ಪೈಪ್ಲೈನ್ ಅಳವಡಿಕೆ, ಕುಡಿಯುವ ನೀರು ಪೂರೈಕೆಯಲ್ಲಿ ವಿಳಂಬ : ಪರಶುರಾಮ್ ಗುಡದಾರಿ

ವಿಜಯ ಸಿಂಧೂರ, ಲಕ್ಷ್ಮೇಶ್ವರ

ಲಕ್ಷ್ಮೇಶ್ವರ ಪಟ್ಟಣಕ್ಕೆ ಮೇವುಂಡಿ ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿಯ ಕುಡಿಯುವ ನೀರು ಪೂರೈಸುವ ಪೈಪ್ಲೈನ್ ದುರಸ್ತಿ ಕೆಲಸ ಪ್ರಗತಿಯಲ್ಲಿ ಇರುವದರಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಪೂರೈಕೆಯಾಗುವ ಕುಡಿಯುವ ನೀರು ಪೂರೈಸುವಲ್ಲಿ ವಿಳಂಬವಾಗುತ್ತಿದ್ದು ಇಂತಹ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ್ ಗುಡದಾರಿ ಅವರು ಪಟ್ಟಣದ ಸಾರ್ವಜನಿಕರಿಗೆ ತಿಳಿಸಿದ್ದಾರೆ

ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕುರಿತು ಮಾಹಿತಿ ನೀಡಿದ ಅವರು, ಮೆವುಂಡಿಯಿಂದ ಸುರಣಗಿ ನೀರು ಶುದ್ಧೀಕರಣ ಘಟಕಕ್ಕೆ ನೀರು ಪೂರೈಸುವ ಪೈಪುಗಳು
ಹಾಳಾಗಿದ್ದು ಅವುಗಳನ್ನು ತೆಗೆದು ಹೊಸ ಪೈಪ್ ಲೈನ್ ಗಳನ್ನು ಅಳವಡಿಸುವ ಸರಕಾರದ ಅಮೃತ 2,0 -24 -7 ಕುಡಿಯುವ ನೀರು ಪೂರೈಸುವ ಹೊಸ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೆಲಸ ಪ್ರಗತಿಯಲ್ಲಿ ಇರುವ ಕಾರಣ ಕುಡಿಯುವ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ ಎಂದರು

ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಬೋರಿನ ನಲ್ಲಿಗಳು ನಿರಂತರವಾಗಿ ನೀರು ನೀಡುತ್ತಿದ್ದು ಪಟ್ಟಣದ ಜನರು ಈ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಹಾಗೇನಾದರೂ ನೀರಿನ ಅತಿ ಸಮಸ್ಯೆ ಕಂಡು ಬಂದಲ್ಲಿ ಅಂತ ವಾರ್ಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು

ತುಂಗಭದ್ರಾ ಕುಡಿಯುವ ನೀರು ಪೈಪ್ಲೈನ್ ಕೆಲಸ ನಡೆಯುತ್ತಿದ್ದು ಪ್ರತಿದಿನ ನಾವೇ ಕೆಲಸ ನಡೆಯುವ ಸ್ಥಳದಲ್ಲಿ ನಿಂತು ಕಾಮಗಾರಿ ಬೇಗನೆ ಮುಗಿಸಲು ಪ್ರಯತ್ನಿಸುತ್ತಿದ್ದೇವೆ ಪೈಪ್ ಲೈನ್ ಅಳವಡಿಸುವ ಕೆಲಸ ಮುಗಿದ ತಕ್ಷಣ ಪಟ್ಟಣದ ಎಲ್ಲಾ ವಾರ್ಡಿನ ಜನತೆಗೆ ಕುಡಿಯುವ ನೀರು ಪೂರೈಸುತ್ತೇವೆ ಅಲ್ಲಿಯವರೆಗೂ ಪಟ್ಟಣದ ಎಲ್ಲಾ ಸಾರ್ವಜನಿಕರು ಪುರಸಭೆಗೆ ಸಹಕರಿಸಬೇಕು ಎಂದು ಮಾಹಿತಿ ನೀಡಿದ್ದಾರೆ

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!