ವಿಜಯ ಸಿಂಧೂರ ರೋಣ
ತಾಲೂಕಿನ ಹಿರೇಮಣ್ಣೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಮಂಜುನಾಥ ಹೂವಿನಹಾಳ ಅವರು ಸೈನಿಕ ಶಾಲೆಗೆ ಆಯ್ಕೆಯಾಗಿರುವುದು ಶಾಲೆ ಹಾಗೂ ಗ್ರಾಮದ ಹೆಮ್ಮೆಯ ವಿಷಯವಾಗಿದೆ.

ಈ ಸಾಧನೆಯ ಹಿನ್ನೆಲೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ವೈ.ಬಿ. ತಳವಾರ ಅವರು ವಿದ್ಯಾರ್ಥಿನಿಯನ್ನು ಅಭಿನಂದಿಸಿ, ಮುಂದಿನ ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ಮಾಡಲೆಂದು ಹಾರೈಸಿದರು. ಇದೇ ವೇಳೆ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಣುಕಾ ನೀಲಗಾರ ಹಾಗೂ ಶಿಕ್ಷಕಿಯರಾದ ಶ್ರೀಮತಿ ಗೌರಮ್ಮ ಕಮ್ಮಾರ, ರೂಪ ಕುರಿ, ಶೋಭಾ ಪುರಾಣಿಕಮಠ ಅವರು ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದರು.
ವಿದ್ಯಾರ್ಥಿನಿಯ ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಶಾಲೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡಿದೆ ಎಂದು ಶಿಕ್ಷಕ ವೃಂದ ಅಭಿಪ್ರಾಯಪಟ್ಟರು.
