ವಿಜಯ ಸಿಂಧೂರ, ಸಿಂದಗಿ
ಪಟ್ಪ್ರಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಸಭೆಯಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಡಾ. ಅಂಬೇಡ್ಕರ್ ಸಮಾಜ ವಿಕಾಸ ಸಂಸ್ಥೆ ಗೆ ದಿವಂಗತ ಮಹಾದೇವಪ್ಪ ಚೌರ ಇವರ ನಿಧನದಿಂದ ತೆರವಾಗಿದ್ದ ಸಂಸ್ಥೆಗೆ ಜೈ ಭೀಮ ನಗರದ ಹಿರಿಯರಾದ ಸಂಗಪ್ಪ ಕೂಚಬಾಳ ಇವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಖಜಾಂಚಿ ಮಲ್ಲಪ್ಪ ಸುಲ್ಪಿ, ಸದಸ್ಯರಾದ ಚಂದಪ್ಪ ಜಾಬಾನವರ, ಶ್ರೀಮಂತ ಚೌರ, ನಿಂಗಪ್ಪ ಸುಲ್ಪಿ, ಬಸವರಾಜ ಕೂಚಬಾಳ, ಜಗು ಬಡಿಗೇರ, ಶಿವಶರಣ ಬಿಸನಾಳ, ಹಿರಿಯರಾದ ವಿಠ್ಠಲ ಹೊಸಮನಿ, ಸೋಮಣ್ಣ ಸುಲ್ಪಿ, ಚಂದಪ್ಪ ಸರವಂದಿ, ಶಿವಪ್ಪ ಸುಲ್ಪಿ ಹಾಗೂ ಇನ್ನಿತರರು ಇದ್ದರು.
