ಒಳ ಮೀಸಲಾತಿ ಜಾರಿ ಅಭಿನಂದನೆ

ವಿಜಯ ಸಿಂಧೂರ

ತಾಳಿಕೋಟೆ :ಮಾದಿಗರ ಸಮಾಜದ ಬಹಳ ವರ್ಷಗಳ ಬೇಡಿಕೆಯಾದ ಒಳ ಮೀಸಲಾತಿಯನ್ನು ನೀಡುವ ನಿರ್ಣಯ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ನಿರ್ಧಾರವನ್ನು ಸಮಾಜದ ಯುವ ಮುಖಂಡ ಗೋಪಾಲ ಕಟ್ಟಿಮನಿ ಸ್ವಾಗತಿಸಿ ಅಭಿನಂದಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಒಳ ಮೀಸಲಾತಿ ಕೊಡುವ ಬಗ್ಗೆ 2023 ರ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕಾಂಗ್ರೆಸ್ಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಕೊಡುವ ನಿರ್ಣಯ ತೆಗೆದುಕೊಳ್ಳುವದಾಗಿ ಭರವಸೆ ನೀಡಿದ್ದರು ಅದರಂತೆ ಇದೀಗ ವಿಳಂಬ ವಾದರೂ ಕೊಟ್ಟ ಮಾತಿನಂತೆ ನಡೆದುಕೊಂಡು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಅವರಿಗೆ ಅವರ ಸಂಪುಟದ ಎಲ್ಲ ಸಚಿವರಿಗೆ ಹಾಗೂ ಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!