ವಿಜಯ ಸಿಂಧೂರ,ಗದಗ
ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ನಗರದಲ್ಲಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಸೋಮವಾರ ಉರುಳು ಸೇವೆ ಹಾಗೂ ದೀಡ್ ನಮಸ್ಕಾರ ಮಾಡಿದರು.

ನಗರದ ಪುಟ್ಟರಾಜ ಗವಾಯಿ ಪ್ರತಿಮೆಯಿಂದ ಪುಟ್ಟರಾಜ ಗವಾಯಿ ಮಠದವರೆಗೆ ಮೆರವಣಿಗೆ ಉರುಳು ಸೇವೆ ನಡೆಯಿತು. ಜಿ.ಎಸ್. ಪಾಟೀಲರ ಪರ ಫಲಕಗಳನ್ನು ಪ್ರದರ್ಶಿಸಲಾಯಿತು. ಅವರ ಪರ ಘೋಷಣೆ ಕೂಗಲಾಯಿತು.ಜಿ.ಎಸ್. ಪಾಟೀಲರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಆದ್ಯತೆ ನೀಡಿ, ಸಚಿವ ಸ್ಥಾನ ನೀಡಬೇಕೆಂದು ಮುಖಂಡರು, ಕಾರ್ಯಕರ್ತರು ಆಗ್ರಹಿಸಿದರು. ಮೆರವಣಿಗೆಯಲ್ಲಿ ರೋಣ ಮತಕ್ಷೇತ್ರದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.
