ವಿಜಯ ಸಿಂಧೂರ, ಗಂಗಾವತಿ
ಏಕಾಏಕಿ ತನ್ನ ಸಂತಃ ಅಕ್ಕನ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ವಿದ್ಯಾರ್ಥಿ, ದಾಳಿ ತಡೆಯಲು ಮುಂದಾದ ತಂದೆ- ತಾಯಿ ಮೇಲೆಯೂ ದಾಳಿ ಮಾಡಿದ್ದಾನೆ. ಕೊನೆಗೆ ತನಗೆ ತಾನೇ ಚಾಕು ಇರಿದುಕೊಂಡಿರುವ ಘಟನೆ ಗಂಗಾವತಿ ತಾಲೂಕು ಹಳೇ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಆನ್ ಗೇಮ್ ನಿಂದ ಪ್ರೇರಣೆಗೊಂಡು ಕೃತ್ಯ ಎಸಗಿದ ಶಂಕೆ ವ್ಯಕ್ತವಾಗಿದೆ.ಪಿಯುಸಿ 2ನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ಸಾಯಿ ವೆಂಕಟಮಣಿ ದೀಪ (18) ಕೃತ್ಯ ಎಸಗಿ, ತಾನು ಹಲ್ಲೆ ಮಾಡಿಕೊಂಡಿರುವ ಯುವಕ. ಚಾಲುವಿನಿಂದ ಹಲ್ಲೆಗೆ ಒಳಗಾದ ಆರೋಪಿಯ ಅಕ್ಕ ಪ್ರಗತಿ(19) ಸ್ಥಳದಲ್ಲೇ ಮತಪಟ್ಟಿದ್ದಾಳೆ.
ಹಲ್ಲೆ ತಡೆಯಲು ಮುಂದಾಗಿದ್ದ ತಂದೆ ವೆಂಕಟ ನಾಯ್ಡು ಸಾವು(45) ಚಿಕಿತ್ಸೆ ಫಲಕಾರಿಯಾಗದೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಾಯಿ ಸೌಜನ್ಯ(40) ಗಂಭೀರವಾಗಿ ಗಾಯಗೊಂಡಿದ್ದು, ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
