್ಯ ಇರುವ ಗಿಡಮೂಲಿಕೆ ಔಷಧಿ ನೀಡುವ ಹಿರಿಯರನ್ನು ತರಗತಿಗಳಿಗೆ ಆಹ್ವಾನಿಸುವುದು ಅವರಿಂದ ಮಾಹಿತಿ ಒದಗಿಸುವುದು#ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವುದು #ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಲು ಕ್ಷೇತ್ರ ಭೇಟಿ ಆಯೋಜಿಸುವುದು #ಗ್ರಾಮಕ್ಕೆ ಸಾಂದರ್ಭಿಕವಾಗಿ ಭೇಟಿ ನೀಡುವ ವಿವಿಧ ಸಂಸ್ಕೃತಿಕ ಹಿನ್ನೆಲೆ ಇರುವ ಹಿರಿಯರನ್ನು ಉದಾಹರಣೆಗೆ ಸಾರು ಅಯ್ಯನವರು, ಬುಡುಬುಡಿಕೆ ರವರು, ಸುಡುಗಾಡು ಸಿದ್ದರು, ದುರುಗು ಮರಿಗೆಯವರು#ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ವಿವಿಧ ಕಚೇರಿ ಗಳನ್ನು ಮಕ್ಕಳೊಂದಿಗೆ ಚರ್ಚಿಸಿ ಪಟ್ಟಿ ಮಾಡುವುದು. ಕ್ಷೇತ್ರ ಭೇಟಿ ಏರ್ಪಡಿಸಿ ಅಲ್ಲಿರುವ ಅಧಿಕಾರಿಗಳಿಂದ ಮಾಹಿತಿ ನೀಡಿಸುವುದು ಇತ್ಯಾದಿ…*ಬೆಟಗೇರಿಯ ತಾರಾಲಯಕ್ಕೆ ಶೈಕ್ಷಣಿಕ ಅಧ್ಯಯನಕ್ಕೆ ತೆರಳುವುದು , ಸೌರವ್ಯೂಹದ ಪರಿಚಯ

3)ವ್ಯವಹಾರಿಕ ಗಣಿತ

ಮಕ್ಕಳಿಗೆ ದಿನಬಳಕೆಯ ವ್ಯವಹಾರಕ್ಕಾಗಿ ಅಗತ್ಯವಿರಬಹುದಾದ ಚಟುವಟಿಕೆಗಳನ್ನು ಮಕ್ಕಳೊಂದಿಗೆ ಚರ್ಚಿಸಿ ಪಟ್ಟಿ ಮಾಡುವುದು #ಹಣಕಾಸು ವ್ಯವಹಾರ #ಅಳತೆ ಮಾಪನಗಳ ವ್ಯವಹಾರ #ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿ ವ್ಯವಹಾರ #ದಿನಸಿ ವಸ್ತುಗಳ ಖರೀದಿ ಮಾರಾಟ ವ್ಯವಹಾರ #ಮಕ್ಕಳನ್ನು ಗುಂಪುಗಳಲ್ಲಿ ವಾರದ ಸಂತೆ ಗಳಿಗೆ ನಿಯೋಜಿಸುವುದು #ಮಕ್ಕಳನ್ನು ಗುಂಪುಗಳಲ್ಲಿ ಗ್ರಾಮದಲ್ಲಿರುವ ಅಂಗಡಿಗಳಿಗೆ ನಿಯೋಜಿಸುವುದು. *ಪ್ಲಾಸ್ಟಿಕ್ ಗಳನ್ನು ಬಳಸುವುದರಿಂದ ಆಗುವ ತೊಂದರೆಗಳ ಕುರಿತು ಸ್ವಚ್ಛ ಭಾರತ ಮಿಷನ್ ಅಧಿಕಾರಿಗಳನ್ನು ತರಗತಿಗಳಿಗೆ ಆಹ್ವಾನಿಸುವುದು *ಬಟ್ಟೆ ಚೀಲ ತಯಾರಿಸುವ ಕುರಿತು ಮಕ್ಕಳಿಗೆ ತರಬೇತಿ ನೀಡುವುದು *ಶಿಬಿರದಲ್ಲಿ ಪಾಲ್ಗೊಳ್ಳುವ ಪ್ರತಿ ಮಗು ಕನಿಷ್ಠ 100 ಬಟ್ಟೆ ಚೀಲಗಳನ್ನು ತಯಾರಿಸಿ ತಮ್ಮ ಮನೆ ಹಾಗೂ ನೆರೆಹೊರೆಯವರಿಗೆ ಹಂಚಿಕೆ ಮಾಡುವುದು

4)ನೀತಿ ಹಾಗೂ ಮೌಲ್ಯ ಶಿಕ್ಷಣ

ಶೌಚಾಲಯ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜಿಸದೆ ಇರುವುದು*ಮನೆ ಹಂತದಲ್ಲಿ ಹಸಿ ಕಸ ಒನ ಕಸ ವಿಂಗಡಿಸುವುದು *ವಿಂಗಡಿಸಿದ ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸುವ ವಿಧಾನ ಮಾದರಿ ಸಮೇತ ತಿಳಿಸುವುದು , ಅನುಸರಿಸುವುದು *ಒಣ ಕಸವನ್ನು ಗ್ರಾಮ ಪಂಚಾಯಿತಿ ಕಸದ ವಾಹನಕ್ಕೆ ಕೊಡುವುದು *ಮಕ್ಕಳನ್ನು ಸ್ವಚ್ಛತಾದೂತ ಸ್ವಚ್ಛತಾ ರಾಯಭಾರಿಗಳಾಗಿ ಪರಿಗಣಿಸಿ ವ್ಯವಹರಿಸುವುದು *ಮನೆ ನೆರೆಹೊರೆ ಹಂತದಲ್ಲಿ ತಂದೆ ತಾಯಿ ಹಿರಿಯರನ್ನು ಗೌರವಿಸುವುದು, ಕಾಳಜಿಯಿಂದ ನೋಡಿಕೊಳ್ಳುವುದು *ಮನೆ ಕೆಲಸದಲ್ಲಿ ಸಹಾಯ ಮಾಡುವುದು *ಕುಟುಂಬದಲ್ಲಿರುವ ಅನಾರೋಗ್ಯ ಪೀಡಿತರು, ವಯಸ್ಸಾದವರು, ದುರ್ಬಲರ ಸೇವೆಯಲ್ಲಿ ತೊಡಗಿಸಿಕೊಳ್ಳುವುದು.*ಕೃಷಿ ಪಶುಸಂಗೋಪನೆ ಕುಲಕಸುಬುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು *ಸಾರ್ವಜನಿಕ ಸಂಚಾರ ವ್ಯವಸ್ಥೆ ಬಸ್ಸು ರೈಲು ಇತ್ಯಾದಿಗಳಲ್ಲಿ ಹಿರಿಯರಿಗೆ ಅಂಗವಿಕಲರಿಗೆ ಮಹಿಳೆಯರಿಗೆ ಗರ್ಭಿಣಿಯರಿಗೆ ಸ್ಥಳಾವಕಾಶ ಮಾಡಿಕೊಡುವುದು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!