ವಿಜಯ ಸಿಂಧೂರ ಗದಗ
2026 – 27ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ವಸತಿ ಯೋಜನೆಯಡಿ ಒಟ್ಟು 225 ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂ. 20ರ ವರೆಗೆ ಅವಕಾಶವಿದೆ. ಅರ್ಜಿ ಫಾರ್ಮರ್, ನಿವೇಶನ ಹೊಂದಿರುವ ಬಗ್ಗೆ ಹಕ್ಕುಪತ್ರ, ಪೂರಕ ದಾಖಲಾತಿ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ್, ಇತ್ತೀಚಿನ ಭಾವಚಿತ್ರ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ದಾಖಲೆಗಳನ್ನು ಹೊಂದಿರಬೇಕು. ಪ.ಜಾ. ಮತ್ತು ಪ.ಪಂ. ಅಲೆಮಾರಿ ಸಮುದಾಯದವರು ನಿವೇಶನ ಹೊಂದಿರುವರು ಜಿಲ್ಲೆಯ ಸಂಬಂಧಪಟ್ಟ ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಅರ್ಜಿ ನಮೂನೆ ಪಡೆಯಬೇಕು ಮತ್ತು ನಿಗದಿತ ದಿನಾಂಕದೊಳಗಾಗಿ ಅವಶ್ಯಕ ದಾಖಲೆಗಳೊಂದಿಗೆ ಮರಳಿ ಅರ್ಜಿಯನ್ನು ತಮ್ಮ ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
