ವಿಜಯ ಸಿಂಧೂರ ಅಣ್ಣಿಗೇರಿ
ಚಕ್ಕಡಿ ರಸ್ತೆ ಹರಿಕಾರ,ಕಳಸಾ ಬಂಡೂರಿ, ರೈತ ಹೋರಾಟಗಾರ,ಬೆಣ್ಣೆ ಹಳ್ಳ ಕಾಮಗಾರಿಯ ರೂವಾರಿಗಳು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಎಚ್ ಕೋನರೆಡ್ಡಿ ಅವರಿಗೆ ನೂತನ ಮುಖ್ಯಮಂತ್ರಿ ಪ್ರಮಾಣವಚನದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆ ಶಿವಕುಮಾರ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚರ್ಚೆ ನಡೆಸಿ ಶಾಸಕ ಕೋನರೆಡ್ಡಿ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಅಣ್ಣಿಗೇರಿ ತಾಲೂಕು ಅಹಿಂದ ಸಂಘಟನೆ ಅಧ್ಯಕ್ಷರು ಮಹಾಂತೇಶ ಕೊಗ್ಗಿ ಆಗ್ರಹಿಸಿದರು

ಶ್ರೀ ಅಮೃತೇಶ್ವರ ದೇವಸ್ಥಾನ ಮುಂಭಾಗದಲ್ಲಿ ಅವರು
ಮಾತನಾಡಿ, ಕೇಂದ್ರದ ಕಾಂಗ್ರೆಸ್ ಪಕ್ಷದ ನಾಯಕರು, ರಾಜ್ಯದ ನಾಯಕರು, ಕೋನರೆಡ್ಡಿ ಸಾಹೇಬರು ಎರಡನೇ ಬಾರಿಗೆ ಶಾಸಕರಾಗಿ ಜನರ ಸೇವೆ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ,ಅಣ್ಣಿಗೇರಿ ಮತ್ತು ನವಲಗುಂದ ನಗರಗಳಿಗೆ ಒಳಚರಂಡಿ ವ್ಯವಸ್ಥೆಯನ್ನು ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ತರಿಸಿ ಚಕ್ಕಡಿ ದಾರಿಗಳ ನಿರ್ಮಾಣ ಅಭಿವೃದ್ಧಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ನವಲಗುಂದ ವಿಧಾನಸಭಾ ಕ್ಷೇತ್ರ ಜನಪ್ರಿಯ ಶಾಸಕ ಎನ್‌ಹೆಚ್ ಕೋನರಡ್ಡಿ ಸಾಹೇಬರಿಗೆ ಸಚಿವ ಸ್ಥಾನ ನೀಡಬೇಕೆಂದು ಎಂದರು,
ಅಣ್ಣಿಗೇರಿ ತಾಲೂಕು ಅಹಿಂದ ಸಂಘಟನೆ ಅಧ್ಯಕ್ಷ ಮಹಾಂತೇಶ ಕೊಗ್ಗಿ,ಉಪಾಧ್ಯಕ್ಷ ಪರಸಪ್ಪ ಇಸರಣ್ಣವರ್, ಕಾರ್ಯದರ್ಶಿ ಹನಮಂತಪ್ಪ ಮಾಯಣ್ಣವರ,ಮಾರುತಿ ಕಾಳಿ, ಮುತ್ತು ಬಿಸ್ಟಕ್ಟ್ ನವರ, ಸಂಜು,ಹನಮಂತಪ್ಪ ಬೆಳಕೊಪ್ಪ,ರಾಮಣ್ಣ,
ಇನ್ನು ಮುಂತಾದವರಿ ಇದ್ದರು
