ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ

ವಿಜಯ ಸಿಂಧೂರ,ತಾಳಿಕೋಟೆ

ಶ್ರೀ ಎಸ್.ಎಸ್. ವಿದ್ಯಾಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಚ್.ಎಸ್. ಪಾಟೀಲ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2026–2027ನೇ ಶೈಕ್ಷಣಿಕ ಸಾಲಿನ ಅಂಗವಾಗಿ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಚ್.ಎಸ್. ಪಾಟೀಲರು ಉದ್ಘಾಟಿಸಿ, ಹೊಸ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳನ್ನು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಯುವ ಕಣ್ಮಣಿ ಸಚಿನ್ ಎಚ್. ಪಾಟೀಲರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳಾದ ಉಮೇಶ್ ಜಿ. ಅಬ್ಬಿಗೇರಿ, ಸುರೇಶ್ ದೊಡ್ಡಮನಿ, ಕುಮಾರಿ ರಶ್ಮಿ ಕಟ್ಟಿಮನಿ, ಶ್ರೀಮತಿ ಕಾವ್ಯ ಅಂಗಡಿ, ಶ್ರೀಮತಿ ಸುಕನ್ಯಾ ಜೈನಾಪೂರ, ಶ್ರೀಮತಿ ಸುಜಾತಾ ಸಿಂಧಗಿ, ಕುಮಾರಿ ಸೃಷ್ಟಿ ವಿ. ಪಾಟೀಲ, ದುಶಿಂಗ ಪೂಜಾರಿ, ಶ್ರೀಮತಿ ಶೃತಿ ಬಡಿಗೇರ ಹಾಗೂ ಶ್ರೀಮತಿ ನಂದಿನಿ ಚಟ್ಟೇರ ಅವರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ, ಸಿಹಿ ವಿತರಣೆ ಮೂಲಕ ಹಾರ್ದಿಕವಾಗಿ ಬರಮಾಡಿಕೊಂಡರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹರ್ಷಭರಿತವಾಗಿ ಭಾಗವಹಿಸಿ, ಶಾಲೆಯ ಮೊದಲ ದಿನವನ್ನು ಹಬ್ಬದ ವಾತಾವರಣದಲ್ಲಿ ಆಚರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!