300 ಸಸಿಗಳ ವಿತರಣೆ, ವಿಶಿಷ್ಟ ಪರಿಸರ ದಿನ ಆಚರಣೆ

ವಿಜಯ ಸಿಂಧೂರ ನರಗುಂದ

ಶುಕ್ರವಾರ ಪಟ್ಟಣದ ಮುಗಳಖೋಡ ಮಠದ ಆವರಣದಲ್ಲಿ ಕರ್ನಾಟಕ ಉತ್ತರ ಪ್ರಾಂತ ಭಾರತೀಯ ಕಿಸಾನ ಸಂಘದಿಂದ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಹಲವಾರು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಭಾರತೀಯ ಕಿಸಾನ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಅವರು ಮಾತನಾಡಿ, ಮಠದ ಆವರಣದಲ್ಲಿ ಒಟ್ಟು 25 ಗಿಡಗಳನ್ನು ನೆಡಲಾಯಿತು. ಮತ್ತು ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ 300 ಕ್ಕೂ ಹೆಚ್ಚು ಗಿಡಗಳನ್ನು ಹೊಲದ ಬದುಗಳಲ್ಲಿ ಹಚ್ಚುವಂತೆ ವಿತರಿಸಲಾಯಿತು.

ಪರಿಸರ ಇರುವುದೇ ನಮಗಾಗಿ, ಪರಿಸರ ಇಲ್ಲದಿದ್ದರೆ ನಾವು ಶೂನ್ಯ. ನಮ್ಮಗಳ ಬದುಕು ಪರಿಸರದೊಂದಿಗೆ ಇದೆ. ಹೀಗಾಗಿ ಪರಿಸರವನ್ನು ಕಾಳಜಿ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಎಸ್ ಎಸ್ ಪಾಟೀಲ, ತಾಲೂಕಾಧ್ಯಕ್ಷ ನಾಗೇಶ ಅಪ್ಪೋಜಿ, ಕಾರ್ಯದರ್ಶಿ ಮುತ್ತು ಯಲಿಗಾರ, ಯೋಗೇಶ ಗುಡಾರದ, ಸಂಜು ನಲವಡಿ, ವಿಠ್ಠಲ ಮುಧೋಳೆ, ಹಾಗೂ ತಾಲೂಕಿನ ರೈತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!