ಮಹಾತ್ಮ ಗಾಂಧಿ ನರೇಗಾ ಕಾಮಗಾರಿ ಸ್ಥಳದಲ್ಲಿ ವಿಶ್ವ ಪರಿಸರ ದಿನ

ವಿಜಯ ಸಿಂಧೂರ, ಸಿಂದಗಿ

ತಾಲೂಕಿನ ಹಿಕ್ಕನಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಬಲೇಶ್ವರ ಗ್ರಾಮದಲ್ಲಿರುವ ಅಮೃತ ಸರೋವರದಲ್ಲಿ ಮಹಾತ್ಮ ಗಾಂಧಿ ನರೇಗಾ ಅಡಿ ಹೂಳು ತೆಗೆಯುವ ಕಾಮಗಾರಿ ಸ್ಥಳದಲ್ಲಿ ಶ್ರೀ ರಾಮು ಜಿ ಅಗ್ನಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರ ಅದ್ಯಕ್ಷತೆಯಲ್ಲಿ ವಿಶ್ವ ಪರಿಸರ ದಿನ ವನ್ನು ಸಸಿ ನೆಡುವದರ ಮೂಲಕ ಆಚರಿಸಲಾಯಿತು.


ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ವರ್ಷ ಜೂನ್ 5 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ ವಿಶ್ವ ಪರಿಸರ ದಿನ: ಬಹುಗುಣ–ತಿಮ್ಮಕ್ಕ… ಹಸಿರನ್ನೇ ಉಸಿರು ಎಂದವರು.
ಆಚರಣೆಯ ಉದ್ದೇಶವೆಂದರೆ ಮಾಲಿನ್ಯ ತಡೆಗಟ್ಟುವುದು, ಗಿಡ-ಮರಗಳನ್ನು ಬೆಳೆಸುವುದು ಮತ್ತು ಹವಾಮಾನ ಬದಲಾವಣೆ ವಿರುದ್ಧ ಜಾಗೃತಿ ಮೂಡಿಸುವುದು. ಏಕೆ ಆಚರಿಸಬೇಕು ಎಂದರೆ ಗಾಳಿ, ನೀರು ಮತ್ತು ಆಹಾರಕ್ಕಾಗಿ ನಾವು ಸಂಪೂರ್ಣವಾಗಿ ಪರಿಸರವನ್ನು ಅವಲಂಬಿಸಿದ್ದೇವೆ ಇದರ ಮಹತ್ವ ನೋಡಿದಾಗ ದುರಾಸೆಗೆ ಕಡಿವಾಣ ಆಧುನಿಕ ಬದುಕಿನಿಂದ ಪರಿಸರಕ್ಕೆ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಲು ಇದು ನೆನಪಿಸುತ್ತದೆ.
ಕರ್ನಾಟಕದ ಹೆಮ್ಮೆ ಸಾಲುಮರದ ತಿಮ್ಮಕ್ಕನವರು ನೂರಾರು ಆಲದ ಮರಗಳನ್ನು ಮಕ್ಕಳಂತೆ ಬೆಳೆಸಿ ಇಡೀ ಜಗತ್ತಿಗೆ ಪರಿಸರ ಕಾಳಜಿಯ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶ್ರೀ ಸಂತೋಷ ಆಲಹಳ್ಳಿ, ಐಇಸಿ ಸಂಯೋಜಕರು ಭೀಮರಾಯ ಚೌಧರಿ, ಬಿಲ್ ಕಲೆಕ್ಟರ್ ಪ್ರಕಾಶ್, DEO ಭಾರತಿ ಮತ್ತು ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!