ಶ್ರೀನಿಧಿ ಸಂತೋಷ್ ಬಗಲಿಗೆ ಒಲಿದ ‘ಐಬಿಆರ್ ಅಚೀವರ್’ ಗೌರವ


​ವಿಜಯ ಸಿಂಧೂರ,ಸಿಂದಗಿ

ಪಟ್ಟಣದ ಉನ್ನತಿ ಪೂರ್ವ ಪ್ರಾಥಮಿಕ ಶಾಲೆಯ ೨ ವರ್ಷ ೧೧ ತಿಂಗಳ ಪ್ರಾಯದ ಬಾಲಕಿ ಶ್ರೀನಿಧಿ ಸಂತೋಷ್ ಬಗಲಿ ತನ್ನ ಅಸಾಧಾರಣ ಬುದ್ಧಿಶಕ್ತಿಯನ್ನು ಪ್ರದರ್ಶಿಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ (IBR Achiever) ಸಾಧಕ ಪ್ರಶಸ್ತಿಗೆ ಭಾಜನನಾಗಿದ್ದಾಳೆ.


​ಈ ಪುಟಾಣಿ ಬಾಲಕಿ ೧೦ ಹಣ್ಣುಗಳು, ೧೭ ಪ್ರಾಣಿಗಳನ್ನು ಗುರುತಿಸಿ ಹೆಸರಿಸುವುದರ ಜೊತೆಗೆ, ವರ್ಷದ ತಿಂಗಳುಗಳು, ವಾರದ ದಿನಗಳು ಹಾಗೂ ಕನ್ನಡದ ೮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ನಿರರ್ಗಳವಾಗಿ ಹೇಳುತ್ತಾಳೆ. ಅಷ್ಟೇ ಅಲ್ಲದೆ, ‘ಎ ’ ನಿಂದ ‘ಎಲ್ ’ ಅಕ್ಷರಗಳವರೆಗೆ ಆರಂಭವಾಗುವ ೧೨ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಅಕಾರಾಧಿಯಾಗಿ (Alphabetical order) ನೆನಪಿಸಿಕೊಂಡು ಹೇಳುವ ಸಾಮರ್ಥ್ಯ ಹೊಂದಿದ್ದಾಳೆ.


​ಇವುಗಳೊಂದಿಗೆ ಭಾರತದ ೨೮ ರಾಜ್ಯಗಳ ರಾಜಧಾನಿಗಳು, ೨ನೇ ಮಗ್ಗಿ, ಇಂಗ್ಲಿಷ್ ಅಲ್ಫಾಬೆಟ್ ಹಾಡು ಮತ್ತು ೧ ರಿಂದ ೧೦ ರವರೆಗೆ ಸಂಖ್ಯೆಗಳನ್ನು ಎಣಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾಳೆ. ಇವಳ ಈ ಅದ್ಭುತ ಸಾಧನೆಯನ್ನು ಪರಿಶೀಲಿಸಿ ಏಪ್ರಿಲ್ ೭, ೨೦೨೬ ರಂದು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸಂಸ್ಥೆಯು ಅಧಿಕೃತವಾಗಿ ದೃಢೀಕರಿಸಿ, ಪ್ರಶಸ್ತಿ ನೀಡಿ ಗೌರವಿಸಿದೆ.

ಸಿಂದಗಿ ಹಾಗೂ ವಿಜಯಪುರ ಜಿಲ್ಲೆಯ ಈ ಬಾಲಕಿಯ ಸಾಧನೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದು ಶಾಲೆಯ ಮುಖ್ಯಗುರುಮಾತೆ ಅಶ್ವಿನಿ ಪರಶಿವಪ್ಪಗೋಳ ಹಾಗೂ ಆಡಳಿತಾಧಿಕಾರಿ ರೇವಣಸಿದ್ದ ಗುಣಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!