ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಚಾಲನೆ ಎರಡು ಬಾರಿ ಹಾಜರಾತಿ ಕಡ್ಡಾಯ: ಪಿಡಿಒ ವಿಶ್ವನಾಥ ರಾಠೋಡ

ವಿಜಯ ಸಿಂಧೂರ ಗಜೇಂದ್ರಗಡ

ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರು ಎರಡು ಬಾರಿ ಹಾಜರಾತಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಇಲ್ಲವಾದರೆ ನಿಮಗೆ ಕೂಲಿಯ ಮೊತ್ತ ಪಾವತಿಯಾಗುವುದಿಲ್ಲ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ರಾಠೋಡ ಹೇಳಿದರು.

ಅವರು ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೌಡಗೇರಿ ಗ್ರಾಮದಲ್ಲಿ ಶುಕ್ರವಾರ ಮೊದಲನೇ ದಿನದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ನರೇಗಾ ಯೋಜನೆಲ್ಲಿ ಈ ಬಾರಿ ಫೇಸ್ ಅಥೇಂಟಿಕೇಷನ್ ಇರುವ ಕಾರಣ ಜಾಬ್ ಕಾರ್ಡ್ ಹೊಂದಿರುವ ಎಲ್ಲಾ ಕೂಲಿಕಾರರು ಇಕೆವೈಸಿ ಮಾಡಿ ಎನ್.ಎಂಆರ್ ತೆಗೆಯಲಾಗಿದೆ. ಎನ್.ಎಂಆರ್ ನಲ್ಲಿ ಯಾರು ಇಕೆವೈಸಿ ಮಾಡಿಸಿಕೊಂಡಿ ಅಂತವರೂ ಕೂಡಾ ಇಕೆವೈಸಿ ಮಾಡಿಸಿಕೊಂಡು ಹಾಜರಾತಿ ಹಾಕಿಸಿ ಕೆಲಸ ಮಾಡುವಂತೆ ಕೂಲಿಕಾರರಿಗೆ ತಿಳಿಸಿದರು.ಕಾಯಕ ಬಂಧುಗಳು ಸರಿಯಾಗಿ ಎರಡು ಹಾಜರಾತಿಯನ್ನು ನಿರ್ವಹಣೆ ಮಾಡಬೇಕು ಎಂದರು

ಯಾವುದೇ ಕೂಲಿಕಾರರು ಹಾಜರಾತಿಯಿಂದ ಹಿಂದೆ ಉಳಿಯದಂತೆ ನೋಡಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಬಂದರೂ ನಮ್ಮ ಸಿಬ್ಬಂದಿಗಳ ಜೊತೆಗೆ ಮಾತಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ ಮಾತನಾಡಿ, ನರೇಗಾ ಯೋಜನೆಯಡಿ ಕೂಲಿಕಾರರ ಹಾಜರಾತಿ ಫೇಸ್ ಅಥೇಂಟಿಕೇಷನ್ ಜಾರಿಗೆ ತರಲಾಗಿದೆ. ಮೊದಲನೇ ಹಾಜರಾತಿ ಒಬ್ಬಬ್ಬರೇ ಮೂಖದ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಎರಡನೇ ಹಾಜರಾತಿ 10 ಜನ ಗುಂಪ್ಪು ತೆಗೆದುಕೊಳ್ಳುತ್ತದೆ. ಹಾಗಾಗಿ ಕೂಲಿಕಾರರು ಎರಡು ಹಾಜರಾತಿ ಹಾಕುವವರಿಗೂ ಕೆಲಸದ ಸ್ಥಳದಲ್ಲಿಯೇ ಇರಬೇಕು ಎಂದರು.

ಹಾಜರಾತಿ ಹಾಕಿಸಿದವರಿಗೆ ಮಾತ್ರ ಕೂಲಿ ಪಾವತಿಯಾಗುತ್ತದೆ. ಹಾಜರಾತಿ ಹಾಕದೇ ಇರುವವರಿಗೆ ಕೂಲಿ ಹಣ ಪಾವತಿಯಾಗುವುದಿಲ್ಲ ಎಂದು ಹೇಳಿದರು.

ನರೇಗಾ ತಾಂತ್ರಿಕ ಸಹಾಯಕ ಅಭಿಯಂತರ ಗುರುನಾಥ ಫಕ್ಕೀರಗೌಡ ಮಾತನಾಡಿ, ಕೂಲಿಕಾರರು 10*5*2 ಪಿಟ್ ಅಳತೆ ಮಾದರಿಯಲ್ಲಿ ಕಟ್ಟೆ (ಪಡ) ಕಡಿದರೆ ನಿಮಗೆ ಪೂರ್ಣ ಪ್ರಮಾಣದ ಕೂಲಿ ಸಿಗುತ್ತದೆ. ಎಲ್ಲರೂ ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ 370 ರೂ. ದೊರಕುತ್ತದೆ. ಆ ನಿಟ್ಟಿನಲ್ಲಿ ಕೂಲಿಕಾರರು ಕೆಲಸ ಮಾಡಲು ತಿಳಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂನಾಬಾಯಿ ನೇಮಪ್ಪ ರಾಠೋಡ ಅಧ್ಯಕ್ಷತೆ ವಹಿಸಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಚನ್ನವ್ವ ಯಂಕಪ್ಪ ಅಜಮೀರ್, ಮುಖಂಡರಾದ ವೀರೇಶ ರಾಠೋಡ, ಕೃಷ್ಣಪ್ಪ ಮಾಳೋತ್ತರ, ಕಳಕಳಕಪ್ಪ ಜನಾಯಿ, ಭೀಮ್ಮಪ್ಪ ಪೂಜಾರ, ಸುರೇಶ ಮಾಳೋತ್ತರ, ಶರಣಪ್ಪ ರಾಠೋಡ, ನಿಂಗನಗೌಡ ಗೌಡ್ರ, ಮುದಕಪ್ಪ ದೊಣೆಗುಡ್ಡ ಸೇರಿದಂತೆ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!